ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

0
46

ಯಾದಗಿರಿ: ಪ್ರತೀಕ್ಷಾ ಸೇವಾ ಸಂಸ್ಥೆ ವಡಗೇರಿ ತಾಲೂಕಿನ ತಡಿಬಿಡಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಪ್ರತೀಕ್ಷಾ ಸೇವಾ ಸಂಸ್ಥೆ ಯಾದಗಿರಿ ವತಿಯಿಂದ ರಾಷ್ಟ್ರಪಿತ ಮಹತ್ಮಾ ಗಾಂಧಿಜೀ ಹಾಗೂ ಮಾಜಿ ಪ್ರಧಾನಿಗಳಾದ ಲಾಲಬಹದ್ದೂರ ಶಾಸ್ತ್ರೀಜಿ ಜಯಂತ್ಯೋತ್ಸವದ ಅಂಗವಾಗಿ ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶಾಲೆಯ ವಿದ್ಯಾರ್ಥಿನಿಯರಾದ ಭಾಗ್ಯ, ಭೀಮಬಾಯಿ ಪ್ರಾರ್ಥನಾಗೀತೆ ಹಾಡುವ ಮೂಲಕ ಸ್ವಾಗತಿಸಿದರು. ಸರಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ಸ್ವಚ್ಛ ಭಾರತದ ಅಭಿಯಾನದ ಕುರಿತು ಸ್ಪರ್ಧೆಗಳು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರತೀಕ್ಷಾ ಸೇವಾ ಸಂಸ್ಥೆ ವತಿಯಿಂದ ನೋಟ್ ಬುಕ, ಪೆನ್, ಪ್ರಶಸ್ತಿ ಪತ್ರ ವಿತರಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪ್ರತೀಕ್ಷಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ಸಿದ್ದು ಪಾಟೀಲ ಇವರು, ನಾವೂಗಳು ಗಾಂಧಿಜೀಯವರ ತತ್ವ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು. ಹಾಗೂ ಲಾಲಬಹದ್ದೂರ ಶಾಸ್ತ್ರೀಜಿಯವರ ಜೀವನದ ಕಥೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಓದಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.

ಮತ್ತೊಬ್ಬ ಅತಿಥಿಗಳಾದ ಶರಣ ಸೇವಾ ಸಂಸ್ಥೆ ಅಧ್ಯಕ್ಷರಾದ ಶಿವರಾಜ ಕಲಕೇರಿಯವರು ಮಾತನಾಡಿ ನಾವೂಗಳು ಪ್ರತಿ ವರ್ಷ ಸ್ವಚ್ಛ ಭಾರತ ಅಭಿಯಾನವನ್ನು ಮಾಡುತ್ತೀದ್ದು ನಾವೂ ದಿನನಿತ್ಯ ನಮ್ಮ ಸುತ್ತಮುತ್ತಲ್ಲಿನ ಕ್ರೀಡಾಂಗಣ ಹಾಗೂ ಮನೆಯ ಸುತ್ತಲೂ ಯಾವುದೇ ಕೊಳಚೆಯನ್ನು, ಕಸವನ್ನು ಒಂದು ಕಡೆ ಸೇರಿಸಿದ್ದಾಗ ಅಲ್ಲಿರುವ ಸುತ್ತಮುತ್ತಲ್ಲಿನ ವಾತವರಣವೂ ಸ್ವಚ್ಛ ಇರುತ್ತದೆ. ಇದರಿಂದ ಪರಿಸರ ಸಂರಕ್ಷಣೆ ಕೂಡ ಮಾಡಬಹುದು ಎಂದು ಹೇಳಿದರು. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವನೀಡಿ ಹಾಗೂ ಸ್ವಚ್ಛತೆಗೂ ಸಹಿತ ಮಹತ್ವನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರುಳಾದ ಶ್ರೀ ಎನ್.ಎಂ.ಕಾಶಿನಾಥ ಶಾಸ್ತ್ರಿ, ಎಸ.ಡಿ.ಎಮ.ಸಿ.ಅಧ್ಯಕ್ಷರಾದ ಹೊನ್ನಪ್ಪ ಧಳಪತಿ, ದೇವಿಂದ್ರಪ್ಪ ಡಿ.ಸಗರ ಗ್ರಾಮ ಪಂ.ಕಾರ್ಯದರ್ಶಿ ,ರವಿಕುಮಾರ ದೇವರಮನಿ, ಶರಣು ಇಡ್ಲೂರ, ಈರಣ್ಣ ಸಾಹುಕಾರ, ಪವನ ಸಾಹುಕಾರ, ಶಿವು ವಿಶ್ವಕರ್ಮ, ನಿಂಗಣ್ಣ ತಡಿಬಿಡಿ, ಶಿಕ್ಷಕರಾದ ಶ್ರೀಶೈಲ ಪಾಟೀಲ,ಕನಕಪ್ಪ ಸಹಶಿಕ್ಷಕರು ಹಾಗೂ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ನಾಗಭೂಷಣ ಯಾಳಗಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here