ದೇಶದಲ್ಲೇ ಮೊದಲ ಬಾರಿಗೆ ಅಪಾರ್ಟ್‌ಮೆಂಟ್‌ನಲ್ಲಿ 20 ಪ್ರಮುಖ ಆರೋಗ್ಯ ಸೇವೆ ಒದಗಿಸುವ “ಹೆಚ್‌ ಪಾಡ್‌” 

0
23

•ಗೋಲ್ಡನ್‌ ಹವರ್‌ ಉಳಿಸುವ ಬಿಪಿ, ಇಸಿಜಿ, ಎಸ್‌ಪಿಓ೨ ನಂತಹ 20 ಪರೀಕ್ಷೆ
•ಟೆಲಿಮೆಡಿಸಿನ್‌ ಮೂಲಕ ವೈದ್ಯರ ಸಮಾಲೋಚನೆಗೂ ಅವಕಾಶ
•ಆನ್‌ಲೈನ್‌ ನಲ್ಲೇ ಔಷದ ತರಿಸಿಕೊಳ್ಳುವ ಮತ್ತು ಆಂಬ್ಯಲೆನ್ಸ್‌ ಕಳುಹಿಸುವ ವ್ಯವಸ್ಥೆ

ಬೆಂಗಳೂರು: ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿರುವ ಅಪಾರ್ಟ್‌ಮೆಂಟ್‌ ಗಳಿಂದ ಸುಲಭವಾಗಿ ವೈದ್ಯಕೀಯ ವ್ಯವಸ್ಥೆ ಹೊಂದಿರುವ ಆಸ್ಪತ್ರೆಗಳಿಗೆ ತಲುಪುವುದು ಬಹಳ ಕಷ್ಟವೇ ಸರಿ. ಅಲ್ಲದೆ, ಪ್ರತಿಯೊಂದು ಸಣ್ಣ ಸಣ್ಣ ಪರೀಕ್ಷೆಗಳಾದ ಇಸಿಜಿ, ಬಿಪಿ, ಬಿಎಂಐ ನಂತಹ ಹಲವಾರು ವಿಷಯಗಳಿಗೆ ಪ್ರತಿಬಾರಿ ಆಸ್ಪತ್ರೆಗಳು ಅಥವಾ ಕ್ಲೀನಿಕ್‌ ಗೆ ಎಡತಾಕುವುದನ್ನು ತಪ್ಪಿಸುವ ಉದ್ದೇಶದಿಂದ ದೇಶದಲ್ಲೇ ಮೊದಲ ಬಾರಿಗೆ ಐಎಚ್‌ಎಲ್‌ ಕೇರ್‌, ಇಂಡಿಯಾ ಹೆಲ್ತ್‌ ಲಿಂಕ್‌ನ ಸ್ಮಾರ್ಟ್‌ ಡಿವೈಸ್‌ ಏಟಿಎಂ ಗಾತ್ರದ ಆರೋಗ್ಯ ಕೇಂದ್ರ ಹೆಚ್‌ಪಾಡ್‌ ನ್ನು (hPod) ನ್ನು ನಗರದ ಪೂರ್ವ ಹೈಲ್ಯಾಂಡ್‌ ಅಪಾರ್ಟ್‌ಮೆಂಟ್‌ ನಲ್ಲಿ ಅಳವಡಿಸಿದೆ.

Contact Your\'s Advertisement; 9902492681

ಈ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಪೂರ್ವ ಅಪಾರ್ಪ್‌ಮೆಂಟ್‌ ಮಾಲೀಕರ ಸಂಘದ ಕಾರ್ಯದರ್ಶಿ ವಿಕ್ರಮ್‌ ಮಾತನಾಡಿ, ನಗರದ ಹೊರವಲಯದಲ್ಲಿರುವ ನಮ್ಮ ಅಪಾರ್ಟ್‌ಮೆಂಟನಿಂದ ಹತ್ತಿರದ ವೈದ್ಯಕೀಯ ವ್ಯವಸ್ಥೆಗೆ ಹೋಗಿ ಸಣ್ಣ ಸಣ್ಣ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಬಹಳ ತ್ರಾಸದಾಯಕ ಸಂಗತಿಗಳಲ್ಲೊಂದು. ಈ ಹೆಚ್‌ಪಾಡ್‌ ಮೂಲಕ ನಾವು ಪ್ರತಿ ಬಾರಿ ಆರೋಗ್ಯ ತಪಾಸಣೆಯ ಪ್ರಮುಖ ಪರೀಕ್ಷೆಗಳನ್ನು ಇಲ್ಲಿಯೇ ಮುಗಿಸಿಕೊಳ್ಳಬಹುದು.

ಆ ನಂತರ ಅಗತ್ಯವಿದ್ದಲ್ಲಿ ಟೆಲಿಮೆಡಿಸನ್‌ ಮೂಲಕ ವೈದ್ಯರನ್ನು ಸಂಪರ್ಕಿಸಬಹುದು. ವೈದ್ಯರು ನೀಡಿದ ಔಷಧಗಳನ್ನು ಆನ್‌ಲೈನ್‌ ಮೂಲಕ ತರಿಸಿಕೊಳ್ಳಬಹುದು. ಹಾಗೆಯೇ, ಅಗತ್ಯವಿದ್ದು ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್‌ ಕೂಡಾ ಕರೆಸಿಕೊಳ್ಳಬಹುದು. ಇಂತಹ ವ್ಯವಸ್ಥೆಯ ಅಳವಡಿಕೆಯಿಂದ ನಮ್ಮ ಅಪಾರ್ಟ್‌ಮೆಂಟ್‌ ನಲ್ಲಿರುವ ಸುಮಾರು 4 ಸಾವಿರಕ್ಕೂ ಹೆಚ್ಚು ಜನರು ಸುಲಭವಾಗಿ ಆರೋಗ್ಯ ಪರೀಕ್ಷೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಇಂಡಿಯಾ ಹೆಲ್ತ್‌ ಲಿಂಕ್‌ ನ ಸಿಇಓ ಡಾ ಸತ್ಯೇಂದರ್‌ ಗೋಯೆಲ್‌ ಮಾತನಾಡಿ, “ಅರ್ಥಪೂರ್ಣವಾದ ಆರೈಕೆ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ಕಂಪನಿಯು ಕೆಲಸ ಮಾಡುತ್ತಿದೆ. ನಿವಾಸಿಗಳಿಗೆ ಯಾವುದೇ ತೊಂದರೆಯಿಲ್ಲದೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅನುಕೂಲ ಮಾಡಿಕೊಡುವ ಜತೆಗೆ ಭಾರತದಲ್ಲಿ ಕ್ಷೇಮ ಆರೈಕೆ ಸಂಸ್ಕೃತಿಯನ್ನು ಹರಡಲು ಸಹಾಯ ಮಾಡುತ್ತಿದೆ. ಎನ್‌ಸಿಡಿಗಳ ಹೊರೆ, ತಡವಾದ ರೋಗನಿರ್ಣಯ ಮತ್ತು ಚಿಕಿತ್ಸೆ ಕೈಬಿಡುವಿಕೆಯನ್ನು ಕಡಿಮೆ ಮಾಡಲು ಇದು ಪೂರಕವಾಗಿದೆ”. ಎಟಿಎಂ ಗಾತ್ರದ ಒಂದು ಆರೋಗ್ಯ ಕೇಂದ್ರವನ್ನು ಐಎಚ್ಎಲ್ ಕೇರ್ ಸಂಸ್ಥೆ ಹೊಂದಿದ್ದು, ಅದನ್ನು “hPod” (ಎಚ್‌ಪಾಡ್) ಎಂದು ಕರೆಯಲಾಗುತ್ತದೆ.

ರಕ್ತದೊತ್ತಡ, ದೇಹದ ತಾಪಮಾನ, ದೇಹದ ದ್ರವ್ಯರಾಶಿ ಸಂಯೋಜನೆ, ಪಲ್ಸ್, ಎಸ್‌ಪಿಒ2 (SPO2), ಮತ್ತು ಇಸಿಜಿ (ECG) ಯಂತಹ 20 ಪ್ರಮುಖ ನಿಯತಾಂಕಗಳನ್ನು ಪರೀಕ್ಷಿಸುವ ಸಾಮರ್ಥ್ಯ ಇದಕ್ಕಿದೆ. ಸಾಫ್ಟ್‌ ವೇರ್ ಪ್ಲಾಟ್‌ಫಾರ್ಮ್ ಕಿಯೋಸ್ಕ್‌ ಮೂಲಕ ರೋಗಿಗಳನ್ನು ನೆರೆಹೊರೆಯ ಪ್ರಮುಖ ಆಸ್ಪತ್ರೆಗಳು, ಔಷಧಾಲಯಗಳು ಮತ್ತು ಪ್ರಯೋಗಾಲಯಗಳಿಗೆ ತಕ್ಷಣ ಸಂಪರ್ಕಿಸುವ ಸೌಲಭ್ಯವನ್ನು ಒಳಗೊಂಡಿದೆ. ಐಎಚ್ಎವ್ ಕೇರ್ ಪ್ಲಾಟ್‌ಫಾರ್ಮ್ ಗೃಹ ಆರೋಗ್ಯ ಸೇವೆಗಳನ್ನು ನಿವಾಸಿಗಳ ಮನೆಬಾಗಿಲಿಗೆ ತರುತ್ತದೆ. ಇಂಡಿಯಾ ಹೆಲ್ತ್ ಲಿಂಕ್‌ನಿಂದ ರೂಪುಗೊಂಡಿರುವ ಇದು ಸುಲಭ ಪ್ರವೇಶದ ಹಾರ್ಡ್‌ವೇರ್ (ಎಚ್‌ಡಬ್ಲ್ಯೂ) ಮತ್ತು ಎಪಿಐ ಮೊದಲ ಇಂಟಿಗ್ರೇಟೆಡ್ ಸಾಫ್ಟ್‌ ವೇರ್ (ಎಸ್‌ಡಬ್ಲ್ಯೂ) ಸಂಯೋಜನೆಯನ್ನು ಹೊಂದಿರುವ ವೈಯಕ್ತಿಕಗೊಳಿಸಿದ ಮೊದಲ ಆರೋಗ್ಯ ಪರಿಹಾರವಾಗಿದೆ ಎಂದರು.

ಇಂಡಿಯಾ ಹೆಲ್ತ್‌ ಲಿಂಕ್‌ನ ಸೇಲ್ಸ್‌ ಮ್ಯಾನೇಜರ್‌ ಉಮೇಶ್‌ ದೊಡ್ಡವಾಡ ಮಾತನಾಡಿ, ಈ ಪ್ಲಾಟ್‌ಫಾರ್ಮ್ ವೈದ್ಯರು, ಫಿಟ್ನೆಸ್ ಕನ್ಸಲ್ಟೆಂಟ್‌ಗಳು ಮತ್ತು ನೆರೆಹೊರೆಯ ‘ಆರೋಗ್ಯ’ ಪಾಲುದಾರರ ಸಹಯೋಗದಲ್ಲಿ ಮನೆ ಬಾಗಿಲಲ್ಲಿ ಪ್ರಯೋಗಾಲಯ ಮತ್ತು ಫಾರ್ಮಸಿ ಸೇವೆಗಳೊಂದಿಗೆ ತ್ವರಿತ ಸಮಾಲೋಚನೆಗಳನ್ನು ನೀಡುತ್ತದೆ.

ಗ, ಜುಂಬಾ, ಧ್ಯಾನ ಮತ್ತು ಪ್ರಕೃತಿ ಚಿಕಿತ್ಸೆಗಳಂತಹ ಆಧುನಿಕ ಚಿಕಿತ್ಸೆಗಳು ಹಾಗೂ ಆಧುನಿಕ ಆರೋಗ್ಯ ಔಷಧಿಗಳೊಂದಿಗೆ ನಿವಾಸಿಗಳಿಗೆ ಸಮಗ್ರ ಆರೋಗ್ಯ ರಕ್ಷಣೆ ಆಯ್ಕೆಗಳನ್ನು ಒದಗಿಸುತ್ತದೆ. ಸಮುದಾಯವನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿಡಲು ಆರೋಗ್ಯ ಪಾಲುದಾರರಿಗೆ ಬೆಂಬಲವಾಗಿ ಆರೋಗ್ಯ ಕಾರ್ಯಕ್ರಮಗಳನ್ನು ಸಕ್ರಿಯಗೊಳಿಸಲು ಸಮುದಾಯ ಆರೋಗ್ಯದ ಒಳನೋಟಗಳನ್ನು ನೀಡುತ್ತದೆ.

ತನ್ನ ನೆರೆಹೊರೆಯ ಸೇವಾ ಪಾಲುದಾರರಾದ ಅಸ್ಟ್ರಾ ಹಾಸ್ಪಿಟಲ್, ಐ ನರ್ಸ್ ಹೋಮ್ ಹೆಲ್ತ್‌ ಕೇರ್ ಮತ್ತು ಲೈಫ್‌ಕೇರ್ ಮೆಡಿಕಲ್ ಸಪ್ಲೈಸ್ ಜತೆಗೆ ಐಎಚ್‌ಎಲ್ ತನ್ನ ಪ್ರಶಸ್ತಿ ವಿಜೇತ ಸೇವೆಗಳನ್ನು ಕನಕಪುರ ರಸ್ತೆಯಲ್ಲಿರುವ ಪೂರ್ವ ಹೈಲ್ಯಾಂಡ್ ಅಪಾರ್ಟ್‌ಮೆಂಟ್‌ನಲ್ಲಿ ಆರಂಭಿಸಿದೆ. ಮುಂದಿನ ತ್ರೈಮಾಸಿಕದಲ್ಲಿ ಬೆಂಗಳೂರು ನಗರದಾದ್ಯಂತ 50ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಲ್ಲಿ ಐಎಚ್‌ಎಲ್ ಕೇರ್ ಪರಿಹಾರಗಳನ್ನು ನಿಯೋಜಿಸಲು ಕಂಪನಿಯು ಯೋಜಿಸುತ್ತಿದೆ. 2022ರ ಅಂತ್ಯದ ವೇಳೆಗೆ ಎಲ್ಲ ಮೆಟ್ರೋ ನಗರಗಳನ್ನು ಒಳಗೊಳ್ಳಲು ತ್ವರಿತ ವಿಸ್ತರಣೆ ಯೋಜನೆಯನ್ನು ಹೊಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here