ಕಲಬುರಗಿ: ಬಿಜೆಪಿ ಉಪಚುನಾವಣೆಗಳಲ್ಲಿ ಸೋತ ಮಾತ್ರಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಪೆಟ್ರೋಲ್ 5 ಮತ್ತು ಡೀಸಲ್ 10 ರೂಪಾಯಿ ಇಳಿಸುವ ನಿರ್ಧಾರ ತೆಗೆದುಕೊಂಡಿದೆ. ಎಲ್ಲರೂ ಸೇರಿ ದೇಶದಿಂದ ಬಿಜೆಪಿ ಸರಕಾರವನ್ನು ತೊಲಗಿಸಿದರೆ 50 ರೂಪಾಯಿ ಪೆಟ್ರೋಲ್, 30 ರುಪಾಯಿ ಡೀಸೆಲ್ ಬೆಲೆ ಆಗುತ್ತೆ ಎಂದು ಎಐಎಂಐಎಂ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಇಕ್ಬಾಲ್ ಅಹ್ಮದ್ ಶಿನ್ನಿಫರೋಶ್ ಹಾಗೂ ಮೋದಿನ ಪಟೇಲ್ ಅಣಬಿ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಿದೆ ರಾಜ್ಯ ಸರ್ಕಾರದಿಂದಲೂ ತಲಾ 700 ಕಡಿತ ಆಗಿದೆ. ಶತಕ ದಾಟಿ ನಾಗಾಲೋಟದಲ್ಲಿ ಓಡುತ್ತಿರುವ ಪೆಟ್ರೋಲ್ ಡೀಸಲ್ ದರ ಸಾಮಾನ್ಯ ಜನರಿಗೆ ಮೇಲೆ ಬರೆ ಎಳೆದಂತಾಗಿದೆ. ಉಪಚುನಾವಣೆಗಳಲ್ಲಿ ಸೋತ ಮಾತ್ರಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬೆಲೆ ಇಳಿಸುವ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.
ಎಲ್ಲರು ಸೇರಿ ಪ್ರಮಾಣಿಕ ಪ್ರಯತ್ನ ಮಾಡಿದರೆ ನಮ್ಮ ದೇಶಕ್ಕೆ ಅಂಟಿಕೊಂಡ ಕೊರೊನಾ ಎಂಬ ಬಿಜೆಪಿ ಪಕ್ಷ ಹೆಸರು ಇಲ್ಲದ ಹಾಗೆ ಓಡಿ ಹೋಗುತ್ತೆ. ಅದಕ್ಕಾಗಿ ಎಐಎಂಐಎಂ ಪಕ್ಷಕ್ಕೆ ಬೆಂಬಲಿಸಿ ದೇಶದ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಸಂವಿಧಾನದ ಆಶಯವನ್ನು ಎತ್ತಿಹಿಡಿಯಲು ದುಡಿಯುತ್ತಿರುವ ಅಸದುದ್ದಿನ್ ಓವೈಸಿ ಅವರ ಕೈ ಬಲಪಡಿಸು ಮೂಲಕ ಎಲ್ಲಾ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸದೃಢ ಆಗಲು ಸಾಧ್ಯ ಎಂದು ಉತ್ತರ ಮತಕ್ಷೇತ್ರದ ನಾಯಕ ಇಲಿಯಾಸ್ ಸೇಠ್ ಬಾಗಬಾನ್ ಕರೆ ನೀಡಿದ್ದಾರೆ.
ಇಲಿಯಾಸ್ ಸೇಠ್ ಬೆಂಬಲಕ್ಕೆ ಪಕ್ಷದ ಮುಖಂಡರಾದ ನವಾಜ್ ಖಾನ್ ಸಾಬ್ ಮತ್ತು ಇಮ್ತಿಯಾಜ್ ಸಿದ್ದಿಕಿ ಸಾಬ್ ಮನವಿ ಮಾಡಿದ್ದಾರೆ.