ಆರೋಗ್ಯ ಕೇಂದ್ರದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ ನೆಹರು ಪುತ್ಥಳಿ

0
117

ಶಹಾಬಾದ:ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ ಬೇಟಿ ನೀಡಿದರೇ ರೋಗಿಗಳು, ಆಸ್ಪತ್ರೆಯ ಸಿಬ್ಬಂದಿಗಳು ಸಿಗುತ್ತಾರೆ ಇಲ್ಲವೋ ಗೊತ್ತಿಲ್ಲ.ಅಲ್ಲೊಂದು ಮೂರ್ತಿ ಮಾತ್ರ ಸಿಗುತ್ತದೆ.ಅದು ನಮ್ಮ ಮಾಜಿ ಪ್ರಧಾನಿ ಜವಾಹರಲಾಲ ನೆಹರು ಅವರ ಪುತ್ಥಳಿ.

ಉದ್ಯಾನವನ ಮತ್ತು ವೃತ್ತದಲ್ಲಿ ಮಹಾನ್ ವ್ಯಕ್ತಿಗಳ ಪ್ರತಿಮೆಗಳು ಕಂಡು ಬರುವುದು ಸಹಜ.ಅದೇನಪ್ಪ ಆಸ್ಪತ್ರೆಯಲ್ಲಿ ನೆಹರು ಅವರ ಪುತ್ಥಳಿ ಎಂದು ಇದೆ ಎಂದು ಆಶ್ವರ್ಯಪಡಬೇಕಾಗಿಲ್ಲ.ಈಗಿನ ಸಮುದಾಯ ಆರೋಗ್ಯ ಕೇಂದ್ರದ ಸ್ಥಳ ಮೊದಲು ಪುರಸಭೆಯ ಉದ್ಯಾನವನ ಆಗಿತ್ತು.ಆಗ ಆ ಉದ್ಯಾನವನದಲ್ಲಿ ನೆಹರು ಅವರ ಪುತ್ಥಳಿಯನ್ನು ಸಾರ್ವಜನಿಕರ ಆಕರ್ಷಣೆಗಾಗಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಮುಂದೆ ಇದೇ ಉದ್ಯಾನವನ್ನು ನೆಹರು ಉದ್ಯಾನವಾನ(ನೆಹರು ಗಾರ್ಡನ್) ಆಗಿ ಪರಿವರ್ತನೆಯಾಯಿತು. ಮುಂದೆ ಉದ್ಯಾನವನದ ಸ್ಥಳವನ್ನು ಆಸ್ಪತ್ರೆಯ ಕಟ್ಟಡದ ನಿರ್ಮಾಣಕ್ಕಾಗಿ ಆಗಿನ ಪುರಸಭೆಯವರು ಆರೋಗ್ಯ ಇಲಾಖೆಗ ಬಿಟ್ಟು ಕೊಟ್ಟರು.

Contact Your\'s Advertisement; 9902492681

ಮೂರು ದಶಕಗಳ ಹಿಂದಿನ ನೆಹರು ಉದ್ಯಾನವನದಲ್ಲಿರುವ ಗಿಡ, ಮರ, ಕಾರಂಜಿ ಹಾಗೂ ಗ್ರಂಥಾಲಯವನ್ನು ತೆರವುಗೊಳಿಸಿದರು.ಆದರೆ ನೆಹರೂಜಿಯವರ ಪುತ್ಥಳಿ ಮಾತ್ರ ಹಾಗೆಯೇ ಉಳಿಯಿತು.ಪುತ್ಥಳಿ ಕಟ್ಟಡದೊಳಗೆ ಬಂದರೂ ಅದನ್ನು ಸ್ಥಳಾಂತರಿಸುವ ಗೋಜಿಗೆ ಗುತ್ತಿಗೆದಾರ ಹಾಗೂ ಪುರಸಭೆಯ ಅಧಿಕಾರಿಗಳು ಹೋಗಲಿಲ್ಲ.ಕಟ್ಟಡ ಸಂಪೂರ್ಣ ನಿರ್ಮಾಣವಾದರೂ ಕಟ್ಟಡದೊಳಗೆ ನೆಹರು ಅವರ ಮೂರ್ತಿ ಇಟ್ಟೆ ಉದ್ಘಾಟನೆಯೂ ಮಾಡಲಾಯಿತು.

ಅಂದಿನಿಂದ ಇಂದಿನವರೆಗೆ ನೆಹರು ಅವರ ಮೂರ್ತಿ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ಇದೆ. ಸಾರ್ವಜನಿಕರ ಆಕರ್ಷಣೆಗೆ ಪ್ರತಿಷ್ಠಾಪಿಸಲಾದ ನೆಹರು ಅವರ ಮೂರ್ತಿ ಈಗ ರೋಗಿಗಳನ್ನು ಆಕರ್ಷಿಸುತ್ತಿದೆ. ನವೆಂಬರ್ ೧೪ ರ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಮಾತ್ರ ಸರಕಾರಿ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಪುತ್ಥಳಿಗೆ ಹಾರವನ್ನು ಹಾಕಿ ನೆಹರು ಅವರ ಹುಟ್ಟುಹಬ್ಬವನ್ನು ಆಚರಿಸುತ್ತಾರೆ.

ಆದರೆ ಅದನ್ನು ಸೂಕ್ತವಾದ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಬೇಕು ಎನ್ನುವ ಮನಸ್ಸು ಮಾತ್ರ ಯಾರಲ್ಲೂ ಇಲ್ಲ ಎಂಬಂತೆ ಕಾಣುತ್ತಿದೆ.ಪುರಸಭೆಯಿಂದ ನಗರಸಭೆಯಾದರೂ ಇಲ್ಲಿನ ಅಧಿಕಾರಿಗಳು ನೆಹರು ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಮುಂದಾಗದಿರುವುದೇ ದೊಡ್ಡ ದುರಂತ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.ಇನ್ನಾದರೂ ಇದು ಕಾರ್ಯರೂಪಕ್ಕೆ ಬರುವುದೇ ಎಂದು ಕಾದು ನೋಡಬೇಕಷ್ಟೇ.

ರಸ್ತೆ ಅಗಲೀಕರಣವಾಗಿ ಸುಮಾರು ೮ ವರ್ಷಗಳಾಗಿವೆ.ಅಂದು ವಿವಿಧ ವೃತ್ತಗಳಲ್ಲಿ ತೆರವು ಮಾಡಿದ ಗಾಂಧೀಜಿ, ಲಾಲಬಹಾದ್ದೂರ ಶಾಸ್ತ್ರಿ ಅವರ ಮೂರ್ತಿಯನ್ನು ಬಟ್ಟೆ ಕಟ್ಟಿ ನಗರಸಭೆಯ ಕೋಣೆಯೊಂದರಲ್ಲಿ ಇಡಲಾಗಿದೆ.ಈ ಎಲ್ಲಾ ಮೂತಿಗಳ ಜತೆಗೆ ನೆಹರು ಅವರ ಮೂರ್ತಿಯನ್ನು ಸೂಕ್ತ ಸ್ಥಳ ಆಯ್ಕೆ ಮಾಡಿ ಪ್ರತಿಷ್ಠಾಪಿಸಲು ಮುಂದಾಗಬೇಕು- ಲೋಹಿತ್ ಕಟ್ಟಿ ಸಾಮಾಜಿಕ ಚಿಂತಕ.

ನವೆಂಬರ್ ೧೪ ನೆಹರು ಅವರ ಹುಟ್ಟುಹಬ್ಬದ ದಿನದಂದು ಮಾತ್ರ ನೆಹರು ಅವರ ಮೂರ್ತಿ ಮಾಲಾರ್ಪಣೆಗಾಗಿ  ನೆನಪಿಗೆ ಬರುತ್ತದೆ.ಆದರೆ ಅದನ್ನು ಸ್ಥಳಾಂತರಿಸಿ ಸೂಕ್ತ ಸ್ಥಳವನ್ನು ಗುರುತಿಸಿ ಪ್ರತಿಷ್ಠಾಪನೆ ಮಾಡುವಲ್ಲಿ ನಮ್ಮ ಮುಖಂಡರು ಎಡವುತ್ತಿದ್ದಾರೆ.ಅಲ್ಲದೇ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ- ನಾಗಣ್ಣ ರಾಂಪೂರೆ, ರಾಜೇಶ ಯನಗುಂಟಿಕರ್ ಕಾಂಗ್ರೆಸ್ ಮುಖಂಡರು ಶಹಾಬಾದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here