ಕಲಬುರಗಿ: ದ್ವಿತೀಯ ಪಿಯುಸಿ ಇಂಗ್ಲೀಷ ಭಾಷೆಯ ಮೇತ್ರೀಸ್ ಮಿರರ್ ಪುಸ್ತಕದ ೪ನೇ ಆವೃತ್ತಿಯು ಇಂದು ಸರಕಾರಿ ಪದವಿ ಪೂರ್ವ ಬಾಲಕರ ಕಾಲೇಜು ಆಳಂದನಲ್ಲಿ ಪ್ರಾಂಶುಪಾಲರಾದ ಶ್ರೀ ಎಸ್.ವಿ. ಪೊದ್ದಾರವರ ಅಮೃತ ಹಸ್ತದಿಂದ ಬಿಡುಗಡೆಗೊಂಡಿತು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಪ್ರಾಂಶುಪಾಲರು ಈ ಪುಸ್ತಕವು ಪಠ್ಯ ವಸ್ತುವಿನ ಸಮಾನಾಂತರವಾಗಿ ರಚಿಸಲಾಗಿದೆ. ಪುಸ್ತಕದ ಬೆಲೆ ಎಂತಹ ಬಡ ವಿದ್ಯಾರ್ಥಿಗು ನಿಲುಕುವಂತಿದೆ. ಈ ಪುಸ್ತಕ ಒಂದು ಸಣ್ಣ ಕೈಪಿಡಿಯಾಗಿದ್ದು, ಸರಳವಾಗಿ, ಸುಂದರವಾಗಿ, ಅರ್ಥಗರ್ಭಿತವಾಗಿ ಮುದ್ರಿಸಲ್ಪಟ್ಟಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಹಾಗೂ ಕನ್ನಡ ಮಾಧ್ಯಮದಿಂದ ಬಂದ ವಿದ್ಯಾರ್ಥಿಗಳಿಗೆ ಸರಳವಾಗಿ ಅರ್ಥವಾಗುವಂತೆ ರಚಿಸಲಾಗಿದೆ. ಈ ಪುಸ್ತಕವನ್ನು ಓದಿದವರು ೮೦-೯೦ ಅಂಕಗಳನ್ನು ಸರಳವಾಗಿ ಗಳಿಸಬಹುದಾಗಿದೆ. ಈ ಪುಸ್ತಕವನ್ನು ಎಲ್ಲಾ ವಿದ್ಯಾರ್ಥಿಗಳು ಕೊಂಡು ಓದಿ, ಇತರರು ಕೊಂಡು ಓದುವಂತೆ ಸಹಕರಿಸಬೇಕಾಗಿ ಮಕ್ಕಳಿಗೆ ಕಿವಿಮಾತು ಹೇಳಿದರು.
ಈ ಪುಸ್ತಕದ ಲೇಖಕರಾದ ಶ್ರೀ ಶಶಿಕಾಂತ ಮೇತ್ರಿ ರವರು ನಮ್ಮ ಕಾಲೇಜಿನ ಆಂಗ್ಲ ಭಾಷೆಯ ಉಪನ್ಯಾಸಕರಾಗಿರುವದರಿಂದ ನಮ್ಮ ಹಾಗೂ ನಿಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.
ಪುಸ್ತಕ ಬಿಡುಗಡೆಯ ನಂತರ ಲೇಖಕರಾದ ಶ್ರೀ ಶಶಿಕಾಂತ ಮೇತ್ರಿರವರು ಮಾತನಾಡಿ ನಾನು ಬಿಡುಗಡೆ ಮಾಡಿರುವ ಈ ಪುಸ್ತಕವು ೪ನೇ ಆವೃತ್ತಿಯಾಗಿದ್ದು, ಕಳೆದ ೩ ಆವೃತ್ತಿಗಳಿಂದ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಗಣನೀಯ ಏರಿಕೆಯಾಗಿರುವುದು ೪ನೇ ಆವೃತ್ತಿಗೆ ಮುಖ್ಯ ಕಾರಣವಾಗಿದೆ. ಪುಸ್ತಕ ಬಿಡುಗಡೆಗೆ ಕಾರಣರಾದಂತಹ ನಮ್ಮ ಇಲಾಖೆಯ ಉಪನಿರ್ದೇಶಕರು, ಪ್ರಾಂಶುಪಾಲರು ಹಾಗೂ ಸಹಪಾಠಿಗಳ ಸಹಕಾರ ನಾನೆಂದು ಮರೆಯುವುದಿಲ್ಲ ಎಂದು ವಿಶೇಷವಾಗಿ ವಿದ್ಯಾರ್ಥಿಗಳು ನನ್ನ ಪುಸ್ತಕ ಖರೀದಿಸಿ ಅಭ್ಯಶಿಸಿ ಹೆಚ್ಚಿನ ಅಂಕ ಗಳಿಸಿ ಇನ್ನೊಬ್ಬರಿಗೆ ಮಾರ್ಗದರ್ಶನ ಮಾಡಿರುವುದು ನನಗೆ ತುಂಬಾ ಹೆಮ್ಮೆಯಾಗಿದೆ ಎಂದರು.
ಸಮಾರಂಭದಲ್ಲಿ ಗಿರೀಶ ರೂಗಿ ಭೌತಶಾಸ್ತ್ರ ಉಪನ್ಯಾಸಕರು, ಲಕ್ಷ್ಮೀಕಾಂತ ವಾಣಿಜ್ಯಶಾಸ್ತ್ರ ಉಪನ್ಯಾಸಕರು ಹಾಗೂ ಇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.