ಕಾರ್ಮಿಕರನ್ನು ಹೊರಗಿಟ್ಟು ಕಾನೂನು ಅರಿವು: ಆರೋಪ

0
29

ವಾಡಿ: ಕಾರ್ಮಿಕರಿಗೆ ಕಾನೂನು ಅರಿವು-ನೆರವು ನೀಡುವ ನ್ಯಾಯಾದೀಶರ ಕಾರ್ಯಕ್ರಮಕ್ಕೆ ಕಾರ್ಮಿಕರನ್ನು ಆಹ್ವಾನಿಸದೆ ಎಸಿಸಿ ಕಂಪನಿ ಆಡಳಿತ ಅನ್ಯಾಯ ಮಾಡಿದೆ ಎಂದು ಪುರಸಭೆ ಸದಸ್ಯ, ಕಾಂಗ್ರೆಸ್ ಯುವ ಮುಖಂಡ ಪೃಥ್ವಿರಾಜ್ ಸೂರ್ಯವಂಶಿ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪೃಥ್ವಿರಾಜ್, ಎಸಿಸಿ ಸಿಮೆಂಟ್ ಕಂಪನಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಪಟ್ಟಣದ ಎಸಿಸಿ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಜಿಲ್ಲಾ ನ್ಯಾಯಾಲಯದ ನ್ಯಾಯಾದೀಶರ ನೇತೃತ್ವದಲ್ಲಿ ನಡೆದಿದೆ. ಕಾರ್ಮಿಕರಿಗೆ ಕಾನೂನು ಹಕ್ಕು ಮತ್ತು ಸೌಲಭ್ಯಗಳನ್ನು ಅರ್ಥ ಮಾಡಿಸಲು ನ್ಯಾಯಾದೀಶರು ಆಗಮಿಸಿದ್ದರು.

Contact Your\'s Advertisement; 9902492681

ಆದರೆ ಎಸಿಸಿ ಕಂಪನಿಯ ವ್ಯವಸ್ಥಾಪಕರು, ಸಿಎಂಟ್ ಧೂಳು ಮತ್ತು ಯಂತ್ರೋಪಕರಣಗಳ ಮಧ್ಯೆ ಬೆವರು ಸುರಿಸುವ ಕಾರ್ಮಿಕರಿಗೆ ಕಾರ್ಯಕ್ರಮದ ಮಾಹಿತಿ ತಲುಪಿಸಿಲ್ಲ. ಕಾರ್ಮಿಕರನ್ನು ಗುಲಾಮರಂತೆ ದುಡಿಸಿಕೊಳ್ಳುವ ಕಂಪನಿಯ ಇಂಜಿನೀಯರ್‌ಗಳನ್ನು ಕಾರ್ಯಕ್ರಮಕ್ಕೆ ಕರೆದು ಕಾನೂನು ಅರಿವು ಕೊಡಿಸಿದ್ದಾರೆ. ಇಂಜಿನೀಯರ್‌ಗಳನ್ನೇ ಕಾರ್ಮಿಕರಂತೆ ಪ್ರದರ್ಶಿಸಿ ನ್ಯಾಯಾದೀಶರ ಕಣ್ಣಿಗೆ ಮಣ್ಣೆರಚಿದ್ದಾರೆ ಎಂದು ದೂರಿದ್ದಾರೆ.

ಪ್ರಸಕ್ತ ಸಂದರ್ಭದಲ್ಲಿ ಕಾನೂನು ಅರಿವು ಎಂಬುದು ಕಾರ್ಮಿಕರಿಗೆ ಅತ್ಯವಶಕವಾಗಿ ಬೇಕಾಗಿದೆ. ಪ್ರತಿದಿನವೂ ಕಾರ್ಮಿಕರು ಕಂಪನಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿವಿಧ ಸೌಲಭ್ಯುಗಳಿಂದ ವಂಚಿತರಾಗುತ್ತಿದ್ದಾರೆ. ಕಂಪನಿ ಮಾಲೀಕರ ಶೋಷಣೆಯಿಂದಾಗಿ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ೨೦ ದಿನ ಕೆಲಸ ಸಿಗುತ್ತಿಲ್ಲ. ಸಮಾನ ದುಡಿಮೆಗೆ ಸಮಾನ ವೇತನ ನೀಡುತ್ತಿಲ್ಲ. ಇದ್ದಬದ್ಧ ಕಾರ್ಮಿಕರನ್ನು ಕೋವಿಡ್ ನೆಪದಲ್ಲಿ ಕಡಿತಗೊಳಿಸಲಾಗುತ್ತಿದೆ. ಈ ಕುರಿತು ಕಾರ್ಮಿಕರು ನೇರವಾಗಿ ನಾಯಾದೀಶರಿಗೆ ಪ್ರಶ್ನೆಗಳನ್ನು ಕೇಳಿ ಸಲಹೆ ಪಡೆಯಲು ಒದಗಿದ್ದ ಅವಕಾಶವನ್ನು ಕಂಪನಿಯವರು ಕಸಿದುಕೊಂಡರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here