ಆಳಂದ: ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಮೂರು ದಿನಗಳ ಕಾಲ ಆಚರಿಸಲ್ಪಡುತ್ತಿರುವ ವರ್ಷದ ದೊಡ್ಡವಾದ ದೀಪಾವಳಿ ಹಬ್ಬಕ್ಕೆ ಸಡಗರ ಸಂಭ್ರದ ಮೆರಗು ತಂದುಕೊಂಡಿದೆ.
ಮನೆಗಳಿ ಬಣ್ಣ ಬಳಿದು, ವಿದ್ಯುತ್ ಮೋಪ್ಯಾ ಕಟ್ಟಿ ದೀಪ ಬೆಳಗಿಸುವುದು ದನ-ಕರುಗಳಿಗೆ ಆಣಿ-ಪೀಣಿಯಿಂದ ಬೆಳಗಿ ಸಂಭ್ರಮಿಸಿದ ರೈತಾಪಿ ವರ್ಗ ಎಂದಿನಂತೆ ಸಾಮಾನ್ಯವಾಗಿದೆ.
ಗುರುವಾರ ಅಮವಾಸ್ಯೆ ಪೂಜೆ ಹಾಗೂ ಶುಕ್ರವಾರ ನಡೆಯುವ ಬಲಿಪಾಡ್ಯದ ಅಂಗಡಿ, ಮುಗ್ಗಂಟು ವ್ಯಾಪಾರ ಉದ್ಯಮೆಗಳ ಪೂಜೆಗೆ ಪಟ್ಟಣದಲ್ಲಿ ಪೂಜಾ ಸಾಮಗ್ರಿಗಳ ಖರೀದಿ ಹಾಗೂ ಮಾರಾಟ ಜೋರಾಗಿ ನಡೆದಿದೆ. ಕುಟುಂಬದ ಹೆಣ್ಣುಮಕ್ಕಳು ಉತ್ತರ ಕರ್ನಾಟಕದ ಸಂಪ್ರದಾಯದಂತೆ ಕುಟುಂಬದ ಸೋಹದರರಿಗೆ ಸೋಹದರಿಯರು ಆರತಿ ಬೆಳಗುವ ಸಾಂಪ್ರದಾಯ ಎಂದಿನಂತೆ ಮನೆ, ಮನೆಗಳಲ್ಲಿ ಸಾಮಾನ್ಯವಾಗಿ ನಡೆಯಿತು. ಆರತಿ ಬೆಳಗಿದ ಸೋಹದರಿಯರಿಗೆ ಸೋಹದರರು ಭಾತೃತ್ವದ ಸಂಕೇತವಾಗಿ ಆರತಿಯಲ್ಲಿ ಕಾಣಿಕೆ ನೀಡಿದರು. ಕುಟುಂಬದ ಸದಸ್ಯೆರೆಯಲ್ಲರೂ ಹಬ್ಬದ ಅಂಗವಾಗಿ ಹೊಸ ಬಟ್ಟೆಗಳನ್ನು ಧರಿಸಿದ್ದರು.
ಮಕ್ಕಳು, ಯುವಕರು ಪಟಾಕಿ ಸಿಡಿಸಿ ಸಂಬ್ರಮಿಸಿದರು. ಎಳೆಯ ಮಕ್ಕಳು ಸುರಸುರ ಬತ್ತಿ ಹಚ್ಚಿ ಮನರಂಜಿಸಿದ್ದರು. ಹಬ್ಬಕ್ಕಾಗಿ ತಯಾರಿಸಿದ ವಿಶೇಷ ಅಡುಗೆಯನ್ನು ಎಲ್ಲರೂ ಜೊತೆಯಾಗಿ ಕುಟುಂಬದ ಸಮೆತ ಸವಿದರು. ಹೀಗಾಗಿ ದೀಪಾವಳಿ ಹಬ್ಬಕ್ಕೆ ವಿಶಿಷ್ಠ ಮೆರುಗು ಭಾರತೀಯ ಪರಂಪರೆ ಮರುಕಳಿಸಿತ್ತು.
ಈ ಹಬ್ಬವು ಭಾರತ ಒಳಗೊಂಡು ವಿದೇಶಗಳಲ್ಲೂ ಶೃದ್ಧಾ ಭಕ್ತಿಯಿಂದ ಆಚರಿಸುತ್ತಾ ಬರಲಾಗಿದೆ. ಈ ಹಬ್ಬದ ವೈಶಿಷ್ಟ ವೆಂದರೆ ಸಿಹಿ ಪದಾರ್ಥಗಳು ಬಹುತೇಕರು ಮನೆಯಲ್ಲೇ ಮಾಡಿ ಕುಟುಂಬದ ಸದಸ್ಯರೆಲ್ಲರೂ ಕೂಡಿ ವಾರಗಟ್ಟಲೆ ತಿನ್ನುತ್ತಾರೆ. ಈ ಹಬ್ಬಕ್ಕೆ ರೈತರು, ವ್ಯಾಪಾರಿಗಳು, ಕಾರ್ಮಿಕರು, ಮಹಿಳೆಯರು, ನೌಕರರು ಹೀಗೆ ಎಲ್ಲ ವರ್ಗದವರಲ್ಲಿ ಸಂಭ್ರಮದಿಂದ ಕೂಡಿರುತ್ತದೆ. ಹಬ್ಬಕ್ಕಾಗಿಯೇ ವಾರಗಟ್ಟಲೆ ಶ್ರಮವಹಿಸಿ ತರಹೇವಾರಿ ಪ್ರಕಾರದದ ಸಿಹಿ ತಿನಿಸುಗಳನ್ನು ತಯಾರು ಮಾಡಲಾಗುತ್ತದೆ. ಸಿಹಿ ಜೊತೆಗೆ ಖಾರ ಖಾರವು ಇರಲಿ ಎಂದು ಚುಡುವಾ, ಶೇವಾ, ಶೇಂಗಾದ ಬೀಜ ಮತ್ತು ಬೇರೆ, ಬೇರೆ ಪ್ರಕಾರದ ಕೊಡುಬಳೆಗಳೆಯನ್ನು ತಯಾರಿಸು ಪದ್ಧತಿ ಇದೆ.
ಬಡವರಾಗಿರಲ್ಲಿ, ಶ್ರೀಮಂತರಾಗಿರಲ್ಲಿ ಎಲ್ಲರು ಸಿಹಿ ಖಾದ್ಯಗಳಲ್ಲಿ ವಿಶೇಷವಾಗಿ ಲಡ್ಡು, ಕರ್ಚಿಕಾಯಿ, ರವೆಯ ಉಂಡಿ, ಬೇಸನ ಉಂಡಿ, ಖೊಬ್ಬರಿ ಉಂಡೆಗಳನ್ನು ಪ್ರಮುಖವಾಗಿ ಎಲ್ಲರ ಮನೆಗಳಲ್ಲಿ ತಯಾರು ಮಾಡುವ ಸಾಂಪ್ರದಾಯ ಹೀಗಾಗಿನೇ ದೀಪಾವಳಿ ಹಬ್ಬಕ್ಕೆ ಎಲ್ಲಿಲ್ಲದ ಮಹತ್ವ ಪಡೆದುಕೊಂಡಿದೆ.
ಜಾನುವಾರುಗಳಿಗೆ ಬಲಿಪಾಡ್ಯಂದು ಪೂಜೆ ನೈವೇದ್ಯ ತಿನ್ನಿಸಿ ರಾತ್ರಿ ದೀಪ ಬೆಳಗಿ ಜಾನಪದ ಹಾಡುವ ವಿಶಿಷ್ಟ ಸಾಂಪ್ರದಾಯ ಇನ್ನೂ ಚಾಲ್ತಿಯಲ್ಲಿದೆ.