ಸುರಪುರ: ಗ್ರಾಮಗಳಿಗೆ ಬಸ್‌ನ ವ್ಯವಸ್ಥೆ ಇಲ್ಲದ್ದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು ಹೆಚ್ಚಿನ ಬಸ್‌ಗಳ ಓಡಿಸಲು ಜಯಕರ್ನಾಟಕ ಸಂಘಟನೆ ಮತ್ತು ಯುವ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಕುರಿತು ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ರವಿ ನಾಯಕ ಬೈರಿಮಡ್ಡಿ ಮಾತನಾಡಿ,ಹೆಮನೂರು ಭಾಗದ ಗ್ರಾಮಗಳಾದ ಶಖಾಪುರ,ಹಾಲಗೆರೆ ಸೇರಿದಂತೆ ಅನೇಕ ಗ್ರಾಮಗಳಿಂದ ನಿತ್ಯವು ನೂರಾರು ವಿದ್ಯಾರ್ಥಿಗಳು ನಗರಕ್ಕೆ ಶಾಲಾ ಕಾಲೇಜಿಗೆ ಆಗಮಿಸುತ್ತಿದ್ದು,ಈ ಭಾಗದಲ್ಲಿನ ವಿದ್ಯಾರ್ಥಿಗಳಿಗೆ ಬಸ್‌ನ ವ್ಯವಸ್ಥೇ ಇಲ್ಲದ್ದರಿಂದ ವಿದ್ಯೆಯಿಂದ ವಂಚಿತರಾಗುತ್ತಿದ್ದಾರೆ.ಆದ್ದರಿಂದ ಕೂಡಲೇ ಹೆಚ್ಚಿನ ಬಸ್‌ಗಳನ್ನು ಬಿಡುವಂತೆ ಆಗ್ರಹಿಸಿದ್ದಾರೆ.
ಯುವ ಕರವೇ ತಾಲೂಕು ಉಪಾಧ್ಯಕ್ಷ ಸಚಿನಕುಮಾರ್ ನಾಯಕ ಮಾತನಾಡಿ,ಕೆಂಭಾವಿ ಮತ್ತು ಕುಂಬಾರಪೇಟೆ ಮಾರ್ಗವಾಗಿ ಬರುವ ಪೇಠ ಅಮ್ಮಾಪುರ,ಕನ್ನೆಳ್ಳಿ ಮತ್ತಿತರೆ ಗ್ರಾಮಗಳಿಗೆ ಬಸ್‌ನ ವ್ಯವಸ್ಥೆ ಇಲ್ಲದ್ದರಿಂದ ಅನೇಕ ವಿದ್ಯಾರ್ಥಿಗಳು ಬಸ್ಸಿನ ಬಾಗಿಲಲ್ಲಿ ನಿಂತು ಅಪಾಯಕಾರಿ ರೀತಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ.ಅಲ್ಲದೆ ಬಸ್ಸಿನಿಂದ ಕೆಳಗೆ ಬೀಳೂ ಸಾಧ್ಯತೆ ಇರುತ್ತದೆ ಮತ್ತು ಇಂತಹ ಬಸ್‌ಗಳಲ್ಲಿಯೆ ವಿದ್ಯಾರ್ಥಿನಿಯರು ಶಾಲಾ ಕಾಲೇಜಿಗೆ ಆಗಮಿಸಬೇಕಾಗಿರುವುದರಿಂದ ನೂಕು ನುಗ್ಗಲಿನಿಂದ ತೊಂದರೆ ಪಡುವಂತ ಪರಸ್ಥಿತಿಯೂ ನಡೆಯುತ್ತಿವೆ.ಆದ್ದರಿಂದ ಎಲ್ಲಾ ಗ್ರಾಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳನ್ನು ಓಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ನಂತರ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಶರಣಪ್ಪ ಬೈರಿಮಡ್ಡಿ,ತಾಲೂಕು ಕಾರ್ಯಾಧ್ಯಕ್ಷ ಮಲ್ಲಪ್ಪ ಶಿಬಾರಬಂಡಿ,ಉಪಾಧ್ಯಕ್ಷ ಗೋಪಾಲ ನಾಯಕ,ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಕಲ್ಲೋಡಿ,ಬಸವರಾಜ ಶಖಾಪುರ,ಮಲ್ಲಯ್ಯ ಕರಡಿಗುಡ್ಡ,ಮೌನೇಶ ದಳಪತಿ,ರಾಮಣ್ಣಗೌಡ ಶಖಾಪುರ,ಹಣಮಗೌಡ ಶಖಾಪುರ ಹಾಗು ಯುವ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಗೌರವಾಧ್ಯಕ್ಷ ರಾಜಾ ಚನ್ನಪ್ಪ ನಾಯಕ,ಕಾರ್ಯದರ್ಶಿ ರಫಿಕ ಷಾ,ಖಜಾಂಚಿ ಮಂಜುನಾಥ ಪ್ಯಾಪ್ಲಿ,ತಾಲೂಕು ಯುವ ಘಟಕ ಅಧ್ಯಕ್ಷ ಮಹ್ಮದ್ ನಬಿ,ಮೌನೇಶ ಪತ್ತಾರ,ಅನೀಲ್ ಬಿಳಾರ್,ಗುರುನಾಥರಡ್ಡಿ ಸೇರಿದಂತೆ ಅನೇಕರಿದ್ದರು.