ಡೇಶ್ವರಿಹಾಳ ಗ್ರಾಮದ ಘಟನೆ ಖಂಡಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

0
18

ಸುರಪುರ: ಚೌಡೇಶ್ವರಿಹಾಳ ಗ್ರಾಮದಲ್ಲಿ ಭಾನುವಾರ ರಾತ್ರಿ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆಯನ್ನು ಖಂಡಿಸಿ ಮತ್ತು ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ದಲಿತ ಸಂಘಟನೆಗಳ ಮುಖಂಡರು ಸುರಪುರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ:ಸಿ.ಬಿ.ವೇದಮೂರ್ತಿಯವರು ಭೇಟಿ ನೀಡಿ ಪ್ರತಿಭಟನೆಯನ್ನು ನಿಲ್ಲಿಸಲು ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು,ಗ್ರಾಮೀಣ ಪ್ರದೇಶದಲ್ಲಿ ನಮ್ಮ ದಲಿತ ಸಮುದಾಯದ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ.ನಿತ್ಯವು ಮಹಿಳೆಯರ ಮೇಲೆ ಇಂತಹ ಘಟನೆಗಳು ಜರಗುತ್ತಿವೆ.ಇದಕ್ಕೆ ಉದಾಹರಣೆ ಎಂದರೆ ಚೌಡೇಶ್ವರಿಹಾಳ ಗ್ರಾಮದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿದೆ.

Contact Your\'s Advertisement; 9902492681

ಈ ಘಟನೆಗೆ ಕಾರಣರಾದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು,ಗ್ರಾಮದಲ್ಲಿನ ನಮ್ಮ ಸಮುದಾಯದ ಜನರಿಗೆ ರಕ್ಷಣೆ ನೀಡಬೇಕು,ಮಹಿಳೆಯ ಸಾವಿಗೆ ಪರಿಹಾರ ನೀಡಬೇಕು,ಗ್ರಾಮೀಣ ಪ್ರದೇಶದಲ್ಲಿನ ಅಸ್ಪಶ್ಯತೆಯನ್ನು ನಿವಾರಣೆ ಮಾಡಬೇಕು.ಮುಖ್ಯವಾಗಿ ನಾಳೆ ಸಂಜೆಯ ಒಳಗಾಗಿ ಆರೋಪಿಗಳನ್ನು ಬಂಧಿಸಬೇಕು,ಅಲ್ಲಿಯವರೆಗೂ ಮೃತಪಟ್ಟಿರುವ ಮಹಿಳೆಯ ಶವಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ವೇದಮೂರ್ತಿಯವರು,ತಾವು ಹೇಳಿದಂತೆ ನಾಳೆ ಸಂಜೆಯ ಒಳಗಾಗಿ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದರು.ಅಲ್ಲದೆ ಅಲ್ಲಿಯ ಜನರಿಗೆ ರಕ್ಷಣೆ ನೀಡಲಾಗುವುದು,ಮುಂದೆ ಈ ರೀತಿಯ ಘಟನೆ ಜರುಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೇಕ್ಟರ್ ಸುನೀಲಕುಮಾರ ಮೂಲಿಮನಿ,ಪಿಎಸ್‍ಐ ಕೃಷ್ಣಾ ಸುಬೇದಾರ ಹಾಗು ಹೋರಾಟಗಾರರಾದ ನಂದಣ್ಣ ಬಾಂಬೇಕರ್ ಕನ್ನೆಳ್ಳಿ,ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ,ಭೀಮಣ್ಣ ದೀವಳಗುಡ್ಡ,ಮಾನಪ್ಪ ಹುಲಕಲ್,ಬಸವರಾಜ ಮುಷ್ಠಳ್ಳಿ,ಮಲ್ಲಿಕಾರ್ಜುನ ಲಕ್ಷ್ಮೀಪುರ,ನಿಂಗಣ್ಣ ಬುಡ್ಡಾ,ಬಸವರಾಜ ಸೂಗುರು,ಬಸವರಾಜ ಮುಷ್ಠಳ್ಳಿ,ಬಸವರಾಜ ಕೊಂಗಂಡಿ,ಭೀಮಣ್ಣ ಲಕಡಿಮನಿ,ನಾಗರಾಜ ಓಕಳಿ,ರಾಮು ಪಾಳದಕೇರಾ ಸೇರಿದಂತೆ ಇನ್ನೂ ಅನೇಕರು ಪ್ರತಿಭಟನೆಯಲ್ಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here