ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಿಂದ ಕಾಲೇಜು ಕಾಮಗಾರಿ ಪರಿಶೀಲನೆ

0
84

ಜೇವರ್ಗಿ: ‌ಜೇವರ್ಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ಮಾಣ ಹಂತದಲ್ಲಿರುವ ವಿವಿಧ ಕಟ್ಟಡ ಕಾಮಗಾರಿಗಳ ಪ್ರಗತಿಯನ್ನು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಶ್ರೀಶಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಕಾಲೇಜಿನಲ್ಲಿ ಒಟ್ಟಾರೆ ಸುಮಾರು 13 ಕೋಟಿ  ರೂಪಾಯಿ ವೆಚ್ಚದಲ್ಲಿ ಹಲವಾರು ಕಾಮಾಗಾರಿಗಳು ಪ್ರಗತಿಯಲ್ಲಿವೆ. ಅವರು ನೂತನವಾಗಿ ನಿರ್ಮಿತವಾದ ತರಗತಿ ಕೋಣೆಗಳು,  ಕಾಂಪೌಂಡ್ ಗೋಡೆ  ಹಾಗೂ ಗ್ರಂಥಾಲಯ ಕಟ್ಟಡ ಇತ್ಯಾದಿ ಪರಿಶೀಲಿಸಿ, ಉದ್ಘಾಟನೆ ಗೆ  ಸಿದ್ಧವಾಗಿರುವ ಗ್ರಂಥಾಲಯದಲ್ಲಿ ಓದುವ ಕೋಣೆ , ಗ್ರಂಥಪಾಲಕರ ಕೊಠಡಿ, ಕಂಪ್ಯೂಟರ್ ಕೋಣೆ ತಾಂತ್ರಿಕ ಕೋಣೆಗಳನ್ನು ನೋಡಿ ಅವರು ಹರ್ಷವನ್ನು ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಕಟ್ಟಡವು  ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ. ಜೊತೆಯಲ್ಲಿ ಸ್ಟಾಕ್ ರೂಮ್,  ಶೌಚಾಲಯ ಇತ್ಯಾದಿ ‌ಅನುಕೂಲಗಳಿವೆ.  ಸದರಿ ಗ್ರಂಥಾಲಯದ ವಿಸ್ತೀರ್ಣವು, 5834 ಚದರ ಅಡಿಯಾಗಿದ್ದು,  1.40 ಕೋಟಿ ವೆಚ್ಚದಲ್ಲಿ  ಗ್ರಂಥಾಲಯ ಕಟ್ಟಡದ‌ ಕಾಮಗಾರಿಯು    ಪೂರ್ಣಗೊಂಡಿದೆ. ಇದು ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ‌ಶಿಕ್ಷಣವನ್ನು ನೀಡಬೇಕೆಂಬ  ಕಾಲೇಜು ಶಿಕ್ಷಣ ಇಲಾಖೆಯ   ‌ಉದ್ದೇಶದ ಈಡೇರಿಕೆಗೆ ಪೂರಕವಾಗಿದೆ ಎಂದು ಜಂಟಿ ನಿರ್ದೇಶಕ ಡಾ. ಶಕುಮಾರ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಮುಲ್ಗೆ ಪ್ರಭು ಶೆಟ್ಟಿ ಗ್ರಂಥಾಲಯ ಮುಖ್ಯಸ್ಥ ವಿನೋದ ಕುಮಾರ, ಪ್ರಾಧ್ಯಾಪಕರುಗಳು ಹಾಗೂ ಇತರ ಸಿಬ್ಬಂದಿ ವರ್ಗದವರು ಹಾಜರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here