ಎನ್‌ಪಿಎಸ್ ದಿನಾಚರಣೆ ರದ್ದತಿಗೆ ಜವಳಿ ಆಗ್ರಹ

0
18

ಕಲಬುರಗಿ: ಖಜಾನೆ ಆಯುಕ್ತರು ಅಕ್ಟೋಬರ್ ೧ ನ್ನು ಎನ್‌ಪಿಎಸ್ ದಿನ ಎಂದು ಆಚರಿಸಲು ಆದೇಶ ಮಾಡಿರುವುದನ್ನು ಕೂಡಲೇ ಹಿಂಪಡೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಧರ್ಮರಾಜ ಜವಳಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಏಪ್ರೀಲ್ ೨೦೦೬ರ ನಂತರ ರಾಜ್ಯ ಸರ್ಕಾರಿ ನೌಕರಿಗೆ ಸೇರಿದ ಸುಮಾರು ೩ ಲಕ್ಷ ೩೫ ಸಾವಿರ ನೌಕರರ ಪಿಂಚಣಿಯಿಂದ ವಂಚಿತರಾಗಿದ್ದು, ನಿವೃತ್ತ ನಂತರ ಇವರಿಗೆ ಪಿಂಚಣಿ ಇರುವುದಿಲ್ಲ. ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶಾಂತಾರಾಮ ತೇಜ್ ಅವರ ನೇತೃತ್ವದಲ್ಲಿ ಸುಮಾರು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೆವೆ.ಪ್ರೀಡಂ ಪಾರ್ಕ್ ಚಲೋ,ಬೆಳಗಾವಿ ಸುವರ್ಣಸೌಧ ಚಲೋ, ರಕ್ತ ಕೊಟ್ಟೆವು ಪಿಂಚಣಿ ಬಿಡೆವು. ಹೀಗೆ ಹಲವಾರು ಬಾರಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಖಜಾನೆ ಇಲಾಖೆಯು ಅಕ್ಟೋಬರ್ ೧ ರಂದ್ದು ಎನ್‌ಪಿಎಸ್ ದಿನಾಚರಣೆ ಘೋಷಣೆ ಮಾಡಿರುವುದು ಖಂಡನೀಯವಾಗಿದೆ ಎಂದು ಧರ್ಮರಾಜ ಜವಳಿ ತಿಳಿಸಿದ್ದಾರೆ.

Contact Your\'s Advertisement; 9902492681

ಎನ್‌ಪಿಎಸ್ ಆಚರಣೆಗೆ ಆದೇಶ ನೀಡಿದ ಖಜಾನೆ ಆಯುಕ್ತಾಲಯದಿಂದ ಶೀಘ್ರ ಈ ಆದೇಶವನ್ನು ರದ್ದುಪಡಿಸದಿದ್ದರೇ ಮುಂಬರುವ ದಿನಗಳಲ್ಲಿ ವಿವಿಧ ರೀತಿಗಳಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here