ಸೇವಾ ಸಿಂಧು ಯೋಜನೆಯ ಲಾಭ ಪಡೆದುಕೊಳ್ಳಿ: ಬಿ.ಶರಣಪ್ಪ ಸತ್ಯಂಪೇಟ್

0
61

ಕಲಬುರಗಿ: ಕಾರ್ಮಿಕ ಇಲಾಖೆಯಿಂದ ಸಿಗುವ ಸುಮಾರು ೧೫ಕ್ಕಿಂತ ಅಧಿಕ ಸೇವೆಗಳನ್ನು ಕಾರ್ಮಿಕರಿಗೆ ಸಕಾಲದಲ್ಲಿ ಒದಗಿಸುವ ಮುಂದುವರಿದ ಭಾಗವೇ ಸೇವಾ ಸಿಂಧು ಕಾರ್ಯಕ್ರಮವಾಗಿದ್ದು, ಕಾರ್ಮಿಕರು ಇದರ ಲಾಭ ಪಡೆಯಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶರಣಪ್ಪ ಸತ್ಯಂಪೇಟ್ ಹೇಳಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೇವಾ ಸಿಂಧು ಯೋಜನೆ ಅಡಿಯಲ್ಲಿ ಒಳಪಡುವ ಕಾರ್ಮಿಕ ಇಲಾಖೆಯ ಆನ್‌ಲೈನ್ ಸೇವೆಗಳ ಕುರಿತು ಕಂಪ್ಯೂಟರ್ ಅಪರೇಟರ್‌ಗಳಿಗೆ ಆಯೋಜಿಸಲಾದ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಮಿಕರು ಸೂಕ್ತ ಅರಿವಿಲ್ಲದೆ ಸರ್ಕಾರದ ಹಲವಾರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದರು.

Contact Your\'s Advertisement; 9902492681

ದುರ್ಬಲತೆ ಪಿಂಚಣಿ, ಟ್ರೈನಿಂಗ್ ಕಮ್-ಟೂಲ್ ಕಿಟ್, ವಸತಿ (ಕಾರ್ಮಿಕ ಗೃಹ ಭಾಗ್ಯ) ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್), ಕಾರ್ಮಿಕರ ಮಕ್ಕಳ ಶಿಕ್ಷಣ ಸೇರಿದಂತೆ ಹಲವು ಸೌಲಭ್ಯದಿಂದ ವಂಚಿತರಾಗಿರುತ್ತಾರೆ. ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸರ್ಕಾರವು ಜಾರಿಗೊಳಿಸಿರುವ ಹತ್ತು-ಹಲವು ಯೋಜನೆಗಳ ಬಗ್ಗೆ ಹಾಗೂ ಸೇವಾ ಸಿಂಧು ಯೋಜನೆಡಿಯಲ್ಲಿ ಸಿಗುವ ಸೌಲಭ್ಯದ ಬಗ್ಗೆ ಕಾರ್ಮಿಕರಿಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯ ಕಾರ್ಮಿಕ ಇಲಾಖೆಯಿಂದ ನಡೆಯಬೇಕು ಎಂದರು.

ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಯೋಜನೆಯಗಳನ್ನು ಸರಳವಾಗಿ ಫಲಾನುಭವಿಗಳ ತಲುಪುವ ಉದ್ದೇಶದೊಂದಿಗೆ ಈ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಮಿಕ ಇಲಾಖೆಯಡಿಯಲ್ಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಬಹಳಷ್ಟು ಸೌಲಭ್ಯ ಇದ್ದು, ಎಸ್.ಎಸ್.ಎಲ್.ಸಿ., ಪಿ.ಯು.ಚಿ., ಪದವಿ, ಸ್ನಾತಕೋತ್ತರ ಪದವಿಯಲ್ಲಿ ಶೇಕಡ 75 ಪ್ರತಿಶತ ಫಲಿತಾಂಶ ಪಡೆದವರಿಗೆ ಕ್ರಮವಾಗಿ 5000 ರೂ.ಗಳು, 7000 ರೂ.ಗಳು, 10,000 ರೂ.ಗಳು ಹಾಗೂ 15,000 ರೂ.ಗಳು ಆರ್ಥಿಕ ಸೌಲಭ್ಯ ದೊರೆಯಲಿದ್ದು, ಕಾರ್ಮಿಕರು ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ರಸ್ತೆ ಅಪಘಾತಕ್ಕೆ ತುತ್ತಾದರೆ, ಆರೋಗ್ಯಕ್ಕೆ ಸಂಬಂಧಿಸಿ ಕಾಯಿಲೆಗಳಿಗೆ ಒಳಗಾದರೆ ಅವರಿಗೂ ನೆರವು ನೀಡುವ ಯೋಜನೆಗಳ ಇಲಾಖೆಯಲ್ಲಿವೆ ಎಂದರು.

ಕಾರ್ಯಾಗಾರದಲ್ಲಿ ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಸೇವಾ ಸಿಂಧು ಯೋಜನೆ ಅಡಿಗೆ ಒಳಪಡುವ ಅಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here