ಸುರಪುರ: ೬ ರಿಂದ ೧೨ನೇ ತರಗತಿ ವರೆಗಿನ ಎಲ್ಲಾ ಶಾಲೆಗಳು ಪೂರ್ಣವಧಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಸರಕಾರ ಮದ್ಹ್ಯಾನದ ಬಿಸಿಯೂಟ ಆರಂಭಿಸಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮದ್ಹ್ಯಾನದ ಬಿಸಿಯೂಟ ಆರಂಭಿಸಲಾಗಿದೆ.
ಅದರಂತೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮೌನೇಶ ಕಂಬಾರವರು ತಾಲೂಕಿನ ಬಿಜಾಸಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸ್ವತಃ ತಾವೇ ಊಟ ಬಡಿಸುವ ಮೂಲಕ ಆರಂಭಗೊಂಡ ಬಿಸಿಯೂಟ ಯೋಜನೆಗೆ ಚಾಲನೆ ನೀಡಿದರು,ಅಲ್ಲದೆ ಸ್ವತಃ ತಾವೇ ಊಟವನ್ನು ಸವಿಯುವ ಮೂಲಕ ಮಕ್ಕಳಲ್ಲಿ ಭರವಸೆ ಮೂಡಿಸಿದರು ಹಾಗು ಎಲ್ಲಾ ಮಕ್ಕಳು ನಿತ್ಯವು ಶಾಲೆಗೆ ಆಗಮಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರಾದ ಸುಮಲತಾ,ಪ್ರೇಮಾ,ಶಿಕ್ಷಕ ವಿರೇಶ ಕದಳ್ಳಿ ಹಾಗು ರಾಜಶ್ರೀ ಮತ್ತು ಬಿಸಿಯೂಟ ನೌಕರರು ಇದ್ದರು.