ಜೇವರ್ಗಿ: ಇಲ್ಲಿನ ಕೋಳಕೂರ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಯನ್ನು ಕಲಬುರಗಿ 2ನೇ ಅಪರ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗೋಪಾಲಪ್ಪ ಎಸ್. ಪ್ರಕರಣದ ವಾದ ವಿವಾದವನ್ನು ಪರಿಶೀಲಿಸಿ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ 1 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸಲೀಮ ಕುತಬೋದ್ದಿನ್ ಶಿಕ್ಷೆಗೆ ಗುರಿಯಾದ ಆರೋಪಿ, ಆರೋಪಿ ಸಲೀಮ ಕೋಳಕೂರ ಗ್ರಾಮದ ಬಾಲಕಿಯನ್ನು ಹಿಂಬಾಲಿಸಿ ಸಿಳ್ಳೆ ಹೊಡೆದೆ ಚುಡಾಯಿಸಿ, ಬಾಲಕಿ ನೀರಿಗೆ ಹೋಗುವಾಗ ಬೈಕ್ ಮೇಲೆ ಬಂದು ಅಪಹರಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ, ಬಾಲಕಿಯನ್ನು ಮುಂಬೈಗೆ ಕರೆದುಕೊಂಡು ಹೋಗಿ ಅಲ್ಲಿಯೂ ಅತ್ಯಾಚಾರ ನಡೆದ ಎನ್ನಲಾಗಿದೆ.
ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಪೊಲೀಸರು ತನಿಖೆ ನಡೆಸಿ ಪೊಸ್ಕೋ ಕಾಯ್ದೆ ಅಡಿಯಲ್ಲಿ ದೋಷಾರೋಪಣೆಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಮಾನ್ಯ 2ನೇ ಅಪರ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗೋಪಾಲಪ್ಪ ಎಸ್. ಇವರು ಪ್ರಕರಣದ ವಾದ ವಿವಾದಗಳನ್ನು ಆಲಿಸಿದ ನಂತರ ಪ್ರಕರಣದ ಆರೋಪಿ ಸಲೀಮನನ್ನು ಕಲ೦ 366(ಎ), 376(2)(ಐ)(೧). 109, ಐಪಿಸಿ ಮತ್ತು ಕಲಂ 4, 6 17, ಪೊಸ್ಕೋ ಕಾಯ್ದೆ ಅಡಿ ಅಪರಾದವೆಸಗಿದ್ದು ಸಾಬೀತಾಗಿದ್ದು, ಇತನಿಗೆ 366(ಎ) ಐಪಿಸಿ ಅಡಿ 10 ವರ್ಷ ಕಠಿಣ ಶಿಕ್ಷೆ. ರೂ 1 ಲಕ್ಷ ದಂಡ, 376(2)(ಎನ್) ಐಪಿಸಿ ಮತ್ತು ಕಲಂ 6 ಪೊಸ್ಕೋ ರಡಿ ಜೀವಾವಧಿ ಶಿಕ್ಷೆ, 1 ಲಕ್ಷ ರೂ ಗಳು ದಂಡವಿಧಿಸಿ ತೀರ್ಪು ನೀಡಿ ಆದೇಶ ಹೋರಡಿಸಲಾಗಿದೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ನೆರವು ಸಮಿತಿಯಿ೦ದ ರೂ 5 ಲಕ್ಷ ಪರಿಹಾರ ನೀಡುವಂತೆ ನ್ಯಾಯಲಯ ಆದೇಶಿಸಿದೆ.. ಪ್ರಕರಣದ ಕುರಿತು ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಬಿಯೋಜಕರಾದ ಪೋಕ್ಲೋ ಎಲ್.ವಿ.ಚಟ್ನಾಳಕರ, ಇವರುಪ್ರಕರಣದಲ್ಲಿ ವಾದ ಮಂಡಿಸಿದ್ದರು.