ಹೆಗ್ಗನದೊಡ್ಡಿ – ಗೋಡ್ರಿಹಾಳ ಗ್ರಾಮಗಳ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಲು ಆಗ್ರಹ

0
48
ಸುರಪುರ ತಾಲೂಕಿನ ಹೆಗ್ಗನದೊಡ್ಡಿ ಮತ್ತು ಗೋಡ್ರಿಹಾಳ ಗ್ರಾಮಗಳ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಬಿ.ಇ.ಓ ಕಚೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸುರಪುರ: ತಾಲೂಕಿನ ಹೆಗ್ಗನದೊಡ್ಡಿ ಹಾಗೂ ಗೋಡ್ರಿಹಾಳ ಗ್ರಾಮಗಳ ಸರಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಶಿಕ್ಷಕರನ್ನು ನಿಯೋಜಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.

ಗೋಡ್ರಿಹಾಳ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೧೨೫ ವಿದ್ಯಾರ್ಥಿಗಳಿದ್ದು ಒಬ್ಬರೇ ಶಿಕ್ಷಕರಿದ್ದಾರೆ ಇದರಿಂದ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ ಮುಖಂಡರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಹಾಗೂ ಸಾಮಾನ್ಯ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಹೆಗ್ಗನದೊಡ್ಡಿ ಪ್ರೌಢಶಾಲೆಯಲ್ಲಿ ಹಿಂದಿ, ಹೊಲಿಗೆ ಹಾಗೂ ಸೇವಕರ ಹುದ್ದೆಗಳು ಖಾಲಿ ಇದ್ದು ಕೂಡಲೇ ಎರಡೂ ಗ್ರಾಮಗಳ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಿಯೋಜಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ, ಗ್ರಾಮೀಣ ಪ್ರದೇಶಗಳಲ್ಲಿನ ಈ ಶಾಲೆಗಳಲ್ಲಿ ಕೃಷಿ ಕೂಲಿ ಕಾರ್ಮಿಕ ಮಕ್ಕಳು ಓದುತ್ತಿದ್ದು ಶಿಕ್ಷಕರಿಲ್ಲದೆ ಗುಣಮಟ್ಟದ ಶಿಕ್ಷಣದಿಂದ ವಂಚಿತಗೊಳ್ಳುವಂತಾಗಿದೆ ಕೂಡಲೇ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಗೊಳಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಬೇಡಿಕೆಗಳ ಮನವಿ ಪತ್ರವನ್ನು ಬಿ.ಇ.ಓ ಕಚೇರಿಯ ಅಧೀಕ್ಷಕರಿಗೆ ಸಲ್ಲಿಸಲಾಯಿತು, ರೈತ ಸಂಘದ ಜಿಲ್ಲಾಧ್ಯಕ್ಷ ಅಯಣ್ಣ ಹಾಲಬಾವಿ, ಉಪಾಧ್ಯಕ್ಷ ಹಣಮಂತ್ರಾಯ ಮಡಿವಾಳರ, ಪ್ರ ಕಾರ್ಯದರ್ಶಿ ಶಿವಪುತ್ರಪ್ಪ ಸಾಹುಕಾರಮ ಹುಣಸಗಿ ಘಟಕದ ಅಧ್ಯಕ್ಷ ಮುದ್ದಣ್ಣ ಅಮ್ಮಾಪುರ, ಗೋಡ್ರಿಹಾಳ ಘಟಕದ ಗೌರವಾಧ್ಯಕ್ಷ ಶಿವಪುತ್ರಪ್ಪ ಅಂಗಡಿ, ಅಧ್ಯಕ್ಷ ಮಲ್ಲಿಕಾರ್ಜುನ ಪೋ.ಪಾಟೀಲ, ಉಪಾಧ್ಯಕ್ಷ ಗುರುರಾಜ ಸಾಥಖೇಡ, ಕಾರ್ಯದರ್ಶಿ ಬಸವರಾಜ ಮಡಿವಾಳ, ದೇವಣ್ಣ ದೊರಿ, ಮಾಳಪ್ಪ ಪೂಜಾರಿ, ರಾಮಣ್ಣ ಕಟ್ಟಿಮನಿ, ಅಯ್ಯಣ್ಣ ಮಂಜಲಾಪುರ, ಶ್ರೀಶೈಲ ಸಾಥಖೇಡ, ಭೀಮಣ್ಣ ವಂದಗನೂರ, ಸೋಮಣ್ಣ ದೊರಿ, ಚಂದ್ರಕಾಂತ ಶೆಳ್ಳಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here