- ಶಫೀಕ್ ಊಡಗಿ
ಸೇಡಂ: ತಾಲ್ಲೂಕಿನ ಊಡಗಿ ಗ್ರಾಮದ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣಕ್ಕೆ ಶುಕ್ರವಾರ ಊಡಗಿ ಗ್ರಾಮದಲ್ಲಿ ವಿಧ್ಯಾರ್ಥಿಗಳು ರಸ್ತೆ ಮದ್ಯದಲ್ಲಿ ಕುಳಿತುಕೊಂಡು ದಿಢೀರ್ ಪ್ರತಿಭಟನೆ ನಡೆಸಿದರು.
ಊಡಗಿ ಮತ್ತು ಹಂಗನಹಳ್ಳಿ ಗ್ರಾಮದ ವಿದ್ಯಾರ್ಥಿಗಳಿಗೆ ಎರಡು ಗ್ರಾಮಗಳ ನಡುವೆ ಒಂದೇ ಬಸ್ ವ್ಯವಸ್ಥೆ ಇರುವುದರಿಂದ ಸುಮಾರು 350 ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳು ದಿನನಿತ್ಯ ಬಸ್ಸಿನ ಭಾಗಿಲು ಜೋತು ಬಿದ್ದು ಶಾಲೆಗೆ ತೆರಳುವ ಪರಿಸ್ಥಿತಿ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಬಸ್ ವ್ಯವಸ್ಥಾಪಕ ಅಧಿಕಾರಿಗೆ ಒಂದು ವರ್ಷದಿಂದ ಹಲವು ಬಾರಿ ಬಸ್ ವ್ಯವಸ್ಥೆ ಕಲ್ಪಿಸಿಕೋಡುವ ಕುರಿತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮನವಿ ಪತ್ರ ಸಿಲಿಸಿದರು ಯಾವುದೇ ಪ್ರಯೋಜನಾ ಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು,
ಹಂಗನಹಳ್ಳಿ ವಾಯದಿಂದ ಉಡಗ್ಗಿ ಗ್ರಾಮಕ್ಕೆ ಬೆಳಗ್ಗೆ ೮:೫೫ ನಿಮಿಷಕ್ಕೆ ತಲುಪುತ್ತದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬಸ್ ಒಳ್ಳಗಡೆ ಜಾಗ ಇಲ್ಲದೇ ಒಬ್ಬರಿಂದ ಒಬ್ಬರ ಮೇಲೆ ಬಿದ್ದು ಬಾಗಿಲ ಬಳಿ ಯುವಕರು ಜೋತು ಬಿದ್ದು ಶಾಲೆಗೆ ತೆರಳಲು ದಿನನಿತ್ಯ ಹರಸಾಹಸ ಪಡುವಂತ ಪರಿಸ್ಥಿತಿ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗ್ಗೆ 9 ಗಂಟೆ ಸುಮಾರಿಗೆ ವಿಧ್ಯಾರ್ಥಿಗಳು ಬಸ್ ವ್ಯವಸ್ಥೆ ಕಲ್ಪಿಸಿಕೋಡುವಂತೆ ಒತ್ತಾಯಿಸಿ ದಿಢೀರ್ ರಸ್ತೆ ಮದ್ಯದಲ್ಲಿ ಕುಳಿತುಕೊಂಡು ಸುಮಾರು ಐದು ಗಂಟೆಗಳ ಕಾಲ ಯುವಕರು ಹಾಗೂ ಮಹಿಳೆಯರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಡಿಪೋ ಕಾರ್ಯಲಯದ ಸಿಬಂದಿ ಹಣಮಂತ ಅವರು ತೆರಳಿ ಅವರ ಮನವಿ ಪತ್ರ ಸ್ವೀಕರಿಸಿದ ನಂತರ ಶಾಲಾ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ಹಿಂಪಡೆದು ಕೊಂಡರು.
ಈ ಸಂದರ್ಭದಲ್ಲಿ ಊಡಗಿ ಗ್ರಾಮದ ಯುವಕರು ಹಾಗೂ ಹಿರಿಯರು ಸಾಥ್ ನೀಡಿದರು.