ಶಾಸಕರ ರೆಸಾರ್ಟ್ ರಾಜಕಾರಣ ಜನವಾದಿ ಮಹಿಳಾ ಸಂಘಟನೆ ಖಂಡನೆ

0
59

ಕಲಬುರಗಿ: ಬೆಲೆ ಏರಿಕೆ, ನಿರುದ್ಯೋಗ, ಹೊಸ ರೋಗಗಳಿಂದ ಜನ ಪರದಾಡುತ್ತಿರುವ ಈ ಸಂದರ್ಭದಲ್ಲಿ ತಾಯಿಯಂತೆ ನೆರವಾಗಲು ಧಾವಿಸಬೇಕಿದ್ದ, ಶಾಸಕರು ತಮ್ಮದೇ ಸರಕಾರವನ್ನು ಅಭದ್ರಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಶಾಸಕರ ರೆಸರ್ಟ್ ರಾಜಕಾರಣ ವಿರೋಧಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಜನರು ಕುಡಿಯುವ ನೀರು ಮತ್ತು ದನಗಳು ಮೇವು ಇಲ್ಲದೆ ಸಾಯುವ ಸ್ಥಿತಿಯಲ್ಲಿದ್ದಾರೆ, ಕ್ಷೇತ್ರದ ಶಾಸಕರು ರೇಸಾರ್ಟ್ ರಾಜಕರಣ ಮುಂದುವರಿಸಿ ಜನರ ನಿರೀಕ್ಷೆಗಳಿಗೆ ಮಣ್ಣು ಎರಚುತ್ತಿದ್ದಾರೆಂದು ಅವರು ಹೋರಾಟ ಗಾರ್ತಿ ಕೆ ನೀಲಾ ಅವರು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸಂವಿಧಾನಿಕವಾಗಿ ಆಯ್ಕೆಯಾದ ಸರಕಾರಕ್ಕೆ ಶಾಸಕರ ಖರೀದಿ ಮೂಲಕ ಸರಕಾರ ರಚನೆಗೆ ಮುಂದಾಗುತ್ತಿರುವ ಪಕ್ಷದ ನೀತಿಯನ್ನು ಪ್ರಜಾಪ್ರಭುತ್ವಕಕ್ಕೆ ಮಾರಕ ಎಂದು ಅವರು ಕಳವಳ ವ್ಯಕ್ತಪಡಿಸಿ, ರಾಜ್ಯದ ರಾಜಕೀಯ ಬೇಳವಣಿಗೆ ಜನತೆಗೆ ಭಾರಿ ಬೇಸರ ಉಂಟುಮಾಡುತ್ತಿದೆ ಎಂದು ಈ ಸಂದರ್ಭದಲ್ಲಿ ದುಃಖವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸದಸ್ಯರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಶಾಸಕರ ರೇಸಾರ್ಟ್ ರಾಜಕಾರಣವನ್ನು ಕಟ್ಟುವಾಗಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here