ಆಧ್ಯಾತ್ಮಿಕ ಪ್ರವಚನ ಭಾಗ-೭

0
37

ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ,
ಸಕಲವಿಸ್ತಾರದ ರೂಹು ನೀನೇ ದೇವಾ.
ವಿಶ್ವತಶ್ಚಕ್ಷು ನೀನೇ ದೇವಾ
ವಿಶ್ವತೋಮುಖ ನೀನೇ ದೇವಾ
ವಿಶ್ವತೋಬಾಹು ನೀನೇ ದೇವಾ,
ವಿಶ್ವತಃಪಾದ ನೀನೇ ದೇವಾ
ಕೂಡಲಸಂಗಮದೇವಾ
-ಬಸವಣ್ಣ

ಬದುಕು ಒಂದು ಅಮೂಲ್ಯವಾದ ಅವಕಾಶ. ಈ ಬದುಕು ಎಲ್ಲವೂ ಕೊಡುತ್ತದೆ. ಸರಿಯಾಗಿ ಬಳಸಿಕೊಂಡವರು ಶಾಂತಿ ಮತ್ತು ಸಮೃದ್ಧಿ ಪಡೆಯುವರು. ಅಂತರಂಗದಲ್ಲಿ ಶಾಂತಿ, ಬಹಿರಂಗದಲ್ಲಿ ಸಮೃದ್ಧಿ ಇರಬೇಕು. ಒಂದು ವೃಕ್ಷ ಒಂದು ಬೀಜದಿಂದ ಬೆಳೆಯುತ್ತದೆ. ಹಸಿರು, ಹೂ, ಹಣ್ಣು ಕೊಡುತ್ತದೆ. ಹೂ ಮನಸ್ಸು ಅರಳಿಸುತ್ತದೆ. ಹಣ್ಣು ದೇಹವನ್ನು ರಕ್ಷಿಸುತ್ತದೆ. ಬದುಕು ಸಾರ್ಥಕವಾಗಲು ಶಾಂತಿ ಮತ್ತು ಸಮೃದ್ಧಿ ಮುಖ್ಯ. ನೋಡುವುದಕ್ಕೆ ಕೇಳುವುದಕ್ಕೆ ಬದುಕುವುದಕ್ಕೆ ನಿಸರ್ಗ ನೋಡಿದರೆ ಸಂಪತ್ತಿನ ಅನುಭೂತಿ ಆಗುತ್ತದೆ. ವಿಶಾಲ ಜಗತ್ತು ನೋಡಿದ ದೃಷ್ಟಿ ಶ್ರೀಮಂತ. ಕಣ್ಣು, ಕಿವಿ ಶ್ರೀಮಂತವಾಗಬೇಕು. ಏನು ಕೇಳಬೇಕೊ ಏನು ನೋಡಬೇಕು ಎಂಬ ನಿರ್ಧಾರ ಮುಖ್ಯ.

ಗಿಡಕ್ಕೆ ಹಸವನ್ನೇ ಹಾಕುತ್ತೇವೆ. ಅದು ಕಸದಿಂದ ರಸವನ್ನೇ ಹಿರಿಕೊಂಡು ಸವಿಯಾದ ಹಣ್ಣು ಕೊಡುತ್ತದೆ. ಹಕ್ಕಿಗಳ ಹಾಡು ಕಿವಿ ಕೇಳಿ ಮಧುರವಾಗಬೇಕು. ಅವೆಲ್ಲ ನಮಗಾಗಿ ಹಾಡುತ್ತವೆ. ಗಿಳಿಯ ಮಾತು ಹೇಳಬೇಕು. ನೀನು ಮಾತಾಡಬೇಕು. ಹಾಡಬೇಕು. ಕಿವಿ ಸಮೃದ್ಧವಾಗಬೇಕು. ಕಣ್ಣು, ಕಿವಿ ಇಲ್ಲದ ಜೀವನಕ್ಕೆ ಅರ್ಥವೇ ಇಲ್ಲ. ಕಣ್ಣು, ಕಿವಿ ಅಷ್ಟೊಂದು ಪ್ರಮುಖ ನೋಡುವುದು, ಕೇಳುವುದು ಜೀವನದ ಆನಂದ ಹೆಚ್ಚಿಸುವುದು. ಸೂರ್ಯನ ಬೆಳಕು ಶಾಂತವಾದ ವಾತಾವರಣ ನಿತ್ಯ ಅನುಭವಿಸುವ ಮನುಷ್ಯನ ಬದುಕು ಆನಂದ.

Contact Your\'s Advertisement; 9902492681

ಹಣವು ಕಣ್ಣು ಕಿವಿಗೆ ಸಮವಿಲ್ಲ. ಸಂಪತ್ತು ಕೂಡ ಸಮವಿಲ್ಲ. ಹಾಗಾಗಿ ನಾವು ಬಡವರಲ್ಲ. ಬಣ್ಣ, ಆಕಾರ, ಮನಸ್ಸು ನೋಡಿ ಶ್ರೀಮಂತವಾಗಬೇಕು. ಬರೀ ತಿಪ್ಪಿಯನ್ನೇ ನೋಡಿದರೆ ಎನರ್ಥ? ಜಗತ್ತಿನ ಸೌಂದರ್ಯ ನೋಡಬೇಕು. ತಿಪ್ಪೆ ನೋಡಿದವರೂ ಹೂ ಅರಳಿದ್ದು ನೋಡಲಿಲ್ಲ. ತಿಪ್ಪೆ ಹೊಲಸು ಇರಬಹುದು. ದುರ್ಗಂಧ ಇರಬಹುದು ಆದರೆ ಅದರಲ್ಲಿ ಬೆಳೆದ ಹೂ ಸುಂದರ ಮತ್ತು ಸುಗಂಧಭರಿತ. ದೇವರು ಒಳ್ಳೆಯದನ್ನು ನೋಡಲಿಕ್ಕೆ ಕಣ್ಣು ಕೊಟ್ಟಿರುವನು. ಕಣ್ಣು ಸೃಷ್ಟಿಯ ಸೌಂದರ್ಯ ನೋಡಿ ಮನಸ್ಸು ತುಂಬಿಕೊಂಡು ಆನಂದಸಬಹುದು.

ವರ್ಣ ವೈಭವ, ಆಕಾರ ವೈಭವ ನೋಡುವ ಸಾಮರ್ಥ್ಯ ಕಣ್ಣುಗಳಿಗಿದೆ. ಆನಂದದಿಂದ ಮನಸ್ಸು ತುಂಬಿ ನಲಿಯುತ್ತದೆ ಎದೆ ಆನಂದದಿಂದ ಉಕ್ಕುತ್ತದೆ. ಕಿವಿಗಳಿಂದ ಶಬ್ದ ಜಗತ್ತನ್ನು ಕೇಳಬೇಕು. ಹಕ್ಕಿಯ ಹಾಡು ಶಬ್ದನಾದ ವರ್ಣಸಂಪತ್ತು ನೋಡುವುದೇ ಒಂದು ಸೊಬಗು. ಸಾಧನೆಗೆ ಕಣ್ಣು, ಕಿವಿ ಮೂಲ ಕಾರಣ. ಸರಿಯಾಗಿ ಬಳಸಿಕೊಳ್ಳಬೇಕು.

ಹೃದಯ ಅರಳಿಸುವ ದೃಶ್ಯ ನೋಡಬೇಕು. ಶಬ್ದ ಕೇಳಬೇಕು. ದೇವರು ಕೊಟ್ಟ ನಿಸರ್ಗ ಬಳಸಿ ಬದುಕನ್ನು ಸ್ವರ್ಗ ಮಾಡಿಕೊಳ್ಳಬೇಕು. ಯಾವ ಸ್ಥಳದಲ್ಲಿ ಇದ್ದೇವೆ ಎಂಬುದು ಮಹತ್ವವಲ್ಲ. ಕಣ್ಣು ಕವಿಗಳನ್ನು ಬಳಸುವುದೇ ಮುಖ್ಯ. ಮನೆಯ ಬಾಗಿಲು, ಕೀಟಕಿ ತೆರೆದಿಡಬೇಕು. ಕತ್ತಲೆಯಿಂದ ಹೊರಗೆ ಬಂದು ಬೆಳಕು ನೋಡಬೇಕು. ರೈತ ಶ್ರಮ ನೋಡಬೇಕು. ಭೂಮಿಯಿಂದ ಹಸಿರು ತರುವಲ್ಲಿ ರೈತನ ಪ್ರಯತ್ನ ಸಾಗಿದೆ. ರಸ್ತೆ ನಿರ್ಮಿಸುವಲ್ಲಿ ಕಾರ್ಮಿಕನ ಪ್ರಯತ್ನ ಸಾಗಿದೆ. ಬಿಸಿಲಿನ ಶಾಖ ಲೆಕ್ಕಿಸದೆ ಅವರು ದುಡಿಯುತ್ತಿದ್ದಾರೆ.

ಬೆಳಕು, ಗಾಳಿ, ಹಕ್ಕಿಯ ಹಾಡು ರೈತ ಮತ್ತು ಕಾರ್ಮಿಕ ದುಡಿಮೆಗಳಲ್ಲಿ ಭಗವಂತ ಇದ್ದಾನೆ. ಕಣ್ಣು, ಕಿವಿ ಬಳಸಿ ಆ ಸೌಂದರ್ಯ ಅನುಭವಿಸಬೇಕು. ಅವುಗಳ ಆಯುಷ್ಯ ಮುಗಿಯುವುದರೊಳಗೆ ಚೆನ್ನಾಗಿ ಬಳಸಬೇಕು. ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ, ಸಕಲ ವಿಸ್ತಾರದ ರೂಹು ನೀನೇ ದೇವಾ ಎಂದು ಬಸವಾದಿ ಶರಣರು ಈ ದಿವ್ಯ ಜಗತ್ತು ನೋಡಿದರು. ಸಂತರು, ಮಹಾಂತರು ನೋಡಿದರು. ಧ್ವನಿ ಕೇಳಿದರು. ಇಲ್ಲಿಯೇ ದೇವನನ್ನು ಕಂಡರು. ಅನುಭವಿಸಿದರು. ಬದುಕು ಸಾರ್ಥಕ ಮಾಡಿಕೊಂಡರು. ಒಂದಿಷ್ಟು ಜ್ಞಾನ ಹಂಚಿದರು. ಇವರು ನಮಗೆ ನೋಡುವುದು ಕೇಳುವುದು ಕಲಿಸಿದರು. ದೇವನ ಜಗತ್ತು ಕೆಡಿಸಬಾರದು. ಸೂರ್ಯ್ಯೋದಯ, ವಿಶಾಲ ಸಾಗರ ನೋಡಿ ಆನಂದಿಸಬೇಕು.

ಕಣ್ಣು-ಕಿವಿ ಕೆಡಿಸಿಕೊಂಡವರು ಬಡವರು. Iಜಿ ಣheಡಿe is ಟಿo ತಿಚಿಣeಡಿ ಟಿo ಟiಜಿe ಚಂದ್ರ, ಮಂಗಳ, ಗುರು ಗ್ರಹಗಳಿಗೆ ಮನುಷ್ಯ ಹೋದರೆನಂತೆ ಅಲ್ಲಿ ನೀರಿಲ್ಲ. ಭೂಮಂಡಲದಲ್ಲಿ ಮಾತ್ರ ನೀರು ಇದೆ. ಹೇ ಮನುಷ್ಯನೇ ನೀನು ನೀರು ಕುಡಿಯಬೇಕು. ನೀರಾ ಕುಡಿಯಬಾರದು. ಇದುವೇ ಸಮೃದ್ಧಿ ಬದುಕು. ಕಣ್ಣು, ಕಿವಿ, ಕೈ, ಕಾಲು ಶ್ರೀಮಂತವಾದರೆ ಶ್ರೇಯಸ್ಸು ಹತ್ತು ಬೆರಳುಗಳಿಗೆ ಹತ್ತು ಉಂಗರುಗಳು ಶೋಭೆ ಅಲ್ಲ. ಕೈಗಳು ದುಡಿದರೆ ಮಾತ್ರ ಶೋಭೆ ಶೃಂಗಾರ. ಮನುಷ್ಯ ದುಡಿಯಲಿಕ್ಕೆ ಬಂದಿದ್ದಾನೆ. ಪ್ರತಿಕ್ಷಣವೂ ಕೆಲಸ ಮಾಡಬೇಕು. ಬಳ್ಳಿ ದಿನಾಲು ಕೆಲಸ ಮಾಡಿ ಹೂ ತಯಾರಿಸುತ್ತದೆ. ಹಾಗೆ ಮನುಷ್ಯ ಕೂಡ ದುಡಿದು ಆನಂದ ಪಡೆಯಬೇಕು.

ಕೆಂಪು, ಹಳದಿ, ಕಪ್ಪು, ಬಿಳಿ ಬಣ್ಣಗಳು ಮುಖ್ಯವಲ್ಲ. ನೀರು, ಅನ್ನ ಮುಖ್ಯ. ಕಣ್ಣು ನೋಡಬೇಕು. ಕಿವಿ ಕೇಳಬೇಕು. ಕೈ ಕೆಲಸ ಮಾಡಬೇಕು. ಕಾಲು ನಡೆಯುತ್ತಿರಬೇಕು. ಮನುಷ್ಯ ಇಲ್ಲಿ ಸುಮ್ಮನೆ ಕುಳಿತುಕೊಳ್ಳಲು ಅಥವಾ ಮಲಗಲು ಬಂದಿಲ್ಲ. ಗಾಡಿ ಮತ್ತು ಕುರ್ಚಿ ಬಳಕೆಯಲ್ಲಿ ಮಿತಿ ಇರಬೇಕು. ಇದೊಂದು ಅದ್ಭುತ ಜೀವನ, ಅಭ್ಯುದಯ ಬದುಕು ಶ್ರೀಮಂತ ಜೀವನ ಇರುವಾಗ ಮನುಷ್ಯ ನೀನು ಬಡವನಲ್ಲ. ರಂಗೋಲಿ ಹಾಕಿ ನೆಲೆ ಸಾರಿಸಿದ್ದು ದೀಪ ಹಚ್ಚಿದವರು ಯಾರೊ ಇದ್ದಾರೆ. ಆದರೆ ನೋಡಿದವರ ಮನಸ್ಸು ಅರಳಿವೆ.

ಮಾಡಿದವರು ನೋಡಿದವರು ಸಂತೋಷ ಪಡುವುದು. ಹೊರಗಿನ ಸೌಂದರ್ಯ, ಸಮೃದ್ಧಿ ಅಭ್ಯುದಯ ಕಣ್ಣು ನೋಡಬೇಕು. ಕಿವಿ ಕೇಳಬೇಕು. ಆಗ ಅಂತರಂಗದಲ್ಲಿ ಶಾಂತಿ ನೆಲೆಸಿ ಮನಸ್ಸು ಮದಗೊಳ್ಳುವುದು. ಇದು ನಿಶ್ರೇಯಸಹ ಎಷ್ಟು ತಿನ್ನತ್ತೇವೆ ಮುಖ್ಯವಲ್ಲ. ರುಚಿ ಮಾಡಿ ತಿನ್ನುವುದು ಮುಖ್ಯ. ಕೊರತೆಗಳಿಂದ ದುಃಖಿಸಬಾರದು. ಇದ್ದುದ್ದರಲ್ಲಿಯೇ ಆನಂದಿಸಬೇಕು. ಕಾಗೆ ಬಣ್ಣ ಕಪ್ಪು ಅದರ ಧ್ವನಿ ಕರ್ಕಶ ಆದರೆ ಮನುಷ್ಯ ಒಳಗೆ ಕಪ್ಪು ಹೊರಗೆ ಬಿಳಿ ಬಣ್ಣ ಹೊಂದಿದ್ದಾನೆ. ಮನುಷ್ಯನ ಬದುಕು ಒಳಹೊರಗೂ ಸುಂದರಗೊಳ್ಳಬೇಕು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here