ಮಕ್ಕಳ ದಿನಾಚರಣೆಯೂ..! ಈ ದಿನದ ಪ್ರಾಮುಖ್ಯತೆಯೂ.!!

0
26

# ಕೆ.ಶಿವು.ಲಕ್ಕಣ್ಣವರ

ನವೆಂಬರ್ 14 ಮಕ್ಕಳ ನೆಚ್ಚಿನ ದಿನವಾಗಿದೆ.

Contact Your\'s Advertisement; 9902492681

ಏಕೆಂದರೆ ಪ್ರತಿವರ್ಷ ಈ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನಿಸಿದ ಈ ದಿನವನ್ನು ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಬಗೆಗಿನ ಜಾಗೃತಿ ಮೂಡಿಸುವ ಸಲುವಾಗಿ ಮೀಸಲಿಡಲಾಗಿದೆ.

ಅಂದರೆ, ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮ ದಿನವನ್ನು ಪ್ರತಿವರ್ಷ ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ, ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯೂ ಹೌದು.

ಭಾರತದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಅವರನ್ನು ಮಕ್ಕಳು ಪ್ರೀತಿಯಿಂದ ‘ಚಾಚಾ’ ಎಂದು ಕರೆಯುತ್ತಿದ್ದರು. ಅಂತಹ ಚಾಚಾನನ್ನು ನೆನೆಯುವ ದಿನವೂ ಆಗಿದೆ ಈ ಮಕ್ಕಳ ದಿನಾಚರಣೆಯು..!ಇದೆಲ್ಲವೂ ನಮ್ಮ ಮಕ್ಕಳಿಗೆ ಮತ್ತು ಅಲ್ಲದೇ ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ.

# ಮಕ್ಕಳ ದಿನಾಚರಣೆಯ ಇತಿಹಾಸವೂ–

‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂಬ ಮಾತಿದೆ. ಅದೇ ರೀತಿ ಮಕ್ಕಳನ್ನು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯವೆಂದು ಪರಿಗಣಿಸಲಾಗುತ್ತಿದೆ. ಭಾರತವು 1956 ರಿಂದ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತ ಬಂದಿದೆ.

ಚಾಚಾ ನೆಹರು ಅವರ ಮರಣದ ನಂತರ, ಮಕ್ಕಳೊಂದಿಗಿನ ಅವರ ಬಾಂಧವ್ಯ ಮತ್ತು ಒಲವಿನಿಂದ, ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸುವ ಮತ್ತು ಅವರ ಹಕ್ಕುಗಳಿಗಾಗಿ ಪ್ರತಿಪಾದಿಸುವ ದಿನವೆಂದು ಗುರುತಿಸಲಾಗಿದೆ. ಅಂದಿನಿಂದ ಪ್ರತಿ ವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ..!

# ಮಕ್ಕಳ ದಿನದ ಮಹತ್ವವೂ–

ಮಕ್ಕಳ ದಿನಾಚರಣೆಯ ಗೌರವದ ಹೊರತಾಗಿ, ಮಕ್ಕಳ ಹಕ್ಕುಗಳು, ಕಾಳಜಿ ಮತ್ತು ಶಿಕ್ಷಣದ ಬಗೆಗೆ ಹೇಳುತ್ತದೆ. ಭಾರತದ ಮೊದಲ ಪ್ರಧಾನ ಮಂತ್ರಿ ಆಧುನಿಕ ಭಾರತ ಹೇಗಿರಬೇಕು ಎಂಬುದರ ಬಗೆಗೆ ಸರಿಯಾದ ದೃಷ್ಟಿಯನ್ನು ಹೊಂದಿದ್ದರು. ಜೊತೆಗೆ ತಮ್ಮ ಕನಸುಗಳನ್ನು ಮಕ್ಕಳಿಂದ ನನಸಾಗಿಸಬೇಕು ಎಂದು ಬಯಸಿದವರು ಜವಾಹರಲಾಲ್ ನೆಹರು ಅವರು.

ಹಾಗಂತ, ಮಕ್ಕಳ ದಿನಾಚರಣೆಯ ಸಂಭ್ರಮದ ನಡುವೆ ಚಾಚಾ ಜವಾಹರಲಾಲ್ ನೆಹರು ಅವರ ಸಂದೇಶವನ್ನು ನಾವು ಮರೆಯಬಾರದು.

ಅದು ಏನೆಂದರೆ, ಮಕ್ಕಳಿಗೆ ಅವರ ಬೆಳವಣಿಗೆಗೆ ಸುರಕ್ಷಿತ ಮತ್ತು ಪ್ರೀತಿಯ ಪರಿಸರ ಇರಬೇಕು. ಅದಲ್ಲದೇ ಅವರಿಗೆ ಸಾಕಷ್ಟು ಮತ್ತು ಸಮಾನ ಅವಕಾಶಗಳನ್ನು ಪೂರೈಸಿ ಅವರಿಂದ ದೇಶದ ಪ್ರಗತಿಗೆ ಕೊಡುಗೆ ಪಡೆಯಬಹುದು.

ಈ ದಿನವು ನಮ್ಮಲ್ಲಿನ ಪ್ರತಿಯೊಬ್ಬರಿಗೂ ಮಕ್ಕಳ ಕಲ್ಯಾಣದ ಬಗೆಗಿನ ನಮ್ಮ ಬದ್ದತೆಯನ್ನು ಪುನರ್ ನವೀಕರಿಸಲು ನೆನಪು ಮಾಡಿ, ಮಕ್ಕಳಿಗೆ ನೆಹರುವಿನ ಆದರ್ಶದಂತೆಯೇ ಮತ್ತು ಅವರ ಮಾದರಿಯಲ್ಲಿ ಬದುಕಲು ಕಲಿಸಬೇಕು..!

# ಮಕ್ಕಳ ನೆಚ್ಚಿನ ‘ಚಾಚಾ ನೆಹರು’ ಅವರೂ–

ಪಂಡಿತ್ ಜವಾಹರಲಾಲ್ ನೆಹರು ಮಕ್ಕಳ ಶಿಕ್ಷಣವನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತಿದ್ದವರು. ಸ್ವತಂತ್ರ ಭಾರತವು ತನ್ನ ಮಕ್ಕಳ ಏಳಿಗೆಯೊಂದಿಗೇ ಮಾತ್ರ ಸಮೃದ್ಧಿಯಾಗಬಲ್ಲದು ಎಂದು ನಂಬಿದ್ದರು. ಮಕ್ಕಳು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ ಎಂಬ ದೃಢವಾದ ನಂಬಿಕೆಯನ್ನು ಹೊಂದಿದ್ದವರು.

“ಇಂದಿನ ಮಕ್ಕಳು ನಾಳಿನ ಭಾರತವನ್ನು ಕಟ್ಟುತ್ತಾರೆ. ನಾವು ಅವರನ್ನು ಬೆಳೆಸುವ ವಿಧಾನವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ” ಎಂದೂ ಚಾಚಾ ಜವಾಹರಲಾಲ್ ನೆಹರು ಹೇಳುತ್ತಿದ್ದರು..!

ಹಾಗೆಯೇ ಮಕ್ಕಳನ್ನು ನಾವು ಒಂದು ಶಕ್ತಿಗಾಗಿ ಉಳಿಸಿ ಮತ್ತು ಬೆಳೆಸುವುದು ಅಲ್ಲದೇ ಭಾರತವನ್ನು ವಿಶ್ವಕ್ಕೇ ಮಾದರಿಯಾಗಿಸುವುದು ನಮ್ಮ ಮತ್ತು ನಿಮ್ಮೆಲ್ಲರ ಆದ್ಯ ಕರ್ತವವೂ ಆಗಿದೆ. ಆಗಲೇ ಪಂ.ಜವಾಹರಲಾಲ್ ನೆಹರು ಅವರ ಕನಸು ನನಸಾಗುವುದಲ್ಲದೇ ಭಾರತವೂ ವಿಶ್ವದಲ್ಲಿ ಮಾದರಿ ರಾಷ್ಟ್ರವಾಗುವುದು ಎಂಬುದರಲ್ಲಿ ಎರಡು ಮಾತಿಲ್ಲ ಅಂತ ಹೇಳುತ್ತಾ‌ ಈ ಲೇಖನವನ್ನು ಮುಗಿಸುತ್ತೇನೆ..!

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here