ನೂರು ಕೋಟಿ ಲಸಿಕೆಗಳನ್ನು ವಿತರಿಸಿ ದಾಖಲೆ ಸೃಷ್ಠಿಸಿದವರು ಪ್ರಧಾನಿ ಮೋದಿ

0
20

ಶಹಾಬಾದ: ನಗರದ ಬಿಜೆಪಿ ಶಹಾಬಾದ ಮಂಡಲದ ವತಿಯಿಂದ ಭಾರತ ದೇಶದಲ್ಲಿ ಒಂದು ನೂರು ಕೋಟಿ ಲಸಿಕೆಗಳನ್ನು ವಿತರಿಸಿ ದಾಖಲೆ ಸೃಷ್ಠಿಸಿದ ನರೇಂದ್ರ ಮೋದಿಜಿಯವರಿಗೆ ಹಾಗೂ ಲಸಿಕೆ ಯೋಧರಿಗೆ ಅನಂತ ಧನ್ಯವಾದಗಳನ್ನು ಸಲ್ಲಿಸುವ ಪ್ರಯುಕ್ತ ಶ್ರೀ ಜಗದಂಬಾ ಮಂದಿರದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಮಾತನಾಡಿ, ಲಸಿಕೆ ಅಭಿಯಾನ ಪ್ರಾರಂಭಗೊಂಡಾಗ ಹಲವು ದೇಶಗಳು ಕುಹಕವಾಡಿದರು.ವಿರೋಧಪಕ್ಷಗಳು ಅಡೆತಡೆಗಳನ್ನು ನೀಡಿದರು.ಆದರೆ ಎಲ್ಲವನ್ನೂ ಹಿಮ್ಮೆಟ್ಟಿ ವಿಶ್ವದಲ್ಲೇ ಲಸಿಕೆ ನೀಡುವಲ್ಲಿ ಭಾರತ ಮಾದರಿಯಾಗಿದೆ.ಅತ್ಯಂತ ಕಡಿಮೆ ಜನಸಂಖ್ಯೆಯ ದೇಶಗಳಲ್ಲಿ ಮಾಡದಂತಹ ಸಾಧನೆ ಪ್ರಧಾನಿಯವರು ಮಾಡಿದ್ದಾರೆ.ಕೇಂದ್ರ ಸರ್ಕಾರದ ನಿರಂತರ ಪ್ರೋತ್ಸಾಹ ಮತ್ತು ವಿಜ್ಞಾನಿಗಳ ಪರಿಶ್ರಮದ ಫಲವಾಗಿ ಲಸಿಕೆ ಸಂಶೋಧನೆ ಯಶಸ್ವಿಯಾಗಿ ಸಾಧ್ಯವಾಯಿತು.ವಿಪಕ್ಷಗಳ ನಿರಂತರ ಅಪಪ್ರಚಾರ ಮತ್ತು ಅಸಹಕಾರದ ನಡುವೆ ಈ ಸಾಧನೆ ಮಾಡಲಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಡಾ. ತಾರೀಖ, ಡಾ. ರಾಜಶೇಖರ, ಡಾ. ವ?, ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಸುನೀತಾ, ಯುಸುಫ್ ನಾಕೆದಾರ, ಶೀವಕುಮಾರ , ಆಶಾ ಕಾರ್ಯಕರ್ತೆಯರಾದ ವೀಜಯಲಕ್ಷ್ಮಿ, ಪದ್ಮಾವತಿ, ರೇಣುಕಾ, ಸಮೀರ, ಶ್ರೀಶೈಲ, ವಾಣಿಶ್ರೀ ಹೆಲ್ತ್ ಇನ್ಸ್ಪೆಕ್ಟರ್, ಸಕ್ಕುಬಾಯಿ ಪವಾರ್, ಆಶಾ ಕಾರ್ಯಕರ್ತೆ ಮಲ್ಲಮ್ಮ, ಕಂಪ್ಯೂಟರ್ ಆಪರೇಟರ್ ಶಂಕರ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಉಪಾಧ್ಯಕ್ಷರಾದ ಮಹಾದೇವ ಗೊಬ್ಬೂರಕರ, ದುರ್ಗಪ್ಪ ಪವಾರ್, ಪ್ರ.ಕಾರ್ಯದರ್ಶಿ ಸಿದ್ರಾಮ ಕುಸಾಳೆ, ಪ್ರಮುಖರಾದ ಭೀಮರಾವ ಸಾಳುಂಕೆ, ಕನಕಪ್ಪ ದಂಡಗುಲಕರ, ಅರುಣ ಪಟ್ಟಣಕರ, ಸುಭಾ? ಜಾಪೂರ, ದೇವದಾಸ ಜಾಧವ, ಬಸವರಾಜ ಬಿರಾದಾರ, ಸೂರ್ಯಕಾಂತ ವಾರದ, ಅಂಬಣ್ಣ ಕೂನ್ನೂರಕರ,ಶರಣು ವಸ್ತ್ರದ್, ಯಲ್ಲಪ್ಪ ದಂಡಗುಲಕರ, ಸಂಜಯ ವಿಟಕರ, ದೀನೇಶ ಗೌಳಿ, ರಾಕೇಶ್ ಮಿಶ್ರ, ಚಂದ್ರಕಾಂತ ಸುಭೆದಾರ,ತಿಮ್ಮಣ್ಣ ಕುರಡೆಕರ,ಆಶಿ? ಮಂತ್ರಿ, ಅವಿನಾಶ ಸಾಳುಂಕೆ, ನಗರಸಭೆ ಸದಸ್ಯರಾದ ರವಿ ರಾಠೋಡ, ಪಾರ್ವತಿ ಪವಾರ್, ಆರತಿ ಕುಡಿ, ಭಾಗ್ಯಶ್ರೀ ,ಅಮಿತ ಠಾಕೂರ,ವಿನಯ ಗೌಳಿ,ಉಮೇಶ ನಿಂಬಾಳಕರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here