ಸುರಪುರ: ಕೊರೊನಾ ಆವರಿಸಿದ್ದರಿಂದ ಕಳೆದ ಎರಡು ವರ್ಷಗಳಿಂದ ರದ್ದಾಗಿದ್ದ ನಮ್ಮ ಗೃಹರಕ್ಷಕ ದಳದ ಕವಾಯಿತು ಈಗ ಮತ್ತೆ ಆರಂಭಿಸುವಂತೆ ನಮ್ಮ ಕೇಂದ್ರ ಕಚೇರಿಯಿಂದ ಆದೇಶ ಬಂದಿದ್ದರಿಂದ ಮತ್ತೆ ಈ ಮುಂದೆ ಕವಾಯಿತು (ಪರೇಡ್) ನಿರಂತರವಾಗಿ ನಡೆಯಲಿದೆ ಎಂದು ಗೃಹ ರಕ್ಷಕ ದಳದ ಕಂಪನಿ ಕಮಾಂಡರ್ ಯಲ್ಲಪ್ಪ ಹುಲಿಕಲ್ ತಿಳಿಸಿದರು.
ನಗರದ ಶ್ರೀ ಪ್ರಭು ಕಾಲೇಜ್ ಆವರಣದಲ್ಲಿ ಶನಿವಾರ ನಡೆದ ಗೃಹ ರಕ್ಷಕ ದಳದ ಕವಾಯಿತು (ಪರೇಡ್)ಗೆ ಚಾಲನೆ ನೀಡಿ ಮಾತನಾಡಿ,ಇನ್ಮುಂದೆ ನಿರಂತರವಾಗಿ ಪ್ರತಿವಾರ ಗುರುತಿಸಿದ ದಿನದಂದ ಕವಾಯಿತು ಇರಲಿದ್ದು ಎಲ್ಲಾ ಗೃಹ ರಕ್ಷಕ ದಳದ ಸಿಬ್ಬಂದಿಗಳು ಸಮವಸ್ತ್ರದೊಂದಿಗೆ ಶಿಸ್ತಿನಿಂದ ಸಮಯಪಾಲನೆಯೊಂದಿಗೆ ನಿರಂತರವಾಗಿ ಭಾಗವಹಿಸುವಂತೆ ತಿಳಿಸಿದರು.
ನಂತರ ಎಲ್ಲಾ ಸಿಬ್ಬಂದಿಗಳಿಗೆ ಪುಷ್ಪವೃಷ್ಟಿ ಮಾಡಿ ಸಿಹಿ ಹಂಚಿದರು ಅಲ್ಲದೆ ಇದೇ ಸಂದರ್ಭದಲ್ಲಿ ಯಲ್ಲಪ್ಪ ಹುಲಿಕಲ್ ಅವರನ್ನು ಎಲ್ಲಾ ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಿನಿಯರ್ ಪ್ಲಾಟೂನ್ ಕಮಾಂಡರ್ ವೆಂಕಟೇಶ್ವರ ಸುರಪುರ,ಪ್ಲಾಟೂನ್ ಕಮಾಂಡರ್ ರಮೇಶ ಅಂಬುರೆ ಇದ್ದರು.ಕಂಪನಿ ಸಾರ್ಜೆಂಟ್ ಮೇಜರ್ ಭೀಮರಾಯ ಹುಲಿಕಲ್,ಕವಾಯಿತು ನಿರ್ವಹಿಸಿದರು.ಇದೇ ಸಂದರ್ಭದಲ್ಲಿ ರಾಜು ಪಾಟೀಲ್ ಮತ್ತು ಬುಡ್ಡಪ್ಪ ಚವಲ್ಕರ್ ಮಾತನಾಡಿದರು.
ಹಿರಿಯ ಸಾರ್ಜೆಂಟ್ ಕೊಟ್ರಯ್ಯಸ್ವಾಮಿ,ಮಾನಯ್ಯ ನಾಯಕ,ಸೂರ್ಯಕಾಂತ್ ಮಾರ್ಗಲ್,ಶರಣು ಯಾದಗಿರಿ,ಬಲಭೀಮ ಗೋನಾಲ,ಅಂಬ್ರಪ್ಪ ಹೆಮ್ಮಡಗಿ,ಗುರುನಾಥ ಜಾಧವ್,ಚಂದ್ರು ದೀವಳಗುಡ್ಡ,ಸಿದ್ದಪ್ಪ ರೂಡಿಯರ್,ಕಿರಣಕುಮಾರ,ತಿಪ್ಪಣ್ಣ ಮುಂದಿನಮನಿ,ಮಾನಪ್ಪ ಚಲುವಾದಿ,ಮಾಳಪ್ಪ ಗೋನಾಲ,ಮಿಥುನ ಲಕ್ಷ್ಮೀಪುರ,ಖಾಜಾಸಾಬ್ ದೇವಾಪುರ,ಪ್ರಕಾಶ ಪ್ಯಾರಸಲರ್,ಆದಪ್ಪ ಅರಳಳ್ಳಿ ಸೇರಿದಂತೆ ಅನೇಕರಿದ್ದರು.