ಕಲಬುರಗಿ: ಬಸವಪ್ರಭು ಕಂಪ್ಯೂಟರ್ ತರಬೇತಿ ಕೇಂದ್ರ ಹಾಗೂ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಯಾದಗಿರಿ ಸಹಯೋಗದೊಂದಿಗೆ ರಂಗಂಪೇಟೆಯಲ್ಲಿ ಸ್ವಚ್ಛ ಭಾರತ ಅಭಿಯಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಕಾಶ ಅಂಗಡಿ ಕನ್ನೆಳ್ಳಿ , ಪ್ಲಾಸ್ಟಿಕ್ ಬಳಕೆಯಿಂದಾಗಿ ಇವತ್ತು ಪರಿಸರ ಹಾಳಾಗುತ್ತಿದೆ, ನಮ್ಮ ಸುತ್ತಮುತ್ತಲಿನ ಪರಿಸರ ಶಬ್ದ ಮಾಲಿನ್ಯ, ವಾಯುಮಾಲಿನ್ಯ, ಜಲ ಮಾಲಿನ್ಯ ವಾಗಿ ಮಲಿನಗೊಂಡು ಸಂಪೂರ್ಣ ಹಾಳಾಗಿದೆ, ವಿದ್ಯಾವಂತರಾದ ನಾವೆಲ್ಲರೂ ಪರಿಸರ ಉಳಿಸುವ ಜೊತೆಗೆ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಬೇಕು ಮತ್ತು ಸ್ವಚ್ಛತೆ ಬಗ್ಗೆ ಕಾಳಜಿವಹಿಸಬೇಕು ಆ ದಿಶೆಯಲ್ಲಿ ಜಿಲ್ಲೆ ಕೌಶಲ್ಯ ಅಭಿವೃದ್ಧಿ ಇಲಾಖೆ ಎಲ್ಲ ತರಬೇತಿ ಕೇಂದ್ರದಲ್ಲಿ ತರಬೇತುದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಾಗೂ ಜಾಗೃತಿ ಜಾಥಾ ಹಮ್ಮಿಕೊಂಡಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪನ್ಯಾಸಕ ಬಲಬೀಮ ಪಾಟೀಲ್, ಶ್ರೀಕಾಂತ ರತ್ತಾಳ ಮಾತನಾಡಿದರು, ಸಂತೋಷ್ ಬಿಸಿಟಿ ನಿರೂಪಿಸಿದರು ಮಹೇಶ್ ಕನ್ನಳ್ಳಿ ಸ್ವಾಗತಿಸಿದರು, ಶೃತಿ ಸತ್ಯಂಪೇಟೆ ವಂದಿಸಿದರು, ದೇವರಾಜ ನಂದಗಿರಿ ,ಪ್ರವೀಣ್ ಜಕಾತಿ ,ಕೃಷ್ಣ ದೇವತ್ಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.