ದನ-ಕರುಗಳಿಗೆ ಆಣಿ-ಪೀಣಿಯಿಂದ ಬೆಳಗಿ ಜಾನಪದ ದೀಪಾವಳಿ

0
16

ಆಳಂದ: ದೇಶದ ರೈತರು, ಹಳ್ಳಿಗಳಿಂದ ಕೂಡಿರುವುದರಿಂದ ಜಾನಪದ ಬದುಕಿನ ಅವಿಭಾಜ್ಯ ಅಂಗವಾಗಿದೆ. ಹುಟ್ಟಿನಿಂದ ಮರಣದವರೆಗೆ ವ್ಯಕ್ತಿಗೆ ನೀಡುವ ಪ್ರತಿಯೊಂದು ಆಚರಣೆ, ಸಂಸ್ಕಾರದಲ್ಲಿ ಜಾನಪದ ಹಾಸುಹೊಕ್ಕಾಗಿದೆ. ಜಾನಪದ ಸಂಸ್ಕೃತಿ, ಪರಂಪರೆಯ ಅಳವಡಿಕೆಯಿಂದ ನಮ್ಮತನ, ದೇಶದ ಮೂಲ ಸಂಸ್ಕೃತಿ, ಪರಂಪರೆ ಉಳಿದು, ಬೆಳೆಯಲು ಸಾಧ್ಯವಿದೆ. ಜಾನಪದ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.

ಆಳಂದ ರಸ್ತೆಯ ಭೀಮಳ್ಳಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ನಿಮಿತ್ಯ ಕಜಾಪ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ’ಜಾನಪದ ದೀಪಾವಳಿ ಕಾರ್ಯಕ್ರಮ’ದಲ್ಲಿ ಎತ್ತುಗಳಿಗೆ ಬೆಳಗುವುದು, ಜಾನಪದ ಗಾಯನ, ಕಲಾವಿದರಿಗೆ ಗೌರವ ಸತ್ಕಾರದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ದೀಪಾವಳಿ ಹಬ್ಬ ಆಚರಣೆಯ ಸಂದರ್ಭದಲ್ಲಿ ದನ-ಕರುಗಳಿಗೆ ಆಣಿ-ಪೀಣಿಯ ಮೂಲಕ ಬೆಳಗಲಾಗುತ್ತದೆ. ದನ-ಕರುಗಳ ಮೇಲಿನ ಪೀಡೆ ಹೋಗಬೇಕು, ಯಾವುದೇ ರೋಗ-ರುಜಿನಿಗಳು ಬರಬಾರದು, ಆರೋಗ್ಯಯುತವಾಗಿರಬೇಕು ಎಂಬ ನಂಬಿಕೆಯಿಂದ ಅವುಗಳಿಗೆ ಬೆಳಗಿ, ಗಾಯನದ ಮೂಲಕ ಪ್ರಾರ್ಥಿಸಲಾಗುತ್ತದೆ. ಹಾವಿನ ಹೆಡೆ ಆಕಾರದಲ್ಲಿ ಹುಲ್ಲಿನ ಹೆಣಿಕೆಯಿಂದ ಆಣಿ-ಪೀಣಿಯನ್ನು ತಯಾರಿಸಿ, ಮಧ್ಯಭಾಗದಲ್ಲಿ ದೀಪವನ್ನು ಇಟ್ಟು, ಅದ್ಭುತವಾಗಿ ರಚಿಸಲಾಗಿರುತ್ತದೆ. ಇಂತಹ ಅಪರೂಪದ ಆಚರಣೆಗಳು ಪ್ರಸ್ತುತ ಸಂದರ್ಭದಲ್ಲಿ ಕಣ್ಮರೆಯಾಗುತ್ತಿದ್ದು, ಅವುಗಳನ್ನು ಉಳಿಸಿಕೊಂಡು ಹೋಗಬೇಕಾದದ್ದು ಅಗತ್ಯವಾಗಿದೆ ಎಂದರು.

ಜಾನಪದ ಕಲಾವಿದರಾದ ಗುರುನಾಥ ಜಮಾದಾರ ಮತ್ತು ಉಮೇಶ ಬಾಗೋಡಿ ಅವರಿಗೆ ಗೌರವಿಸಲಾಯಿತು. ಪ್ರಮುಖರಾದ ಮಲ್ಲಿನಾಥ ಚೋರಗಸ್ತಿ, ರೇಣುಕಾಚಾರ್ಯ ಸ್ಥಾವರಮಠ, ಪಾಂಡುರಂಗ ಜಮಾದಾರ, ನೀಲಕಂಠ ಜಮಾದಾರ, ರಹೇಮಾನ್ ಪಟೇಲ್, ರಾವುತ್ತಪ್ಪ ಜಮಾದಾರ, ಸಿಕಿಂದರ್ ಸಾಬ್, ಕಲ್ಲಪ್ಪ ಜಮಾದಾರ, ಭೀಮಯ್ಯ ಗುತ್ತೇದಾರ, ಸಿದ್ದಾರೂಢ ಜಮಾದಾರ, ಯಲ್ಲಾಲಿಂಗ ಜಮಾದಾರ, ಮಲ್ಲಿನಾಥ, ಸಾಗರ, ಆನಂದ ಜಮಾದಾರ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here