ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

0
93

ಕಲಬುರಗಿ: ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಘಟನೆ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ತಾಂಡಾದಲ್ಲಿ ವರದಿಯಾಗಿದೆ.

ಅದೇ ತಾಂಡಾದ ನಿವಾಸಿ ಓಂಗಿರಿ ಲಕ್ಷ್ಮಣ್ ರಾಠೋಡ್ ಎಂಬಾತನೇ ಅತ್ಯಾಚಾರ ಎಸಗಿದ ಆರೋಪಿ.
ವಿದ್ಯಾರ್ಥಿನಿ ಗ್ರಾಮದ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು, ಆಕೆಯ ಮನೆಗೆ ಯಾರೂ ಇಲ್ಲದ ಸಂಧರ್ಭದಲ್ಲಿ ಬಂದು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದು, ಮನೆಯವರಿಗೆ ಅಂಜಿ ವಿಷಯ ವಿದ್ಯಾರ್ಥಿನಿ ಹೇಳಿರಲಿಲ್ಲ. ಇದರಿಂದಾಗಿ ಆತ ಮನೆಗೆ ಬಂಧು ಅತ್ಯಾಚಾರ ಎಸಗಿ ಹೋಗುತ್ತಿದ್ದ ಎನ್ನಲಾಗಿದೆ.

Contact Your\'s Advertisement; 9902492681

ಕೆಲವು ದಿನಗಳಿಂದ ನಿನಗೆ ಮದುವೆಯಾಗುವುದಿಲ್ಲ ಎಂದು ಓಂಗಿರಿ ಹೇಳಿದ್ದರಿಂದ ವಿದ್ಯಾರ್ಥಿನಿಯು ಮನೆಯವರಿಗೆ ವಿಷಯ ತಿಳಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಈ ಕುರಿತು ಯಡ್ರಾಮಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here