ವಿವಿಧ ಬೇಡಿಕೆಗಳ ಈಡೇರಿಸುವಂತೆ ಸಚಿವರಿಗೆ ಮನವಿ

0
12

ಕಲಬುರಗಿ: ಕಾಲ್ಪನಿಕ ವೇತನವನ್ನು ಈ ಕೂಡಲೇ ಜಾರಿಗೆ ತರಲು ಹೊರಟ್ಟ ಸಮಿತಿ ವರದಿಯನ್ನು ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟ ರಾಜ್ಯ ಉಪಾಧ್ಯಕ್ಷ ಬಿ.ಎಸ್ . ಮಾಲಿಪಾಟೀಲ ಅವರು ಆಗ್ರಹಿಸಿದರು.

ಈ ಕುರಿತು ಇತೀಚೆಗೆ ನಗರಕ್ಕೆ ಆಗಮಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರಿಗೆ ಸಲ್ಲಿಸಿದ್ದ ಅವರು ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುದಾನಿತ ಶಾಲಾ ಕಾಲೇಜು ನೌಕರರಿಗೂ ವಿಸ್ತರಿಸಬೇಕು, ಅನುದಾನಿತ ಶಾಲಾ – ಕಾಲೇಜುಗಳಲ್ಲಿರುವ ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಲು ಆದೇಶವನ್ನು ಹೊರಡಿಸಬೇಕು.

Contact Your\'s Advertisement; 9902492681

೨೦೦೬ ರ ನಂತರ ನೇಮಕಗೊಂಡ ಅನುದಾನಿತ ಶಾಲಾ – ಕಾಲೇಜುಗಳ ನೌಕರರಿಗೂ ಪಿಂಚಣಿ ಈ ಹಿಂದೆ ಇದ್ದಂತೆ ಮುಂದುವರೆಸುವುದು ಹಾಗೂ ( ಎನ್.ಪಿ.ಎಸ್ ) ರದ್ದು ಪಡಿಸುವುದು, ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿರು ಸಮವಸ್ತ್ರ , ಶಾಲಾಬ್ಯಾಗ್ , ನೋಟ್ ಪುಸ್ತಕ ಶೋ ಸಾಕ್ಷ ಪ್ರವಾಸ ಸೌಲಭ್ಯ ( ಕರ್ನಾಟಕ ದರ್ಶನ ) ಸೌಲಭ್ಯವನ್ನು ಅನುದಾನಿತ ಶಾಲಾ – ಕಾಲೇಜು ಮಕ್ಕಳಿಗೂ ವಿಸ್ತರಸಬೇಕು, ೭ ನೇ ವೇತನ ಆಯೋಗವನ್ನು ರಚಿಸಿ ಶೀಘ್ರವಾಗಿ ಜಾರಿಗೊಳಿಸುವದು ಉಪನ್ಯಾಸಕರ ಬೇರೆ ಕಾಲೇಜಿಗೆ ನಿಯೋಜನೆ ರದ್ದುಪಡಿಸುವುದು, ಕಾರ್ಯಬಾರ ನಿಯೋಜನೆ ಅನುದಾನಿತ ಕಾಲೇಜಿಗೆ ಬದಲು ಸ.ಪ.ಪೂ.ಕಾಲೇಜ ನಿಯೋಜಿಸಲು ಆದೇಶಿಸುವುದು, ೨೦೨೦ ರೊಳಗೆ ಖಾಲಿಯಾದ ಹುದ್ದೆಗಳ ತುಂಬಲು ಅವಕಾಶ ನೀಡುವುದು ಮಕ್ಕಳ ಮತ್ತು ಶಿಕ್ಷಕರ ಅನುಪಾತವನ್ನು ಪ್ರಾಥಮಿಕ ಶಾಲೆಗಳಲ್ಲಿ ೩೦ : ೧ ರಂತೆ ಹಾಗೂ ಪ್ರೌಢ ಶಾಲೆಗಲಲ್ಲಿ ೪೦ : ೧ ರಂತೆ ಜಾರಿಗೊಳಿಸುಬೇಕು.

ಒಂದು ಅನುದಾನಿತ ಸಂಸ್ಥೆ ಕಾಲೇಜಿನಿಂದ ಮೊತ್ತೊಂದು ಕಾಲೇಜಿನ ಅನುದಾನಿತ ಸಂಸ್ಥೆಯ ಕಾಲೇಜಿಗೆ ವರ್ಗಾವಣೆಯಾಗಿ ಬಂದಾಗ ಅವರ ಸೇವಾ ಜೇಷ್ಠತೆಯ ಪರಿಗಣಿಸದೆ ಅವರಿಕ್ಕಿಂತ ೧೫ ವರ್ಷ ಕಿರಿಯರಿಗೆ ಹಿರಿಯ ಜೇಷ್ಠತೆಯುನ್ನು ಪರಿಗಣಿಸುವುದು ಯಾವ ನ್ಯಾಯ ಅವರ ಸೇವಾ ಹಿರಿತನದ ಪರಿಗಣಿಸಬೇಕು, ೩% ಲೆಕ್ಕ ಶೀರ್ಷಿಕೆಯಲ್ಲಿ ಅನುದಾನಕ್ಕೆ ಒಳಪಟ್ಟ ಹುದ್ದೆಗಳು ವಯೋನಿವೃತ್ತಿ ಮರಣ ಸ್ವಯಂ ನಿವೃತ್ತಿಯಿಂದ ಖಾಲಿಯಾದ ಹುದ್ದೆಗಳಿಗೆ ಅನುದಾನ ಬಿಡುಗಡೆಗೋಳಿಸಿ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಶಶೀಲ ನಮೋಶಿ, ಡಾ.ಸಲ್ಲಿಂ, ಶಂಕರ ಕಟಕೆ, ಜದಗೀಶ ಬಿಜಾಪೂರ, ಆನಂದ ಕೊಪ್ಪದ, ಎಸ್.ಬಿ.ಸಾಗರ, ಬಾಬು ಮಾಲೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here