ಜಂಬೂಶಾಂತಿ ಹೊಂದಿದ ಮಾರ್ಕಂಡೇಯ ದೇಶಿಕೇಂದ್ರ ಸ್ವಾಮೀಜಿಗೆ ಶ್ರದ್ಧಾಂಜಲಿ ಸಭೆ

0
19

ಸುರಪುರ: ಇತ್ತೀಚೆಗೆ ಜಂಬೂಶಾಂತಿ (ಲಿಂಗೈಕ್ಯ) ಹೊಂದಿದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋಡಿಹಳ್ಳಿಯ ಶ್ರೀಮದ್ ಆದಿಜಾಂಬವ ಮಾತಂಗ ಮಹಾಸಂಸ್ಥಾನದ ಮಠಾಧೀಶರಾಗಿದ್ದ ಶ್ರೀ ಮಾರ್ಕಂಡೇಯ ದೇಶಿಕೇಂದ್ರ ಸ್ವಾಮೀಜಿಯವರು ಜಂಬೂಶಾಂತಿ (ಲಿಂಗೈಕ್ಯ) ಹೊಂದಿದ ಪ್ರಯುಕ್ತ ನಗರದ ರಂಗಂಪೇಟೆಯಲ್ಲಿನ ಡಾ:ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿದ ಅನೇಕ ಜನರು ಮಾತನಾಡಿ, ಹೆಣ್ಣುಮಕ್ಕಳನ್ನು ಗುರುಮಗಳು- ಗುರುಪತ್ನಿ- ಗುರುತಾಯಿ – ಜಾಂಬವತಿ ಎಂಬ ಪದವಿಶೇಷಣಗಳಿಂದ ಕರೆಯಲಾಗುತ್ತದೆ. ಗಂಡುಮಕ್ಕಳನ್ನು ಜಾಂಬವ ಗುರುವಿನಯ್ಯನೋರು, ಗುರುತಂದೆ, ಗುರುಮಗ ಎಂದು ಸಂಬೋಧಿಸಲಾಗುತ್ತದೆ. ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ, ನುಲಿಯ ಚಂದಯ್ಯ, ನುಲಿಯ ಸಂಗಯ್ಯ, ಸಮಗಾರ ಹರಳಯ್ಯನ ಪುಣ್ಯಸ್ತ್ರೀ ಕಲ್ಯಾಣಮ್ಮ ಮುಂತಾದ ಶರಣರು ಆದಿಜಾಂಬವ ಪರಂಪರೆಯ ಕವಿಪ್ರತಿಭೆ ವಚನಕಾರರಾಗಿ ಗುರುತಿಸಿಕೊಂಡಿದ್ದಾರೆ.

Contact Your\'s Advertisement; 9902492681

ಇಂತಹ ಆದಿಮ ಪರಂಪರೆಯಲ್ಲಿ ಶ್ರೀಶೈಲ ಮಠ, ಪೆನಗೊಂಡೆ ಮಠ, ಕಡಪ ಮಠ, ಬೆಜವಾಡ ಮಠ, ಕೊಂಕಲ್ ಮಠ, ನೆಲಮಂಗಲ ಮಠ, ರಾವಂದೂರು ಮಾದಾರ ಚೆನ್ನಯ್ಯ ಗುರುಪೀಠ, ಹಿರೇಸಿಂಧೋಗಿ ಮಾದಾರ ಮರುಳಸಿದ್ಧ ಪೀಠ ಮುಂತಾದ ಅನೇಕ ಮಠಪೀಠಗಳಿಗೆ ಮಕುಟಮಣಿಯಂತಿದ್ದ ಶ್ರೀ ಮಾರ್ಕಂಡೇಯ ಮುನಿ ದೇಶಿಕೇಂದ್ರ ಸ್ವಾಮೀಜಿಯವರು ಜಂಬೂಶಾಂತಿ ಹೊಂದಿದ್ದು ನಮ್ಮ ಸಮುದಾಯಕ್ಕೆ ಬಹುದೊಡ್ಡ ನಷ್ಟವುಂಟಾಗಿದೆ ಎಂದು ನೋವಿನಿಂದ ನುಡಿದರು.

ಸಭೆಯ ಆರಂಭದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಶ್ರೀಗಳ ಆತ್ಮಕ್ಕೆ ಶಾಂತಿ ಶ್ರೀಗಳು ಮತ್ತೆ ಹುಟ್ಟಿ ಬರಲೆಂದು ಪ್ರಾರ್ಥಿಸಿದರು.

ಸಭೆಯಲ್ಲಿ ಮುಖಂಡರಾದ ಯಲ್ಲಪ್ಪ ಹುಲಿಕಲ್, ನಂದಕುಮಾರ ಬಾಂಬೇಕರ್, ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ, ಪಂಡೀತ ನಿಂಬೂರ, ಭೀಮಣ್ಣ ದೀವಳಗುಡ್ಡ,ನಿಂಗಣ್ಣ ಬುಡ್ಡಾ,ಮರೆಪ್ಪ ಬಸ್ಸಾಪುರ,ದಾನಪ್ಪ ಕಡಿಮನಿ,ಮಲಕಪ್ಪ ಕಡಿಮನಿ,ಚಂದ್ರಕಾಂತ್ ಕಟ್ಟಿಮನಿ,ಪರಶುರಾಮ್ ಕಟ್ಟಿಮನಿ,ಬಸವರಾಜ ಕೊಂಗಂಡಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here