ನಿಮ್ಮ ಕಾನೂನು ಹಕ್ಕುಗಳ ಸಂರಕ್ಷಣೆ ಬಗ್ಗೆ ಅರಿವು

0
33

ಮಾಲೂರು: ತಾಲ್ಲೂಕಿನ ಕಸಬಾ ಹೋಬಳಿ ತೊರ‍್ನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಹಾಗೂ ಜಿಲ್ಲಾ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ “ಕಾನೂನು ಸೇವೆಗಳ ಪ್ರಾಧಿಕಾರಗಳು ನಿಮ್ಮ ಕಾನೂನು ಹಕ್ಕುಗಳ ಸಂರಕ್ಷಣೆ” ಬಗ್ಗೆ ಉಚಿತ ಕಾನೂನು ನೆರವು ಸಲಹೆ ಹಾಗೂ ಲೋಕ್ ಅದಾಲತ್ ಕಾರ್ಯಕ್ರಮವನ್ನು ತೊರ‍್ನಹಳ್ಳಿ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಪಿಡಿಓ ಚೌಡರೆಡ್ಡಿ ಮಾತನಾಡಿ 1987ರ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ ಕಾಲಂ 12ರಲ್ಲಿ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ಪಡೆಯಲು ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದವರು ಮಾನಸಿಕ ಅಥವಾ ಬೇರೆ ಯಾವುದೇ ನ್ಯೂನ್ಯತೆ ಹೊಂದಿರುವವರು, ಮಹಿಳಾ ಮತ್ತು ಮಕ್ಕಳ ಕಾರ್ಖಾನೆಯ ಕಾರ್ಮಿಕರು ಗುಂಪು ಘರ್ಷಣೆ, ಪ್ರವಾಹ, ಭೂಕಂಪ, ಮುಂತಾದವುಗಳಿಗೆ ತುತ್ತಾದವರು ಹಾಗೂ ಇತರೇ ಯಾವುದೇ ಪ್ರಸ್ತುತ ಕಾನೂನಿನ ಅಡಿಯಲ್ಲಿ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ಪಡೆಯಲು ಅರ್ಹ ವ್ಯಕ್ತಿಗಳಾಗಿರುತ್ತಾರೆ.

Contact Your\'s Advertisement; 9902492681

ಕರ್ನಾಟಕದಾದ್ಯಂತ ಇ-ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತಕ್ಷಣ ಪರಿಹಾರ ಮಾಡಿಕೊಳ್ಳಲು ಲೋಕ್ ಅದಾಲತ್ ಒಂದು ಸುವರ್ಣ ಅವಕಾಶವಾಗಿರುತ್ತದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದರು.

*ಈ ಕಾರ್ಯಕ್ರಮವು ತೊರ‍್ನಹಳ್ಳಿ ಗ್ರಾ.ಪಂ.ನ ತೊರ‍್ನಹಳ್ಳಿ, ಬೈರ‍್ನಹಳ್ಳಿ, ಸೊಣ್ಣನಾಯಕನಹಳ್ಳಿ, ಗೇರುಪುರ, ಬೆಳ್ಳಾವಿ, ಹೆಡಗಿನಬೆಲೆ, ಸೀತನಾಯಕನಹಳ್ಳಿ ಗ್ರಾಮಗಳಲ್ಲಿ ತೊರ‍್ನಹಳ್ಳಿ ಗ್ರಾ.ಪಂ. ಅಧ್ಯಕ್ಷ ಮುನಿಯಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.*

ಈ ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷ ಮುನಿಯಪ್ಪ,
ಉಪಾಧ್ಯಕ್ಷ ಸುಮಿತ್ರ ಲೋಕೇಶ್, ಗ್ರಾ.ಪಂ. ಸದಸ್ಯರಾದ ಬಿ.ಎಂ.ನಾಗರಾಜ್, ಶಿಲ್ಪ ಸಂತೋಷ್, ಮುರಳಿ, ಬಿ.ಜೆ.ವೀರಭದ್ರ, ವಕೀಲರಾದ ಸಾಗರ್‌ಗೌಡ, ಮುಖ್ಯಶಿಕ್ಷಕ ನಾಗರಾಜ್, ಶಿಕ್ಷಕ ಎಂ.ರಾಮಾಂಜನೇಯ, ಬೆಳ್ಳೂರಪ್ಪ, ಆಶಾಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಬಿಲ್‌ಕಲೆಕ್ಟರ್ ಎಂ.ನಾಗರಾಜ್, ಕಂಪ್ಯೂಟರ್ ಆಪರೇಟರ್ ಟಿ. ಕೆ.ಮುನಿರಾಜ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here