ಸುರಪುರ: ತಾಲ್ಲೂಕಿನಲ್ಲಿ ಒಂದು ಲಕ್ಷದ ಐವತ್ತು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯ ರೈತರಿದ್ದು,ರೈತರಿಗೆ ಅನಾನುಕೂಲದಿಂದಾಗಿ ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಜಿ ಸಲ್ಲಿಸುವ ಅನೇಕ ರೈತರು ಬಾಕಿ ಉಳಿದಿದ್ದಾರೆ.ಆದ್ದರಿಂದ ಇನ್ನೊಂದು ತಿಂಗಳ ಕಾಲಾವಕಾಶ ನೀಡುವಂತೆ ಹೆಚ್.ಡಿ.ಕುಮಾರಸ್ವಾಮಿ ಸೇನೆ ರಾಜ್ಯ ಕಾರ್ಯಾಧ್ಯಕ್ಷ ವೆಂಕೋಬ ದೊರೆ ಆಗ್ರಹಿಸಿದರು.
ಕುಮಾರಸ್ವಾಮಿ ಸೇನೆಯಿಂದ ನಗರದ ಮಡಿವಾಳ ಮಾಚಯ್ಯ ವೃತ್ತದಲ್ಲಿ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ತಾಲ್ಲೂಕಿನಲ್ಲಿ ಇದುವರೆಗೆ ಕೇವಲ ಐವತ್ತು ಸಾವಿರದಷ್ಟು ರೈತರು ಮಾತ್ರ ಕಿಸಾನ್ ಸಮ್ಮಾನ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.ಇನ್ನು ಲಕ್ಷಕ್ಕಿಂತ ಅಧಿಕ ಸಂಖ್ಯೆಯ ರೈತರು ಮಾಹಿತಿಯ ಕೊರತೆಯಿಂದಾಗಿ ಅರ್ಜಿ ಸಲ್ಲಿಸಲು ವಿಳಂಬವಾಗುತ್ತಿದೆ.ಆದ್ದರಿಂದ ರೈತರಿಗೆ ಮಾಹಿತಿ ತಲುಪಿಸದೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ರೈತರು ಅರ್ಜಿ ಸಲ್ಲಿಸಲು ಇನ್ನು ಒಂದು ತಿಂಗಳ ಕಾಲಾವಕಾಶ ನೀಡಬೇಕು.ಕಾಲವಕಾಶ ನೀಡದಿದ್ದಲ್ಲಿ ೧೩ನೇ ತಾರೀಖಿನಂದು ಉಗ್ರ ಹೋರಾಟ ನಡೆಸಲಾಗುವುದು ಎಂದು ಸರಕಾರಕ್ಕೆ ಒತ್ತಾಯಿಸಿ,ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿಬ್ಬಂದಿ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ಕೇಶಣ್ಣ ದೊರೆ,ಬಸವರಾಜ ಕವಡಿಮಟ್ಟಿ,ದೇವಪ್ಪ ದೇವರಮನಿ,ತಿರುಪತಿ ದೊರೆ,ಶರಣಪ್ಪ ಬೊಮ್ಮನಹಳ್ಳಿ,ಅಂಬಯ್ಯ ದೊರೆ,ಭೀಮಾಶಂಕರ ಕುಂಬಾರಪೇಟೆ,ದೇವರಾಜ ಮದಕರಿ,ಮಹ್ಮದಸಾಬ ಚಿಗರಿಹಾಳ,ಹುಲಗಪ್ಪ ದೊರೆ,ಭೀಮರಾಯ ಕಕ್ಕೇರಾ,ಮಾನಪ್ಪ ಹುಣಸಗಿ,ನಿಂಗಣ್ಣ ನಾರಾಯಣಪುರ ಸೇರಿದಂತೆ ಅನೇಕರಿದ್ದರು.
Shahapur