ಗ್ರಾಮದ ಜನಿರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

0
62

ಕಲಬುರಗಿ: ನಂದೂರು (ಬಿ). ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಆಫ್  ಗುಲಬರ್ಗಾ ನೃಪತುಂಗ ಲಯನ್ಸ್ ಕ್ಲಬ್ ಮತ್ತು   ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರದ ಕಲಬುರಗಿ   ಇಲಾಖೆಯ ಸಂಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ  ಕಾರ್ಯಕ್ರಮಕ್ಕೆ ಸಸಿಗೆ ನೀರು ಊಹಿಸುವುದರ ಮೂಲಕ ಲಯನ್ಸ್ ಕ್ಲಬ್ ನ  ಅಧ್ಯಕ್ಷ ರಾದ ಲಕ್ಷ್ಮಿಕಾಂತ ರೆಡ್ಡಿ ಪಲ್ಲಾ ಅವರು ನೆರೆವೆರಿಸಿದರು.

ನಂತರ ಮಾತನಾಡುತ್ತಾ ಅವರು ನಮ್ಮ ಲಯನ್ಸ್ ಕ್ಲಬ್ ವತಿಯಿಂದ ಹಲವಾರು ಕಾರ್ಯಕ್ರಮ ಜೊತೆಗೆ ಆರೋಗ್ಯ ಇಲಾಖೆಯ ಜೊತೆಯಲ್ಲಿ ಕೈ ಜೊಡಿಸಿ ಗ್ರಾಮದ ಜನರಿಗೆ ಅವರ ಆರೋಗ್ಯದ ದೃಷ್ಟಿಯಿಂದ ಆರೋಗ್ಯವಂತ ಜೀವನ ನಡೆಸಲು ನಮಗೆ ಪೌಷ್ಟಿಕಾಹಾರ ಸೇವನೆ ಬಹಳ ಮುಖ್ಯ

Contact Your\'s Advertisement; 9902492681

ಉಚಿತ ಆರೋಗ್ಯ ತಪಾಸಣೆ  ಶಿಬಿರ ಉಪನ್ಯಾಸ ನೀಡಿದ ವೈದ್ಯರಾದ ಡಾ. ಶ್ರೀ ನಿವಾಸ ಅವಂಟಿ ಅವರು ಮಕ್ಕಳ ಕ್ಯಾನ್ಸರ್ ಬಗ್ಗೆ ಮಾತನಾಡಿದ್ದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ನಂದೂರು (ಕೆ) ವೈದ್ಯಾಧಿಕಾರಿ ಡಾ. ಗಿರಿಜಾದೇವಿ.ವಹಿಸಿದ್ದರು. ಹಾಗೆ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛ ಭಾರತ ಅಂಗವಾಗಿ ಸುತ್ತಲಿನ ಗಿಡ ಗಂಟಿ ,ಕಸವನ್ನು ಸ್ವಚ್ಛ ಮಾಡಲಾಯಿತು ಮತ್ತು ಸಸಿಗಳನ್ನು  ನೀಡಲಾಯಿತು. ನಂದೂರು ಗ್ರಾಮದ ಕಿರಿಯರು ಹಿರಿಯರು ಬಂದು ತಮ್ಮ ಆರೋಗ್ಯ ಚಿಕಿತ್ಸೆಯ ಲಾಭ ಪಡೆದರು.

ವೇದಿಕೆ ಮೇಲೆ ಪ್ರಮುಖರಾದ ಚುನಾಯಿತ ಪ್ರತಿನಿಧಿ ಆರೋಗ್ಯ ಇಲಾಖೆ ಸರ್ಕಾರಿ ನೌಕರರ ಸಂಘ ಕಲಬುರಗಿ ಸಂತೋಷ ಕುಡಳ್ಳಿ. ಜಿಲ್ಲಾ ಕ್ಷಯರೋಗ ನಿರ್ಮೂಲನ ಡಿ ಆರ್ ಟಿಬಿ. ಟಿ ಐ ಎಸ್ ಎಸ್ ಸಮಾಲೋಚಕ ಮಂಜುನಾಥ ಕಂಬಳಿಮಠ ಕಾರ್ಯಕ್ರಮ ನಿರೂಪಿಸಿದರು.

ವಲಯ ಅಧ್ಯಕ್ಷರಾದ ಅರುಣಾ ಅವಂತಿ, ಲಯನ್ಸ್ ಕ್ಲಬ್ ನ ಜಿಲ್ಲಾ ಅಧಿಕಾರಿ ಹಣಮಯ್ಯ ಬೇಲೂರೆ. ಮಾಜಿ ಅಧ್ಯಕ್ಷರಾದ ಡಾ. ಶರಣಮ್ಮ ಬಿರಾದಾರ, ಲಯನ್ಸ್ ಕ್ಲಬ್ ನ ಸದಸ್ಯೆ ಜೈ ಶೀಲಾ,  ಕಾರ್ಯದರ್ಶಿ ಸುಗಣ್ಣ ಅವಂತಿ.ಹಿರಿಯ ಆರೋಗ್ಯ ನಿರೀಕ್ಷಿಣಾಧಿಕಾರಿ ಜಾವೇದ್ ಆಲಿ ಮತ್ತು ಶಿವಶರಣಪ್ಪಾ ನವರು ವಂದಿಸಿದರು, ರೇಷ್ಮಾ. ಇನ್ನಿತರ ಗ್ರಾಮದ ಜನರು ಶಿಬಿರದ ಲಾಭ ಪಡೆದುಕೊಂಡರು ಹಾಗೆ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here