ಕಲಬುರಗಿ: ಚಿಂಚೋಳಿ ತಾಲ್ಲೂಕಿನಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಲಘು ಭೂಕಂಪದ ಅನುಭವಿಸುತ್ತಿದ್ದು, ಈ ವರ್ಷದಲ್ಲಿ ಸುಮಾರು 20 ಕ್ಕಿಂತ ಹೆಚ್ಚು ಬಾರಿ ಭೂಕಂಪದ ಅನುಭವ ಅನುಭವಿಸಿದ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಬೇಕು ಎಂದು ಒತ್ತಾಯಿಸಿ ಇಂದು ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ರಾಜ್ಯ ಹೆದ್ದಾರಿ -32 ರಲ್ಲಿ ಬರುವ ಹೊಡೇಬೀರನಹಳ್ಳಿ ಕ್ರಾಸ್ ಬಳಿ ಮಹಿಳೆಯರು ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದು, ಭಿತ್ತಿಯಲ್ಲಿ ಇರುವ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನಾ ನಿರತ ಹೋರಾಟಗಾರರು ಆಗ್ರಹಿಸಿದರು.
ಗಡಿಕೇಶ್ವಾರ ಪ್ರದೇಶದ ಸುಮಾರು 7 ಕಿಮೀ ಭೂ ಪ್ರದೇಶದವಾದ ತೇಗಲತಿಪ್ಪಿ, ರಾಯಕೋಡ, ಕುಪನೂರ, ಹೊಡೇಬೀರನಹಳ್ಳಿ, ಹೊಸಳ್ಳಿಎಚ್, ಕೊರವಿ ಮತ್ತಿತರ ಗ್ರಾಮಗಳಲ್ಲಿ ನಿರಂತರವಾಗಿ ಭೂಮಿ ಒಳಗೆ ಸ್ಫೋಟವಾಗಿವ ಶಬ್ದದ ಜೊತೆ ಲಘು ಭೂಕಂಪದ ಅನುಭವಾಗುತ್ತಿರುವ ಬಗ್ಗೆ ನಿರಂತರ ವರದಿಯಾಗುತ್ತಿವೆ.
ಪ್ರದೇಶದ ಜನರು ಭಿತ್ತಿಯಲ್ಲಿ ಬದುಕುವಂತಹ ಸ್ಥತಿ ನಿರ್ಮಾಣವಾಗಿದ್ದು, ಜಿಲ್ಲಾಡಳಿತ ಇದುವರೆಗೆ ಯಾವುದೇ ರೀತಿ ಮುನ್ನೆಚ್ಚರಿಕೆ ವಹಿಸದಿರುವ ಬಗ್ಗೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿ. ಭೂಕಂಪ ಅನುಭವಿಸುತ್ತಿರುವ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.