ಸುರಪುರ: ಚೌಡೇಶ್ವರಿಹಾಳ ಗ್ರಾಮದಲ್ಲಿ ಭಾನುವಾರ ರಾತ್ರಿ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆಯನ್ನು ಖಂಡಿಸಿ ಮತ್ತು ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ದಲಿತ ಸಂಘಟನೆಗಳ ಮುಖಂಡರು ಸುರಪುರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ:ಸಿ.ಬಿ.ವೇದಮೂರ್ತಿಯವರು ಭೇಟಿ ನೀಡಿ ಪ್ರತಿಭಟನೆಯನ್ನು ನಿಲ್ಲಿಸಲು ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು,ಗ್ರಾಮೀಣ ಪ್ರದೇಶದಲ್ಲಿ ನಮ್ಮ ದಲಿತ ಸಮುದಾಯದ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ.ನಿತ್ಯವು ಮಹಿಳೆಯರ ಮೇಲೆ ಇಂತಹ ಘಟನೆಗಳು ಜರಗುತ್ತಿವೆ.ಇದಕ್ಕೆ ಉದಾಹರಣೆ ಎಂದರೆ ಚೌಡೇಶ್ವರಿಹಾಳ ಗ್ರಾಮದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿದೆ.
ಈ ಘಟನೆಗೆ ಕಾರಣರಾದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು,ಗ್ರಾಮದಲ್ಲಿನ ನಮ್ಮ ಸಮುದಾಯದ ಜನರಿಗೆ ರಕ್ಷಣೆ ನೀಡಬೇಕು,ಮಹಿಳೆಯ ಸಾವಿಗೆ ಪರಿಹಾರ ನೀಡಬೇಕು,ಗ್ರಾಮೀಣ ಪ್ರದೇಶದಲ್ಲಿನ ಅಸ್ಪಶ್ಯತೆಯನ್ನು ನಿವಾರಣೆ ಮಾಡಬೇಕು.ಮುಖ್ಯವಾಗಿ ನಾಳೆ ಸಂಜೆಯ ಒಳಗಾಗಿ ಆರೋಪಿಗಳನ್ನು ಬಂಧಿಸಬೇಕು,ಅಲ್ಲಿಯವರೆಗೂ ಮೃತಪಟ್ಟಿರುವ ಮಹಿಳೆಯ ಶವಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ವೇದಮೂರ್ತಿಯವರು,ತಾವು ಹೇಳಿದಂತೆ ನಾಳೆ ಸಂಜೆಯ ಒಳಗಾಗಿ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದರು.ಅಲ್ಲದೆ ಅಲ್ಲಿಯ ಜನರಿಗೆ ರಕ್ಷಣೆ ನೀಡಲಾಗುವುದು,ಮುಂದೆ ಈ ರೀತಿಯ ಘಟನೆ ಜರುಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೇಕ್ಟರ್ ಸುನೀಲಕುಮಾರ ಮೂಲಿಮನಿ,ಪಿಎಸ್‍ಐ ಕೃಷ್ಣಾ ಸುಬೇದಾರ ಹಾಗು ಹೋರಾಟಗಾರರಾದ ನಂದಣ್ಣ ಬಾಂಬೇಕರ್ ಕನ್ನೆಳ್ಳಿ,ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ,ಭೀಮಣ್ಣ ದೀವಳಗುಡ್ಡ,ಮಾನಪ್ಪ ಹುಲಕಲ್,ಬಸವರಾಜ ಮುಷ್ಠಳ್ಳಿ,ಮಲ್ಲಿಕಾರ್ಜುನ ಲಕ್ಷ್ಮೀಪುರ,ನಿಂಗಣ್ಣ ಬುಡ್ಡಾ,ಬಸವರಾಜ ಸೂಗುರು,ಬಸವರಾಜ ಮುಷ್ಠಳ್ಳಿ,ಬಸವರಾಜ ಕೊಂಗಂಡಿ,ಭೀಮಣ್ಣ ಲಕಡಿಮನಿ,ನಾಗರಾಜ ಓಕಳಿ,ರಾಮು ಪಾಳದಕೇರಾ ಸೇರಿದಂತೆ ಇನ್ನೂ ಅನೇಕರು ಪ್ರತಿಭಟನೆಯಲ್ಲಿದ್ದರು.