ರಾಯಚೂರು: ಇಲ್ಲಿನ ಸಗಮಕುಂಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೋರ್ವಿಹಾಳ ಗ್ರಾಮದಿಂದ ರಾಯಚೂರು ಗೆ ವಿದ್ಯಾಭ್ಯಾಸಕ್ಕಾಗಿ ತೆರಳುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಇಲ್ಲದೇ ಪರದಾಡು ಸ್ಥಿತಿ ನಿರ್ಮಾಣವಾಗಿದ ಎಂದು ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಅಳಲು ವ್ಯಕ್ತಪಡಿಸಿದ್ದರು.
ಕೊರ್ವಿಹಾಳ, ಗಂಜಳ್ಳಿ, ಶಿವ ವಿಳಾಸ ನಗರ, ಸಗಮಕುಂಟ ಗ್ರಾಮಗಳಿಂದ ವಿದ್ಯಾರ್ಥಿಗಳು ಬೆಳ್ಳಿಗ್ಗೆ 6:00 ಬಸ್ ಗೆ ರಾಯಚೂರುಗೆ ಬರುತ್ತಾರೆ ಆದರೆ ಮಧ್ಯಾಹ್ನ 2 ಗಂಟೆ ವೇಳೆಗೆ ಬಸ್ ಪ್ರತಿ ದಿನ ಬರದೆ ಇರುವುದರಿಂದ ವಿದ್ಯಾರ್ಥಿಗಳು ಸಮಯ ಪಾಲನೆ ಮತ್ತು ಹಲವು ರೀತಿಯ ಸಮಸ್ಯೆಗಳನ್ನು ಎದ್ದುರಿಸುವಂತಹ ವಾತಾವರಣ ನಿರ್ಮಾಣವಾಗಿದ ಎಂದು ಸ್ಥಳೀಯ ವಿದ್ಯಾರ್ಥಿಗಳು ಇ-ಮೀಡಿಯಾ ಲೈನ್ ಗೆ ತಿಳಿಸಿದ್ದಾರೆ.
ಸೂಕ್ತ ಬಸ್ ವ್ಯವಸ್ಥೆಗೆ ಒತ್ತಾಯಿಸಿ ಡಿ.ಪೋ ಗೆ ಕರೆ ಮಾಡಿ ವಿಚಾರಿಸಿದರೆ ವಿದ್ಯಾರ್ಥಿಗಳ ಮಾತಿಗೆ ಸ್ಪಂದಿಸುತ್ತಿಲ್ಲ ಆದರಿಂದ ವಿದ್ಯಾರ್ಥಿಗಳು 6:00 ಗೆ ಬಂದು 10:00 ಗಂಟೆಗೆ ಮನೆಗೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸದರಿ ವಿಷಯದ ಕುರಿತು ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕುಡುವ ನಿಟ್ಟಿನಲ್ಲಿ ಬಸ್ ಸೌಲಭ್ಯ ವದಗಿಸಬೇಕೆಂದು ಅಧಿಕಾರಿಗಳಲ್ಲಿ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.