ಕಂಪ್ಲಿ: ಇತ್ತೀಚಿಗೆ ಹೃದಯಾಘಾತದಿಂದ ಅಕಾಲಿಕ ಮರಣವನ್ನಪ್ಪಿದ ಕನ್ನಡ ಚಲನಚಿತ್ರ ನಟ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪುನೀತ್ ರಾಜ್ ಕುಮಾರ್ ಹೆಸರನ್ನು ಕಂಪ್ಲಿ-ಕೊಟ್ಟಾಲ್ ರಸ್ತೆಗೆ ನಾಮಕರಣ ಮಾಡುವಂತೆ ವಕೀಲ ಮೋಹನ್ ಕುಮಾರ್ ದಾನಪ್ಪನವರು ಕಂಪ್ಲಿ ಪುರಸಭಾ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ವಕೀಲ ಮೋಹನ್ ಕುಮಾರ್ ದಾನಪ್ಪ ನವರು ರಾಜ್ಯದ ಪ್ರಖ್ಯಾತ ನಟ ಬಾಲ್ಯದಿಂದ ಪ್ರಸ್ತುತದವರೆಗೂ ಉತ್ತಮ ಸಂದೇಶ ಹೊಂದಿರುವ ಕೌಟಂಬಿಕ ಚಿತ್ರಗಳಲ್ಲಿ ಅಭಿನಯಿಸಿ ನಟನೆ ಮತ್ತು ಸಮಾಜ ಸೇವೆಯಿಂದಲೇ ರಾಜ್ಯವಲ್ಲದೆ ಹೊರ ರಾಜ್ಯದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿ ರಾಜ್ಯದ ಮನೆಮಾತಾಗಿರುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದಿ. ಪುನೀತ್ ರಾಜ್ ಕುಮಾರ್ ರವರು ಇತ್ತಿಚ್ಚೆಗೆ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದು ಅಪಾರ ಅಭಿಮಾನಿಗಳ ದುಖಃಕ್ಕೆ ಕಾರಣವಾಗಿರುತ್ತದೆ.
ದಿವಂಗತ ಪುನೀತ್ ರಾಜ್ ಕುಮಾರ್ ರವರ ತಂದೆಯವರ ಕಾಲದಿಂದಲೂ ಕಂಪ್ಲಿ ಬಗ್ಗೆ ವಿಶೇಷವಾದ ಅಭಿಮಾನವನ್ನ ಡಾ.ರಾಜ್ ಕುಮಾರ್ ಕುಟುಂಬವು ಹೊಂದಿರುತ್ತಾರೆ ಹಾಗಾಗಿ ಡಾ.ರಾಜ್ ಕುಮಾರ್ ರವರು ಮರಣದ ನಂತರ ಕಂಪ್ಲಿಯ ಮುಖ್ಯ ರಸ್ತೆಗೆ ಅವರ ಸ್ಮರಣಾರ್ಥವಾಗಿ ಡಾ.ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿರುತ್ತದೆ.
ಅದರಂತೆ ದಿ.ಪುನೀತ್ ರಾಜ್ ಕುಮಾರ್ ರವರ ಸ್ಮರಣಾರ್ಥವಾಗಿ ಕಂಪ್ಲಿಯ ಸರ್ಕಾರಿ ಸಮುದಾಯ ಆಸ್ಪತ್ರೆಯಿಂದ ಕೊಟ್ಟಾಲ್‌ಗೆ ಹೋಗುವ ರಸ್ತೆಯನ್ನ “ ಪುನೀತ್ ರಾಜ್ ಕುಮಾರ್ ರಸ್ತೆ ” ಎಂದು ನಾಮಕರಣ ಮಾಡುವುದು ಸೂಕ್ತವೆಂದರು.