ಕಲಬುರಗಿ: ಹಿಂದೂಗಳಿಗೆ ನವರಾತ್ರಿ ಅತ್ಯಂತ ಸಂಭ್ರಮ ಸಡಗರದ ಹಬ್ಬ. ದಸರಾ ಉತ್ಸವದ ಆಚರಣೆಯ ಒಂದು ಅಂಗ ನವರಾತ್ರಿ, ಶರನ್ನವರಾತ್ರಿ ಎಂತಲೂ ಕರೆಯುತ್ತಾರೆ. ದುರ್ಗಾದೇವಿಯನ್ನು ಒಂದೊಂದು ದಿನ 9 ರೂಪಗಳಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. 10 ನೇ ದಿನ ವಿಜಯ ದಶಮಿಯನ್ನು ಆಚರಿಸಲಾಗುತ್ತದೆ. ನವರಾತ್ರಿ ಪೂಜೆ ಮಾಡಿದರೇ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆ ಇದೆ.
ನಗರದ ಆಳಂದ ರಸ್ತೆಯಲ್ಲಿರುವ ಕೆ.ಎಚ್.ಬಿ ಗ್ರಿನ್ ಪಾರ್ಕ್ ಬಡಾವಣೆಯ ದಕ್ಷಿಣ ಮುಖಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮಹಾನವಮಿ ಪ್ರಯುಕ್ತ ಜೈ ಭವಾನಿ ಮಹಿಳಾ ಸಂಘ ಹಾಗೂ ಜೈ ಭವಾನಿ ಯುವಕ ಸಂಘದ ವತಿಯಿಂದ ಒಂಬತ್ತು ದಿನಗಳ ಕಾಲ ನವರಾತ್ರಿ ಉತ್ಸವ ದಾಂಡಿಯಾ ಕಾರ್ಯಕ್ರಮ ಜರುಗಲಿದೆ. ಪ್ರತಿನಿತ್ಯ ಬಡಾವಣೆಯ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಕೆ.ಎಚ್.ಬಿ ಗ್ರೀನ್ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಡಿ.ವಿ ಕುಲಕರ್ಣಿ, ಚಂದ್ರಕಾಂತ ತಳವಾರ, ಬಾಲಕೃಷ್ಣ ಕುಲಕರ್ಣಿ, ಶ್ರೀನಿವಾಸ ಬುಜ್ಜಿ, ಶಿವಕಾಂತ ಚಿಮ್ಮಾ, ವಿರೇಶ ಬೋಳಶೆಟ್ಟಿ, ಅನಿತಾ ಡಿ. ಬಕರೆ, ಲಕ್ಷ್ಮೀ ಎ. ಭೊವಿ, ಜ್ಯೋತಿ ಎಸ್. ಶೆಟ್ಟಿ, ಸಂಗಮೇಶ್ವರ ಸರಡಗಿ, ಸೂರ್ಯಕಾಂತ ಸಾವಳಗಿ, ಖಂಡೆರಾವ ಕುಲಕರ್ಣಿ, ವಿನೋದ ಪಡನೂರ, ರಾಜೇಶ ನಾಗಬುಜಂಗೆ, ರಮೇಶ ಬಸ್ಕಾವರೆ, ನರಸಿಂಗ ಕಟಕೆ, ಬಡಾವಣೆಯ ಹಿರಿಯರು, ಮಕ್ಕಳು ಹಾಗೂ ಯುವಕರು ಭಾಗವಹಿಸಿದ್ದರು.