ಶಹಾಬಾದ:ತಾಲೂಕಿನ ಭಂಕೂರ ಗ್ರಾಮದ ಬೂತ್ ನಂಬರ್ 55 ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಗೌಳಿ ಅವರ ಮನೆಗೆ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕರ್ಣಿಕ್ ಅವರು ಗುರುವಾರ ಬೇಟಿ ನೀಡಿ ಅಧ್ಯಕ್ಷರ ನಾಮ ಫಲಕ ವಿತರಿಸಲಾಯಿತು.
ಈ ಸಂದರ್ಭದಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕರ್ಣಿಕ್, ಪಕ್ಷ ಬಲಿಷ್ಠಗೊಳ್ಳಬೇಕಾದರೆ ಬೂತ್ ಮಟ್ಟದಿಂದಲೇ ಗಟ್ಟಿಗೊಳ್ಳಬೇಕು.ಆದ್ದರಿಂದ ಪ್ರಧಾನಿ ಮೋದಿಯವರು ಮೇರಾ ಬೂತ್ ಸಬಸೇ ಮಜಬೂತ್ ಎಂಬ ಸಂಕಲ್ಪದಿಂದ ಬೂತ್ ಮಟ್ಟದ ಅಧ್ಯಕ್ಷರಿಗೆ ಪಕ್ಷದ ವತಿಯಿಂದ ನಾಮಫಲಕವನ್ನು ವಿತರಿಸುತ್ತಿದೆ. ಬೂತ್ ಅಧ್ಯಕ್ಷರು ಪಕ್ಷ ನೀಡಿದ ಸ್ಥಾನಮಾನವನ್ನು ಅರಿತು ಪಕ್ಷದ ಸಂಘಟನೆಯತ್ತ ಮುಖಮಾಡಿ ಬಲಿಷ್ಠಗೊಳಿಸಬೇಕು. ಅಲ್ಲದೇ ಹೊಸಬರನ್ನು ಪಕ್ಷದಲ್ಲಿ ಸೇರ್ಪಡೆಗೊಳಿಸಬೇಕು. ಮುಂಬರು ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ತಮ್ಮ ಪರಿಶ್ರಮ ಬಹಳಷ್ಟಿದೆ.ಆದ್ದರಿಂದ ಪಕ್ಷದ ಸಂಘಟನೆಯತ್ತ ಮುಂದಾಗಬೇಕೆಂದು ಹೇಳಿದರು.
ಚಿತ್ತಾಪೂರ ಮಂಡಲ ಅಧ್ಯಕ್ಷ ನೀಲಕಂಠ ಪಾಟೀಲ, ಸಂಚಾಲಕರಾದ ನಿಂಗರಾಜ ಬಿರಾದಾರ, ಭಂಕೂರ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಲ್ಲಾಲಿಂಗ ಪೂಜಾರಿ, ಮಲ್ಲಿಕಾರ್ಜುನ ಶಿರಗೊಂಡ, ಸಂತೋಷ ಕಲಶೆಟ್ಟಿ, ಚಂದ್ರಕಾಂತ ಚನ್ನೂರ,ಸುಶೀಲಕುಮಾರ ಇತರರು ಇದ್ದರು.