ಚಿಂಚೋಳಿ: ತಾಲ್ಲೂಕಿನ ಭಂಟನಹಳ್ಳಿ ಗ್ರಾಮದಲ್ಲಿ ಬೆಳಗ್ಗೆ 8 : 07 ಸುಮಾರಿಗೆ ಲಘು ಭೂಕಂಪ ಸಂಭವಿಸಿದ್ದು, ಗ್ರಾಮದ ಜನರು ಭಯದಿಂದ ಮನೆಯಿಂದ ಹೊರಗೆ ಓಡಿ ಬಂದರು.
ಚಿಂಚೋಳಿ ತಾಲ್ಲೂಕಿನಲ್ಲಿ ಕೇಲವು ದಿನಗಳಿಂದ ಪದೆ ಪದೇ ಭೂಕಂಪನ ಸಂಭವಿಸುತ್ತಿದೆ. ಸೋಮವಾರ ರಾತ್ರಿ ವೇಳೆ ಸುಲೇಪೇಟ್, ಕಲ್ಲೂರು ರೋಡ್, ಗಾರಂಪಳ್ಳಿ, ಗಡಿಕೇಶ್ವಾರ, ಹೋಸಹಳ್ಳಿ, ಪೋಲಕಪಳ್ಳಿ , ಚಿಂಚೋಳಿ ಪಟ್ಟಣ ಸೇರಿದಂತೆ ಅನೇಕ ಕಡೆಗೆ ಭೂಕಂಪನ ಸಂಭವಿಸಿದೆ.
ಗ್ರಾಮಸ್ಥರು ಮನೆಯಿಂದ ಹೊರಗೆ ಬಂದು ಕೆಲ ತಾಸು ಎಚ್ಚರಿದ್ದರು. ಮತ್ತೆ ಮಂಗಳವಾರ ಬೆಳಗ್ಗೆ 8 :7 ಕ್ಕೆ ಭಂಟನಳ್ಳಿ ಗ್ರಾಮದಲ್ಲಿ ಮತ್ತೆ ಭೂಕಂಪನ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಚಿಂಚೋಳಿ ತಾಲ್ಲೂಕಿನಲ್ಲಿ ಪದೆ ಪದೇ ಭೂಕಂಪನ ಸಂಭವಿಸುತ್ತಿರುವುದರಿಂದ ಗಡಿಕೇಶ್ವಾರ ಗ್ರಾಮಸ್ಥರು ಊರು ಬಿಟ್ಟು ಪಟ್ಟಣಕ್ಕೆ ವಲಸೆ ಹೋಗುತ್ತಿದ್ದಾರೆ. ಚಿಂಚೋಳಿ ತಾಲ್ಲೂಕಿನಲ್ಲಿ ಕೇಲವು ದಿನಗಳಿಂದ ಭೂಮಿಯಿಂದ ವಿಸ್ಮಯಕಾರಿ ಶಬ್ದವು ಕೇಳಿ ಬರುತ್ತಿರುವ ಕಾರಣ ಗಡಿಕೇಶ್ವಾರ ಗ್ರಾಮಸ್ಥರು ಭೂಕಂಪನ ಭೀತಿಯಿಂದ ಊರು ಬಿಟ್ಟು ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ.