ಅಮರ್ಜಾ ಅಣೆಕಟ್ಟೆ ಕುಡಿಯುವ ನೀರು ಪೂರೈಕೆ ವ್ಯರ್ಥ ಸೋರಿಕೆ

0
98
ಆಳಂದ: ಅಮರ್ಜಾನಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಪೈಪಲೈನ್ ಸೋರಿಕೆಯಾಗಿ ನೀರು ವ್ಯರ್ಥವಾಗಿ ಪೋಲಾಗುತ್ತಿದೆ.

ಆಳಂದ: ಪಟ್ಟಣಕ್ಕೆ ಅಮರ್ಜಾ ಅಣೆಕಟ್ಟೆಯಿಂದ ಪೂರೈಕೆಯಾಗುವ ಪೈಪಲೈನ್ ನೀರು ಕೋರಳ್ಳಿ ಕ್ರಾಸ್‌ನ ಕಂಕರ ಮಸೀನ್ ಹತ್ತಿರ ಎರಡ್ಮೂರು ತಿಂಗಳಿಂದಲೂ ಅಪಾರ ಪ್ರಮಾಣದಲ್ಲಿ ನೀರು ಸೋರಿಕೆಯಾದರು ಸಹಿತ ಸಂಬಂಧಿತ ಪುರಸಭೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ನಾಗರಿಕರ ಟೀಕೆಗೆ ಗುರಿಯಾಗಿದೆ.

ಪಟ್ಟಣದಲ್ಲಿ ಬೇಸಿಗೆ ಸೇರಿ ಮಳೆಗಾಲದಲ್ಲೂ ಬಡಾವಣೆಗಳಿಗೆ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಇದರಿಂದ ನೀರಿಗಾಗಿ ಬಡವರು, ಕೊಳಚೆ ನಿವಾಸಿಗಳು ನೀರಿನ ಮೂಲಗಳ ಹುಡುಕಿ ನೀರು ತರಲು ಅಲೆಯುವುದು ಇಲ್ಲಿ ಸಾಮಾನ್ಯವಾಗಿದೆ. ಆದರೆ ಅಲ್ಲಲ್ಲಿ ಇಂಥ ನೀರು ಸೋರಿಕೆ ಹಾಗೂ ವ್ಯರ್ಥ ಹರಿಯುವ ನೀರು ತಡೆದು ಸಮಯಕ್ಕೆ ಹಾಗೂ ಸಮಕವಾಗಿ ನೀರು ಹರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಆದರೆ ಇಂಥ ನೀರಿನ ಪ್ರಮುಖ ಕಾರ್ಯಕ್ಕೆ ಸದಾ ನಿರ್ಲಕ್ಷಿಸುತ್ತಲೆ ಬಂದಿರುವ ಪುರಸಭೆ ಆಡಳಿತ ಈಗಲಾದರೂ ವ್ಯರ್ಥವಾಗಿ ಹರಿಯುವ ನೀರು ತಡೆದು ಸಾರ್ವಜನಿಕರಿಗೆ ಒದಗಿಸಲು ಕ್ರಮ ಕೈಗೊಳ್ಳಬೇಕು.

Contact Your\'s Advertisement; 9902492681

ಅಲ್ಲದೆ, ಶುದ್ಧ ಕುಡಿಯುವ ನೀರು ಹಾಗೂ ಮನೆಗಳಿಗೆ ನಿತ್ಯ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕರವೇ ಸಂಚಾಲಕ ಗುರುನಾಥ ವಣದೆ ಮತ್ತಿತರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here