ಬಸ್ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಮನವಿ

0
14

ಶಹಾಬಾದ:ತಾಲೂಕಿನ ಹೊನಗುಂಟಾ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಶನಿವಾರ ಎಐಡಿಎಸ್‌ಓ ಸಂಘಟನೆ ವತಿಯಿಂದ ಪ್ರತಿಭಟಿಸಿ ಬಸ್ ನಿಲ್ದಾಣದ ನಿಯಂತ್ರಕರಿಗೆ ಮನವಿ ಪತ್ರ ಸಲ್ಲಿಸಿದರು.

ಹೊನಗುಂಟ ಗ್ರಾಮದಿಂದ ಹಲವಾರು ವಿದ್ಯಾರ್ಥಿಗಳು ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಹಾಗೂ ಸಾiನ್ಯ ಜನರು ತಮ್ಮ ದಿನ ನಿತ್ಯದ ಕೆಲಸಕ್ಕಾಗಿ ಬರುವುದು ಶಹಾಬಾದ ನಗರಕ್ಕೆ ಬರುತ್ತಾರೆ. ಲಾಕ್ ಡೌನ್ ಮುಗಿದ ನಂತರ ಶಾಲಾ-ಕಾಲೇಜುಗಳು ಪ್ರಾರಂಭವಾಗಿರುವುದು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬೇಕಾದ ಅವಶ್ಯಕತೆ ಇದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಹಾಗೂ ನಗರದ ಬಹುತೇಕ ವಿದ್ಯಾರ್ಥಿಗಳು ಬಸ್ ಮೂಲಕ ಪ್ರಯಣಿಸುತ್ತಾರೆ.

Contact Your\'s Advertisement; 9902492681

ಹೀಗಾಗಿ ವಿದ್ಯಾರ್ಥಿಗಳು ಸರಿಯಾಗಿ ಶೈಕ್ಷಣಿಕ ವಿದ್ಯಾಭ್ಯಾಸ ಮಾಡಬೇಕಾದರೇ ಅವರಿಗೆ ಸಾರಿಗೆ ಅನುಕೂಲ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮದ ವಿದ್ಯಾರ್ಥಿಗಳು ಅಲ್ಲಿಯೇ ಪ್ರೌಢ ಶಿಕ್ಷಣ ಮುಗಿಸಿಕೊಂಡು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಶಹಾಬಾದ, ಜೇವರ್ಗಿ,ಚಿತ್ತಾಪೂರ, ಕಲಬುರಗಿ ನಗರಕ್ಕೆ ಹಲವಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಅವರ ಬಳಿ ಬಸ್ ಪಾಸ್ ಇದ್ದರು ಕೂಡ ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ಅವರು ಖಾಸಗಿ ವಾಹನಗಳಿಗೆ ದಿನಾಲೂ ಹಣ ಕೊಟ್ಟು ಬರುತ್ತಿದ್ದಾರೆ. ಇದರಿಂದ ಬಹಳ ತೊಂದರೆಯಾಗುತ್ತಿದೆಯಲ್ಲದೇ ವಿದ್ಯಾಭ್ಯಾಸಕ್ಕೂ ಹೊಡೆತ ಬೀಳುತ್ತಿದೆ.

ದಿನಾಲೂ ಬಸ್ ಬರುತ್ತಿದ್ದರು ವಿದ್ಯಾರ್ಥಿಗಳಿಗೆ ಅನುಕೂಲವಾಗಿಲ್ಲ. ಬೆಳಗ್ಗೆ ೬:೦೦ ಗಂಟೆಗೆ ಒಂದು ಬಸ್ ಊರಿಂದ ಬಂದರೆ ಮತ್ತೆ ೧೦:೦೦ ಗಂಟೆವರೆಗೂ ಯಾವ ಬಸ್ ಇಲ್ಲ. ಮತ್ತೆ ಮಧ್ಯಾಹ್ನ ೩:೦೦ ಗಂಟೆಗೆ ಶಹಾಬಾದದಿಂದ ಬಿಡುತ್ತೆ ವಾಪಸ್ ಹೊಗುವಾಗಲು ಬಸ್ ಸಿಗದ ಅನಿರ್ವಾವಾಗಿ ಖಾಸಗಿ ವಾಹನಗಳಿಗೆ ಹೋಗುವ ಪರಿಸ್ಥಿತಿ ಬಂದಿದೆ. ಊರಿನ ನಾಗರಿಕರು ವಿದ್ಯಾರ್ಥಿಗಳು ಬಸ್ ಸಮಸ್ಯ ಬಗ್ಗೆ ಹಲಾವಾರೂ ಸಲ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಆದಕಾರಣ ತಾವೂಗಳು ಇದರ ಬಗ್ಗೆ ಗಮನವಹಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಬಸ್ ನಿಯಂತ್ರಣಾಧಿಕಾರಿಗಳಿಗೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ತುಳಜರಾಮ.ಎನ್.ಕೆ, ನಗರ ಅಧ್ಯಕ್ಷ ಕಿರಣ್.ಜಿ. ಮಾನೆ, ಕಾರ್ಯದರ್ಶಿ ಅಜಯ್.ಎ.ಜಿ, ಉಪಾಧ್ಯಕ್ಷ ದೇವರಾಜ ಹೊನಗುಂಟ, ವಿದ್ಯಾರ್ಥಿಗಳಾದ ಸಿದ್ದು ಕೊಲೆ, ಭಾಗ್ಯಶ್, ಮೌನೇಶ್,ರಾಕೇಶ್, ಕೃಷ್ಣ, ಮಲ್ಲು, ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here