ಚೌಡೇಶ್ವರ ಗ್ರಾಮದಲ್ಲಿ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ: ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ

0
154

ರಾಯಚೂರು: ಜಿಲ್ಲೆಯ ದೇವಸುಗೂರು ಹೋಬಳಿಯಲ್ಲಿ ಇಂದು ದಲಿತ ಸಂಘಟನೆಗಳ ಒಕ್ಕೂಟದಿಂದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರ ಗ್ರಾಮದ ಮಾದಿಗ ಸಮುದಾಯ ಮಹಿಳೆ ಒಬ್ಬರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ  ದಲಿತ ಸಂಘಟನೆಗಳ ಒಕ್ಕೂಟದಿಂದ ಹೋರಾಟವನ್ನು ಹಮ್ಮಿಕೊಳ್ಳಲಾಯಿತು.

ದೇವಸೂಗುರಿನ ಒಂದನೇ ಕ್ಲಾಸ್ ಬಳಿ ಇರುವ ಶಿವ ಶರಣ ಮಾದರ ಚೆನ್ನಯ್ಯನ ವೃತ್ತದಿಂದ ಮಾನ್ಯ ಉಪ ತಹಸೀಲ್ದಾರರು ಮುಖಾಂತರ  ಮುಖ್ಯಮಂತ್ರಿ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರ ಹಳ್ಳಿ ಗ್ರಾಮದಲ್ಲಿ ಬಡ ದಲಿತ ಮಾದಿಗ ಸಮಾಜದ ಮಹಿಳೆಯ ಮೇಲೆ ಬಲವಂತವಾಗಿ ಅತ್ಯಾಚಾರ ವೆಸಗಿ ಹಾಗೂ ಆ ಮಹಿಳೆಯನ್ನು ಪೆಟ್ರೋಲ್ ಹಾಕಿ ಸುಟ್ಟು ಕೊಲೆ ಮಾಡಿದ ನರ ರೂಪ ರಾಕ್ಷಸರಿಗೆ ಮೃತಪಟ್ಟ ಮಹಿಳೆ ಹೇಳಿಕೆಯ ಆಧಾರದ ಮೇಲೆ ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ದೇವಸುಗೂರು ನಾಡ ಕಾರ್ಯಾಲಯದ ಮುಂದೆ  ಘೋಷಣೆಗಳನ್ನು ಕೂಗಿ ಉಪ ತಹಶೀಲ್ದಾರರಿಗೆ ಮನವಿ ಪತ್ರವನ್ನು ನೀಡಿದರು. ಅಷ್ಟೆ ಅಲ್ಲದೆ ಮೃತ ಪಟ್ಟ ಬಡ ಮಹಿಳೆಯ ಕುಟುಂಬಕ್ಕೆ ಸರ್ಕಾರದಿಂದ ಒಂದು ಕೋಟಿ ಪರಿಹಾರ ನೀಡಬೇಕು ಮತ್ತು ಆ ಕುಟುಂಬದಲ್ಲಿ ಯಾರಿಗಾದರೂ ಒಬ್ಬರಿಗೆ ಸರ್ಕಾರಿ ನೌಕರಿಯನ್ನು ಒದಗಿಸಿಕೊಡಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ಮಾನ್ಯ ಗೃಹ ಮಂತ್ರಿಗಳು ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು ಇವರಿಗೆ  ಉಪ ತಹಶೀಲ್ದಾರರ ಮುಖಾಂತರ ಮನವಿ ಪತ್ರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಎಮ್‌. ಆರ್. ಹೆಚ್ಚ್. ಎಸ್. ತಾಲೂಕ ಅಧ್ಯಕ್ಷ ಶರಣಪ್ಪ ಮ್ಯಾತ್ರಿ, ರಮೇಶ್ ಜಗ್ಲಿ, ಡಿ.ಎಸ್.ಎಸ್. ಕೃಷ್ಣಪ್ಪ ಬಣ  ಜಿಲ್ಲಾ ಸಂಚಾಲಕ ಷಣ್ಮುಕಪ್ಪ ಘಂಟೆ, ಭೀಮ ಆರ್ಮಿ  ಜಿಲ್ಲಾ ಉಪಾಧ್ಯಕ್ಷ ಸಂತೋಷ ಕುಮಾರ್, ವೀರೇಶ, ಸುಧಾಕರ್, ಎಮ್. ಆರ್. ಹೆಚ್ಚ್. ಎಸ್., ಜಿ.ವೆಂಕಟೇಶ್, ವಿ.ಬಾಬು, ಮಹಾದೇವಪ್ಪ ಲಾಲಕೋಟಿ ಬಿ. ನಾಗರಾಜ್ ಅಂಜಿನಯ್ಯ  ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here