ಕಲಬುರಗಿ: ಎಸ್.ಎಸ್.ಎಲ್.ಸಿ ಸಪ್ಲಿಮೆಂಟರಿ ಫಲಿತಾಂಶ ಪ್ರಕಟವಾಗಿದ್ದು, ಇಲಾಖೆಯ ಲೋಪದ ಕಾರಣ ಇಬ್ಬರು ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಭಾರೀ ಗೊಂದಲವುಂಟಾಗಿದೆ.
ನಗರದ ದಿ ಲೀಮರಾ ಅಕಡಮಿ ಪ್ರೌಢ ಶಾಲೆಯ ಸಮಿರ್ ಅಲಿ ಎಂಬ ವಿದ್ಯಾರ್ಥಿ ಎನೆವಲ್ ಪರೀಕ್ಷೆಯಲ್ಲಿ ನೀಡಿದ ಹಾಲ್ ಟಿಕೆಟ್ ಸಲ್ಪಿಮೆಂಟ್ರಿ ಪರೀಕ್ಷೆಗೂ ನೀಡಿದ ಕಾರಣ ಸಪ್ಲಿಮೆಂಟರಿ ಪರೀಕ್ಷೆಯ ಫಲಿತಾಂಶ ನೋಡಲು ವಿದ್ಯಾರ್ಥಿ ತೆರಳಿದಾಗ ಈ ಅವಘಡ ಬೆಳಕಿಗೆ ಬಂದಿದೆ.
ಸಮಿರ್ ಎನೆವಲ್ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ 16 ಮಾರ್ಕ್ಸ ಪಡೆದಿದ್ದು ಅನುತ್ತೀರ್ಣರಾಗಿದ್ದು, ಈಗ ಸಪ್ಲಿಮೆಂಟರಿ ಪರೀಕ್ಷೆ ಬರೆದಿದ್ದು, ಇಂದು ಫಲಿತಾಂಶ ನೋಡಿದಾಗ ಎನೆವಲ್ ಪರೀಕ್ಷೆ ಫಲಿತಾಂಶ ಬರುತ್ತಿದೆ ಎಂದು ಗಾಬರಿಯಾಗಿದ್ದ. ಸಪ್ಲಿಮೆಂಟರಿ ಫಲಿತಾಂಶದ ಕುರಿತು ಗೊತ್ತಾಗದೆ ಕಕ್ಕಾಬಿಕಿಯಾಗಿ ಪರದಾಡುತ್ತಿದ್ದಾನೆ.
ಈ ಕುರಿತು ಶಿಕ್ಷಣ ಇಲಾಖೆಯ ಬಿಓ ಮಾತನಾಡಿ ಎನೆವಲ್ ಪರೀಕ್ಷೆಗೆ ನೀಡಿರುವ ಹಾಲ್ ಟಿಕೆಟ್ ಸಂಖ್ಯೆ ಸಪ್ಲಿಮೆಂಟರಿಗೆ ಬದಲಾಗುತ್ತದೆ ಆದರೆ ಈ ರೀತಿ ಗೊಂದಲ ಆಗುವುದಿಲ್ಲ, ಅಂತಹ ಏನಾದರು ಗೊಂದಲ ಸೃಷ್ಟಿಯಾಗಿದ್ದರೆ ತಮ್ಮ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆಯಬಹುದೆಂದು ತಿಳಿಸಿದ್ದಾರೆ.
ಒಂದು ವೇಳೆ ಈ ಸಮಸ್ಯೆ ಇದರೆ ವಿದ್ಯಾರ್ಥಿ ಮೌಲ್ಯಮಾಪನ ಹಾಕಬೇಕು ಮತ್ತು ಪರೀಕ್ಷಾ ಬೋರ್ಡನಿಂದ ಉತ್ತರ ಪತ್ರಿಕೆಯ ಪ್ರತಿ ತರಿಸಿಕೊಂಡು ನೋಡಬೇಕೆಂದು ಶಿಕ್ಷಕರರೊಬ್ಬರು ಸಲಹೆ ನೀಡಿದ್ದಾರೆ.
ಇಂತಹ ಸಮಸ್ಯೆ ಜಾಸಮಿನ್ ಪಬ್ಲಿಕ್ ಪ್ರೌಢ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಅಜರೋದ್ದೀನ್ ಫಲಿತಾಂಶದಲ್ಲಿ ಈ ರೀತಿಯ ಗೊಂದಲವುಂಟಾಗಿದೆ ಎಂದು ತಿಳಿದು ಬಂದಿದೆ.
ಈ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಮೌಲ್ಯಮಾಪನ ಶುಲ್ಕ ಮತ್ತು ಉತ್ತರ ಪತ್ರಿಕೆ ತರಿಸಕೊಳಲು ಬೇಕಾಗುವ ಶುಲ್ಕ 1000ಕ್ಕೂ ಅಧಿಕ ಶುಲ್ಕ ಖರ್ಚು ಇದ್ದು, ವಿದ್ಯಾರ್ಥಿ ಅಥವ ಪೋಷಕರ ಹೆಗಲಿಗೆ ಬಿಳಲಿದೆ.
ಇಲಾಖೆಯಿಂದ ಆಗಿರುವ ಈ ಯಡವಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯ ಆತಂತ್ರಕ್ಕೆ ಸಿಲಕುವಂತಾಗಿದೆ.