ಕಲಬುರಗಿ: ಶಾಹಬಾದ ಪೊಲೀಸ್ ಠಾಣೆ ವ್ಯಪ್ತಿಯ ಸರ್ಕಾರಿ ಜಮೀನಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿದ ಆರೋಪಿಗೆ 7 ವರ್ಷ ಶಿಕ್ಷೆ ಮತ್ತು 50 ಸಾವಿರ ದಂಡ ವಿದೇಸಿ ಇಲ್ಲಿನ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಧೀಶ ಗೋಪಾಲಪ್ಪ ಎಸ್ ಅವರು ಆದೇಶ ಹೊರಡಿಸಿದ್ದಾರೆ.
ಹೀರಾಲಾಲ ಲಕ್ಷ್ಮಣ ಬೋಯಿ (32) ಶಿಕ್ಷೆಗೆ ಗುರಿಯಾದ ಅತ್ಯಾಚಾರಿ, 2017 ರಲ್ಲಿ ಶಹಾಬಾದ ಪಟ್ಟಣದ ರಾಮಘಡ ಹತ್ತಿರದ ಆಶ್ರಯ ಕಾಲೋನಿಯ ಸರ್ಕಾರಿ ಜಮೀನಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಆರೋಪಿ ಹೀರಾಲಾಲ ಐಸ್ ಕ್ರೀಮ್ ತರಲು ಹೊರಟಿದ ಬಾಲಕಿಯನ್ನು ಹಿಂದಿನಿಂದ ಸೈಕಲ್ ಮೇಲೆ ಬಂದ್ದು ಸೈಕಲ ನಿಲ್ಲಿಸಿ, ಅತ್ಯಾಚರ ವೇಸಗಿದ್ದ, ಅಪ್ರಾಪ್ತ ಬಾಲಕಿ ಪರಿಶೀಷ್ಟ ಜಾತಿಗೆ ಸೇರಿದ್ದವಳಾಗಿದ್ದು, ಅಂತಾ ಗೊತ್ತಿದ್ದರೂ ಕೂಡಾ ಅವಳ ಬಾಯಿ ಒತ್ತಿಹಿಡಿದುಕೊ೦ಡು ರಾಮಘಡದಿಂದ- ಎ.ಬಿ.ಎಲ್ ಹೌಸಿಂಗ್ ಸೊಸೈಟಿಗೆ, ಹೋಗುವ ಕಚ್ಚಾ ರಸ್ತೆಯ ಪಕ್ಕದಲ್ಲಿರುವ ಒಂದು ತೆಗ್ಗಿನಲ್ಲಿ ಒಯ್ದು, ಅತ್ಯಾಚಾರ ದೌರ್ಜನ್ಯವೆಸಗಳು ಪ್ರಯತ್ನಸಿರುತ್ತಾನೆ.
ಘಟನೆ ಬಗ್ಗೆ ನೊಂದ ಬಾಲಕಿಯ ತಾಯಿ ಶಹಾಬಾದ ಠಾಣೆಗೆ ದೂರು ಸಲ್ಲಿಸಿದ್ದು, ಸದರಿ ದೂರಿನ, ಆಧಾರದ ಮೇಲೆ ಶ್ರೀ. ಕೆ. ಬಸವರಾಜ ಡಿವೈ.ಎಸ್.ಪಿ ಇವರು ತನಿಖೆ ಮಾಡಿ ಆರೋಪಿತನ ವಿರುದ್ದ ತನಿಖೆ ನಡೆಸಿ, ಆರೋಪಿತನ ವಿರುದ್ದ ದೋಷಾರೋಪಣೆ ಪಟ್ಟಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಚಾರಣೆಯನ್ನು ನಡೆಸಿದ ಮಾನ್ಯ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಧೀಶ ಗೋಪಾಲಪ್ಪ ಎಸ್. ಇವರು ಪ್ರಕರಣದ ವಾದ ವಿವಾದಗಳನ್ನು ಆಲಿಸಿದ ನಂತರ ಪ್ರಕರಣದ ಆರೋಪಿತನು ಕಲಂ: 376, ಮತ್ತು ಕಲಂ: 511 ಐಪಿಸಿ, ಹಾಗೂ ಕಲಂ: 10, 18, ಪೋಕ್ಸೊ ಕಾಯ್ದೆ 2912ರ ಅಡಿಯಲ್ಲಿ ಅಪರಾಧ ವೆಸಗಿದ್ದು, ಸಾಬೀತಾಗಿರುತ್ತದೆ ಎಂದು ತೀರ್ಮಾನಿಸಿ, 7 ವರ್ಷ ಶಿಕ್ಷೆ ಹಾಗೂ ರೂ. 50,000-/ ದಂಡ ವಿಧಿಸಿದೆ. ದಂಡ ಕೊಡಲು ತಪ್ಪಿದಲ್ಲಿ 2, ವರ್ಷ ಸಾಧಾ ಶಿಕ್ಷೆ ವಿಧಿಸಿದೆ. ಕಲಂ: 3(1)(ಡಬ್ಲ್ಯು(ಐ), ಎಸ್.ಸಿ/ಎಸ್.ಟಿ ಪಿ.ಎ ಕಾಯ್ದೆ ಅಡಿಯಲ್ಲಿನ ಅಪರಾಧಕ್ಕಾಗಿ 2 ವರ್ಷ, ಶಿಕ್ಷೆ ರೂ. 50,000-/ ದಂಡ ವಿಧಿಸಿದೆ. ದಂಡ ಕೊಡಲು ತಪ್ಪಿದಲ್ಲಿ 6 ತಿಂಗಳು ಸಾಧಾ ಶಿಕ್ಷೆ ವಿಧಿಸಿದೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ. 75,000/- ಪರಿಹಾರ ನೀಡಬೇಕೆಂದು ಆದೇಶ ನೀಡಿರುತ್ತಾರೆ.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಪ್ರ ಅಂಜನಾ ಚವ್ಹಾಣ ಇವರು ಪ್ರಕರಣದಲ್ಲಿ ವಾದವನ್ನು ಮಂಡಿಸಿದರು.