ಕಲಬುರಗಿ: ಅಂಗವಿಕಲ ನೌಕರರಿಗೆ ಮುಂಬಡ್ತಿಯಲ್ಲಿ ಮೀಸಲಾತಿ ನೀಡುವ ವಿಷಯದಲ್ಲಿ ಇತ್ತಿಚೆಗೆ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ಆದೇಶದ ಪ್ರಕಾರ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯಿದೆ, 2016ರ ಸೆಕ್ಷನ್ 34ರ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇನ್ನೂ 4 ತಿಂಗಳ ಒಳಗಾಗಿ ತನ್ನ ಎಲ್ಲಾ ಇಲಾಖೆಗಳಲ್ಲಿ ಮುಂಬಡ್ತಿ ಮೀಸಲಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಆದೇಶಿಸಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಅರ್ಹ ದಿವ್ಯಾಂಗ ನೌಕರರಿಗೆ ಕೂಡಲೇ ಮುಂಬಡ್ತಿಯಲ್ಲಿ ಮೀಸಲಾತಿ ನೀಡಬೇಕೆಂದು ಡಿಸೆಬಲ್ಡ ಹೆಲ್ಪಲೈನ್ ಪೌಂಡೆಶನನ ರಾಜ್ಯ ಸಂಯೋಜಕ ಬಸವರಾಜ ಹೆಳವರ ಯಾಳಗಿ ಆಗ್ರಹಿಸಿದ್ದಾರೆ