ಗೋಲ್ಡನ್ ಕ್ಲೇವ್ ಬುದ್ಧ ವಿಹಾರ ಟ್ರಸ್ಟ್ ರಚನೆಯ ಭಿತ್ತಿ ಪತ್ರ ಬಿಡುಗಡೆ

0
125
ಗೋಲ್ಡನ್ ಕ್ಲೇವ್ ಬುದ್ಧ ವಿಹಾರ ಟ್ರಸ್ಟ್ ಪದಾಧಿಕಾರಿಗಳ ರಚನಾ ಸಭೆಯ ಆಹ್ವಾನದ ಭಿತ್ತಿ ಪತ್ರವನ್ನು ಡಾ:ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಬಿಡುಗಡೆ ಮಾಲಾಯಿತು.ವೆಂಕಟೇಶ ಹೊಸ್ಮನಿ,ರಾಹುಲ್ ಹುಲಿಮನಿ ಇದ್ದರು.

ಸುರಪುರ: ವರಜ್ಯೋತಿ ಭಂತೇಜಿಯವರ ಮಾರ್ಗದರ್ಶನದಲ್ಲಿ ನಗರದ ಬುದ್ಧ ವಿಹಾರದ ಅಭೀವೃಧ್ದಿಗಾಗಿ ಹಲವರು ಯೋಜನೆಗಳನ್ನು ಹೊಂದಲಾಗಿದೆ ಎಂದು ಡಾ:ಬಿ.ಆರ್.ಅಂಬೇಡ್ಕರ ಜಯಂತ್ಯೋತ್ವವ ಸಮಿತಿ ಅಧ್ಯಕ್ಷ ವೆಂಕಟೇಶ ಹೊಸ್ಮನಿ ತಿಳಿಸಿದರು.

ನಗರದ ಬಸ್ ನಿಲ್ದಾಣ ಬಳಿಯಿರುವ ಬಾಬಾ ಸಾಹೇಬ ಅಂಬೇಡ್ಕರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಗೋಲ್ಡನ್ ಕ್ಲೇವ್ ಬುದ್ಧ ವಿಹಾರ ಟ್ರಸ್ಟಿನ ಪದಾಧಿಕಾರಿಗಳ ರಚನಾ ಸಭೆಗೆ ತಾಲ್ಲೂಕಿನ ದಲಿತ ಸಮುದಾಯದ ಬಂಧುಗಳ ಆಹ್ವಾನದ ಭಿತ್ತಿ ಪತ್ರಗಳ ಬಿಡಿಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಗವಿ ಬುದ್ಧ ವಿಹಾರದಲ್ಲಿ ಅನೈತಿಕ ಚಟುವಟಿಕೆಗಳ ನಡೆಸುವ ಮೂಲಕ ಮಹಾತ್ಮ ಬುದ್ಧರಿಗೆ ಅವಮಾನಿಸಲಾಗುತ್ತಿದೆ.ಅಲ್ಲದೆ ಬುದ್ಧ ವಿಹಾರದ ಸ್ಥಳ ಅಭೀವೃಧ್ದಿಯಿಂದಾಗಿ ತಾಲ್ಲೂಕಿನ ದಲಿತ ಸಮುದಾಯದ ಅಭೀವೃಧ್ದಿಗು ಅನುಕೂಲವಾಗಲಿದೆ.ಅನೇಕ ಯೋಜನೆ ಇಟ್ಟುಕೊಂಡು ಆರಂಭಿಸಲಿರುವ ಟ್ರಸ್ಟಿಗೆ ಈ ತಿಂಗಳ ೧೩ನೇ ತಾರೀಖು ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಬುದ್ಧ ವಿಹಾರದಲ್ಲಿ ಪದಾಧಿಕಾದಿಗಳ ಆಯ್ಕೆಗಾಗಿ ಸಭೆ ನಡೆಸಲಾಗುವುದು.ಸಭೆಗೆ ತಾಲ್ಲೂಕಿನ ದಲಿತ ಸಮುದಾಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.

Contact Your\'s Advertisement; 9902492681

ಸಮಿತಿಯ ಹಣಕಾಸು ಸಮಿತಿ ಅಧ್ಯಕ್ಷ ರಾಹುಲ್ ಹುಲಿಮನಿ ಮಾತನಾಡಿ,ತಾಲ್ಲೂಕಿನ ಸಮಗ್ರ ದಲಿತ ಸಮುದಾಯದ ಅಭೀವೃಧ್ಧಿಗಾಗಿ ಸಹಕಾರ ಸಂಘ ಸ್ಥಾಪನೆ,ಶಾಲೆ ಕಾಲೇಜು ಮತ್ತು ವಸತಿ ನಿಲಯಗಳ ಸ್ಥಾಪನೆ ಮತ್ತು ವೃಧ್ಧರ ಸಾಂತ್ವಾನ ಕೇಂದ್ರಗಳು ಸೇರಿದಂತೆ ಅನೇಕ ಯೋಜನೆಗಳನ್ನು ಹೊಂದಲಾಗಿದೆ.ಅಲ್ಲದೆ ಮುಖ್ಯವಾಗಿ ಬುದ್ಧ ವಿಹಾರದಲ್ಲಿ ಗೌತಮ್ ಬುದ್ಧರ ಒಂದು ನೂರ ಹನ್ನೊಂದು ಅಡಿ ಎತ್ತರದ ಮೂರ್ತಿ ಪ್ರತಿಷ್ಠಾನವನ್ನು ಮಾಡುವ ಉದ್ದೇಶ ಹೊಂದಿದ್ದು ಇವೆಲ್ಲ ಯೋಜನೆಗಳ ಕಾರ್ಯಗತಕ್ಕೆ ಟ್ರಸ್ಟ್ ರಚನೆ ಮಾಡಿ ಕಾರ್ಯಾರಂಭ ಮಾಡಲಾಗುವುದು.

ಆದ್ದರಿಂದ ಟ್ರಸ್ಟ್ ಪದಾಧಿಕಾರಿಗಳ ಆಯ್ಕೆಯನ್ನು ತಾಲ್ಲೂಕಿನ ಎಲ್ಲ ದಲಿತ ಬಂಧುಗಳ ಸಮ್ಮುಖದಲ್ಲಿ ಆಯ್ಕೆಗೊಳಿಸಲಿರುವ ಕಾರಣ ಎಲ್ಲರು ಸಭೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.ಇದೇ ಸಂದರ್ಭದಲ್ಲಿ ಬಾಬಾ ಸಾಹೇಬ ಅಂಬೇಡ್ಕರರಿಗೆ ಮಾರ್ಲಾಣೆ ಮಾಡಿ ನಂತರ ಭಿತ್ತಿ ಪತ್ರಗಳ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಹೋರಾಟಗಾರ ದೇವಿಂದ್ರಪ್ಪ ಪತ್ತಾರ,ಶಂಕರಪ್ಪ ಶಾಖಾನವರ,ನಿಂಗಣ್ಣ ಗೋನಾಲ,ಮಾಳಪ್ಪ ಕಿರದಹಳ್ಳಿ,ರಾಮಚಂದ್ರ ವಾಗಣಗೇರಾ, ರಮೇಶ ಅರಕೇರಿ,ಮಲ್ಲಿಕಾರ್ಜುನ ವಾಗಣಗೇರಾ,ವಿಶ್ವನಾಥ ಹೊಸ್ಮನಿ,ಆಕಾಶ ಕಟ್ಟಿಮನಿ,ಶಂಕರ ಬೊಮ್ಮನಹಳ್ಳಿ,ರಮೇಶ ಬಡಿಗೇರ,ಮಲ್ಲು ಮುಷ್ಠಳ್ಳಿ,ಮಲ್ಲಿಕಾರ್ಜುನ ತಳ್ಳಳ್ಳಿ,ರಾಜು ದೊಡ್ಮನಿ,ಮಲ್ಲು ಜಾಲಿಬೆಂಚಿ,ಮಲ್ಲಪ್ಪ ಮೇಟಿ,ಪರಮಣ್ಣ ನಾಗರಾಳ,ಬಸವರಾಜ ಪೂಜಾರಿ,ಮಾನಪ್ಪ ಬಳಬಟ್ಟಿ,ಅಂಬ್ರೇಶ ಮಾವಿನಮಟ್ಟಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here