ಕಲಬುರಗಿ: ಪೂಜ್ಯ ಶ್ರೀ ಡಾ.ಶರಣಬಸ ವಪ್ಪ ಅಪ್ಪ ಅವರು 87 ವ ರ್ಷ ಪೂರೈಸಿದ ಸಂದರ್ಭದ ಲ್ಲಿ ನಾಲ್ಕೈದು ದಿವಸದಿಂದ ಸಂಸ್ಥೆಯ ಶಾಲಾ,ಕಾಲೇಜು ಗಳಲ್ಲಿ ಹುಟ್ಟು ಹಬ್ಬದ ಅಂಗ ವಾಗಿ ವಿಚಾರ ಸಂಕಿರಣ,ಕವಿ ಗೋಷ್ಠಿ,ಸಂಗೀತ ಕಾರ್ಯಕ್ರ ಮಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ.
ಇಂದು ಮಹಾ ದಾಸೋಹ ಮಹಾ ಮನೆಯ ಲ್ಲಿ ಅಪ್ಪ ಅವರ ದಿವ್ಯ ಸಾನಿಧ್ಯದಲ್ಲಿ, ಮಾತೋಶ್ರೀ ಡಾ. ದಾಕ್ಷಾಯಣಿ ಅಪ್ಪಾ ಅವರ ಅಧ್ಯಕ್ಷತೆಯಲ್ಲಿ ಶ್ರೀ ಬಸವರಾಜ ದೇಶಮುಖ ಇವರ ಉಪಸ್ಥಿತಿಯಲ್ಲಿ,ಸು ಮಾರು ಕವಿಗಳಾದ ಡಾ.ಎನ್.ಎಸ್. ಪಾಟೀಲ, ಡಾ. ಸಾರಿಕಾದೇವಿ ಕಾಳಗಿ, ಡಾ. ಶಿವರಾಜ ಶಾಸ್ತ್ರಿ ಹೇರೂರ, ಡಾ.ಸೋಮಶಂಕ್ರಯ ಮಠ, ಡಾ. ಚಿದಾನಂದ ಚಿಕ್ಕಮಠ, ಗೌರಿಶಂಕರ ಚೆಕ್ಕಿ, ಪ್ರೊ. ನಾನಾಸಾಹೇಬ ಹಚಡದ, ಶ್ರೀ ಸಿದ್ಧಲಿಂಗಪ್ಪ ಬಾಗಲಕೋಟ, ನಿಂಗಪ್ಪ ಹಿರೇಕುರಬರ ಶ್ರೀಮತಿ ಉಮಾ (ಟೀಕಾಬಾಯಿ) ಮಾಲಿ ಪಾ ಟೀಲ, ಶ್ರೀಮತಿ ಜಗದೇವಿ ಕೋಳಕುಂದ, ಶ್ರೀಶೈಲ ಮದಾನೆ, ಪ್ರಸಾದ.ಜಿ.ಕೆ. ಶ್ರೀದೇವಿ ಪಾಟೀಲ. ಕವಿಗಳೆಲ್ಲರೂ ಅಪ್ಪ ಅವರ ಕುರಿತು ಕವನ ವಾಚನ ಮಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಅಮ್ಮರವರು ಅಪ್ಪಾ ಅವರ ಕುರಿತು ಸ್ವರಚಿತ ಕವನವನ್ನು ಬಹು ಸುಂದರವಾಗಿ ಹೇಳಿದರು. ನಂತರ ಅಪ್ಪಾ ಅವರು ನೂರುಕಾಲ ಬದುಕಿ ಬಾಳಲಿ ಎಂದು ಹೂಗುಚ್ಛ ನೀಡಿ ನಮಸ್ಕಾರ ಮಾಡಿದರು.