ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯೂ ಮತ್ತು ಬಿ.ಎಚ್. ನಿರಗುಡಿಯೂ…!

1
58
  • ಡಾ. ಶಿವರಂಜನ್ ಸತ್ಯಂಪೇಟೆ

ಬಾಬು ಹಾಗೂ ನಿರಗುಡಿ ಎಂಬ ಹೆಸರಿನಿಂದ ಜಿಲ್ಲೆಯಾದ್ಯಂತ ಚಿರಪರಿಚಿರಾಗಿರುವ ಬಿ.ಎಚ್. ನಿರಗುಡಿಯವರು ಈ ಬಾರಿಯ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಮೂಲತಃ ಆಳಂದ ತಾಲ್ಲೂಕಿನ ಕವಲಗಾ ಗ್ರಾಮದವರಾದರೂ ಬಾಲ್ಯದಿಂದಲೇ ಕಲಬುರಗಿಯಲ್ಲಿ ವಾಸವಾಗಿದ್ದಾರೆ. ಕನ್ನಡ ಎಂ.ಎ., ಎಂ.ಫಿಲ್ ಹಾಗೂ ಎಂ.ಇಡಿ ಪದವೀಧರರಾಗಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ, ಕನ್ನಡ ಭಾಷೆ ಹಾಗೂ ವ್ಯಾಕರಣ, ಕನ್ನಡ ಸಾಹಿತ್ಯ ದರ್ಪಣ, ಅಬ್ದುಲ್ ಕಲಾಂ, ಮಾಧ್ಯಮ ಲೋಕ, ಆದರ್ಶ ಶಿಕ್ಷಕ ಹೇಗಿರಬೇಕು?, ಕಾವ್ಯ ಸಂಭ್ರಮ ಸೇರಿದಂತೆ ಸುಮಾರು 11ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾಗಿ ಸಾಕಷ್ಟು ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Contact Your\'s Advertisement; 9902492681

ಈ ಹಿಂದೆ ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಅವಧಿಯಲ್ಲಿ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮೇಲಾಗಿ ಮಹಿಪಾಲರೆಡ್ಡಿ ಮುನ್ನೂರ ಗೆಲುವಿನಲ್ಲಿ ಸಾಕಷ್ಟು ಶ್ರಮವಹಿಸಿ ತಮ್ಮ ಕತೃತ್ವ ಶಕ್ತಿಯನ್ನು ಸಾಬೀತುಪಡಿಸಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡು ಈ ಬಾರಿ ಮತ್ತೆ ಕಣಕ್ಕಿಳಿದು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಸಾಹಿತ್ಯ ಸಾರಥಿ ಎಂಬ ಮಾಸಿಕ ಪತ್ರಿಕೆ ಆರಂಭಿಸಿ ಅನೇಕ ಉದಯೋನ್ಮುಖರಿಗೆ ವೇದಿಕೆ ಒದಗಿಸಿದ್ದಾರೆ.

ಪತ್ರಕರ್ತರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯರಾಗಿದ್ದಾರೆ. ನಗರದ ಖಾಸಗಿ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲಾ ಯುವ ಪ್ರಶಸ್ತಿ, ರಾಜ್ಯ ಯುವ ಪ್ರಶಸ್ತಿ, ಗುಲ್ಬರ್ಗ ವಿವಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಶ್ರೇಷ್ಠ ಶಿಕ್ಷಕ ಪ್ರಶಸ್ತಿ, ದೇವರಾಜ ಅರಸ ಪ್ರಶಸ್ತಿ, ಕರುನಾಡು ಪ್ರಶಸ್ತಿ, ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ, ಗೌಡ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಣಾಳಿಕೆ: ಬಾಪೂಗೌಡ ದರ್ಶನಾಪುರ ರಂಗ ಮಂದಿರಕ್ಕೆ ಅತ್ಯಾಧುನಿಕ ಧ್ವನಿ ವರ್ಧಕ, ಬೆಳಕು, ಸುಖಾಸನ ಅಳವಡಿಸಿಸುವುದು, ಪ್ರತಿ ವರ್ಷ ಪುಸ್ತಕ ಸಂತೆ ಆಯೋಜಿಸುವುದು, ಶಿಕ್ಷಕರ, ಮಕ್ಕಳ, ಮಹಿಳಾ, ವೈದ್ಯ, ಕೃಷಿ ಸಮ್ಮೇಳನ ನಡೆಸುವುದು, ಬಯಲು ರಂಗ ಮಂದಿರ ನಿರ್ಮಾಣಕ್ಕೆ ಆದ್ಯತೆ, ಸಾಹಿತ್ಯಕ ಮತ್ತು ಕನ್ನಡಪರ ಸಂಘಟನೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಕನ್ನಡ ಭವನದ ರಂಗ ಮಂದಿರವನ್ನು ರಿಯಾಯಿತಿ ದರದಲ್ಲಿ ನೀಡುವುದು ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನು ತಮ್ಮ ಪ್ರಣಾಳಿಕೆಯ ಪಟ್ಟಿ ಮಾಡಿಕೊಂಡು ಮತದಾರರ ಮನೆ, ಮನ ತಟ್ಟುತ್ತಿದ್ದಾರೆ.

ಜಿಲ್ಲೆಯ ಸಾಮನ್ಯ ಮತದಾರರ ಜೊತೆಗೆ ಪ್ರಜ್ಞಾವಂತ, ಪ್ರಗತಿಪರ ಹಾಗೂ ಸ್ವಾಮೀಜಿಗಳ ಬೆಂಬಲ ತಮಗಿದ್ದು, ಗೆಲುವಿಗಾಗಿ ಕಳೆದ ಸಲಕ್ಕಿಂತ ಈ ಬಾರಿ ಸಾಕಷ್ಟು ಶ್ರಮಿಸುತ್ತಿದ್ದೇನೆ. ಮತದಾರರು ಈ ಬಾರಿ ನನ್ನ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಾನು, ಒಂದು ಬಾರಿ ಅಧ್ಯಕ್ಷನಾಗಿ ಆಯ್ಕೆಯಾದರೆ ಮತ್ತೊಂದು ಬಾರಿ ಚುನಾವಣೆಗೆ ನಿಲ್ಲುವುದಿಲ್ಲ. ಮುಂದಿನ ಸಲ ಮತ್ತೊಬ್ಬರಿಗೆ ಅವಕಾಶ ಮಾಡಿ ಕೊಡುವೆ. ದಯವಿಟ್ಟು ಮತ ಹಾಕಿ ಗೆಲ್ಲಿಸಿ. – ಬಿ.ಎಚ್. ನಿರಗುಡಿ

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here