ಬೆಂಗಳೂರು: ಖ್ಯಾತ ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಇಂದು ಹೃದಯಾಘಾತವಾಗಿ, ಬೆಂಗಳೂರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆ ಉಸಿರೆಳೆದಿದ್ದಾರೆ.
ಬೆಳಗ್ಗೆ ಜಿಮ್ನಲ್ಲಿ ವರ್ಕ್ಔಟ್ ಮಾಡುವ ವೇಳೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೂಡಲೇ ಅವರನ್ನು ವಿಕ್ರಮ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಪುನೀತ್ ರಾಜ್ ಕುಮಾರ್ ಸುಮಾರು 11:45 ಗಂಟೆಗೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಗಳು ಮೂಲಗಳು ತಿಳಿಸಿದೆ. ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಅವಕಾಶ ನೀಡಿದ್ದು ಕಂಠೀರವ ಸ್ಟೂಡಿಯೋದಲ್ಲಿ ನಡೆಯಲಿದದೆ.
ಶಿವರಾಜ್ಕುಮಾರ್ ಅವರ ಬಹುನಿರೀಕ್ಷಿತ ಸಿನಿಮಾ ‘ಭಜರಂಗಿ’ ಇಂದು ಅದ್ದೂರಿಯಾಗಿ ತೆರೆಕಂಡಿದ್ದು, ಅಣ್ಣನ ಸಿನಿಮಾವನ್ನ ಕಣ್ತುಂಬಿಕೊಳ್ಳಲೆಂದು ಥಿಯೇಟರ್ಗೆ ಹೋಗಲು ಪುನೀತ್ ಪ್ಲಾನ್ ಮಾಡಿದ್ದರಂತೆ. ಅಷ್ಟರಲ್ಲಿ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ.