ಕನ್ನಡ ಭವನ ಜನಸಾಮಾನ್ಯರ ಭವನವನ್ನಾಗಿ ಪರಿವರ್ತಿಸುವ ಗುರಿ: ವಿಜಯಕುಮಾರ ಪಾಟೀಲ ತೇಗಲತಿಪ್ಪಿ

0
27

ಕಲಬುರಗಿ: ನವೆಂಬರ ೨೧ ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನನು ವಿಜೇತನಾದರೆ ದಿನ ನಿತ್ಯ ವಿಭಿನ್ನವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತೇನೆ. ಸಾಹಿತಿಗಳು, ಶಿಕ್ಷಕರು, ಮಕ್ಕಳು ಸೇರಿದಂತೆ ಎಲ್ಲರಿಗೂ ವೇದಿಕೆಯನ್ನು ದೊರಕಿಸಿಕೊಡುವುದು, ಜಿಲ್ಲೆಯ ಜನರು ಕುಟುಂಬ ಸಮೇತರಾಗಿ ಕನ್ನಡ ಭವನಕ್ಕೆ ಆಗಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುವ ಮೂಲಕ ಜಿಲ್ಲಾ ಕನ್ನಡ ಭವನವನ್ನು ಜನಸಾಮಾನ್ಯರ ಭವನವನ್ನಾಗಿ ಪರಿವರ್ತಿಸುವ ಗುರಿ ನನ್ನದ್ದಾಗಿದೆ ಎಂದು ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿಯ ದಕ್ಷಿಣಮುಖಿ ಹನುಮಾನ ದೇವಸ್ಥಾನದಲ್ಲಿ ಬುಧವಾರ ಸಂಜೆ ಆಳಂದ ರಸ್ತೆಯ ಗೆಳೆಯರ ಬಳಗದ ವತಿಯಿಂದ ಕಸಾಪ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ತಮಗೆ ಏರ್ಪಡಿಸಿದ್ದ ಗೌರವ ಸತ್ಕಾರವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಹಿರಿಯ ಶಿಕ್ಷಕರಾದ ಕೆ.ಬಸವರಾಜ ಹಾಗೂ ಚಂದ್ರಕಾಂತ ಬಿರಾದಾರ ಮಾತನಾಡಿ, ಕಲಬುರಗಿ ಜಿಲ್ಲೆಯನ್ನು ಸಾಂಸ್ಕೃತಿಕ ಜಿಲ್ಲೆಯನ್ನಾಗಿ ಮಾಡಬೇಕೆಂದು ಕಳೆದ ಎರಡು ದಶಕಗಳಿಂದ ನಿರಂತರವಾಗಿ ಹತ್ತು-ಹಲವು ಕಾರ್ಯಕ್ರಮಗಳನ್ನು  ಏರ್ಪಡಿಸುವ ಮೂಲಕ ಕನ್ನಡ ಕಟ್ಟುವ ಕಾರ್ಯ ಮಾಡುತ್ತಿರುವ ತೇಗಲತಿಪ್ಪಿ ಅವರು ಸಾಂಸ್ಕೃತಿಕ ರಾಯಭಾರಿ ಯಾಗಿದ್ದಾರೆ. ಅವರಿಗೆ ಕಸಾಪ ಚುಕ್ಕಾಣಿ ದೊರೆತರೆ ಖಂಡಿತವಾಗಿಯೂ ಇಡೀ ರಾಜ್ಯವೇ ನಮ್ಮ ಜಿಲ್ಲೆಯತ್ತ ತಿರುಗಿ ನೋಡುವಂತೆ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಪರಿಷತ್ತಿನ ಗೌರವಾನ್ವಿತ ಸದಸ್ಯರು ಅವರಿಗೆತ ಮತ ನೀಡುವ ಮೂಲಕ ಅವರನ್ನು ಈ ಬಾರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡೋಣ ಎಂದು ಮನವಿ ಮಾಡಿದರು.ಪಾಲಿಕೆ ಸದಸ್ಯ ಸುನೀಲ ಬನಶೆಟ್ಟಿ, ಪ್ರಮುಖರಾದ ಎಚ್.ಬಿ.ಪಾಟೀಲ, ಪ್ರಭುಲಿಂಗ ಮೂಲಗೆ, ಶ್ರೀಶೈಲ್ ಮಾಳಗೆ, ಚಂದ್ರಕಾಂತ ಪಾಟೀಲ ಯಳಸಂಗಿ, ವಾಸುದೇವ ಪಾಟೀಲ, ಶಿವಲಿಂಗಪ್ಪ ಕೋಡ್ಲಿ, ಡಾ.ಶರಣರಾಜ್ ಛಪ್ಪರಬಂದಿ, ಶ್ರೀಮಂತ ಗೋಧಿ, ರವಿಕುಮಾರ ಹೂಗಾರ, ಸಂಜೀವ ಪಾಟೀಲ ಸರಸಂಬಾ, ದೇವೇಂದ್ರಪ್ಪ ಗಣಮುಖಿ, ಶರಣಬಸಪ್ಪ ನರೂಣಿ, ನಾಗೇಂದ್ರಪ್ಪ ಮಾಡ್ಯಾಳೆ, ವೀರೇಶ ಬೋಳಶೆಟ್ಟಿ, ಸಂತೋಷ ಕುಡಳ್ಳಿ, ಮಂಜುನಾಥ ಕಂಬಾಳಿಮಠ, ಶರಣಬಸವ ಜಂಗಿನಮಠ, ಭುವನೇಶ್ವರಿ ಹಳ್ಳಿಖೇಡ, ಮಡಿವಾಳಪ್ಪ ಬಿರಾದಾರ, ಶರಣು ಬಿರಾದಾರ, ರವಿ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here