ಕಲಬುರಗಿ: ಯಶಸ್ಸು ಮುಟ್ಟಲು ಎಲ್ಲಿಯೂ ಸುಲಭದ ಲಿಫ್ಟ್ ವ್ಯವಸ್ಥೆ ಇಲ್ಲ, ಅದನ್ನು ತಲುಪಲು ಪ್ರತಿಯೊಬ್ಬರು ಶ್ರಮದ ಮೆಟ್ಟಿಲು ಹತ್ತಬೇಕೆಂದು ಕಲಬುರಗಿ ಜಿಲಾೢ ಕಾರ್ಮಿಕ ಅಧಿಕಾರಿಗಳಾದ ರಮೇಶ ಸುಂಬಡ ಹೇಳಿದರು.
ನಗರದ ಶೇಕ್ ರೋಜದ ಆಶ್ರಯ ಕಾಲೊನಿಯ ಸರಕಾರಿ ಶಾಲೆಯ ಆವರಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ(ರಿ).ಎ ಐ ಟಿ ಯು ಸಿ ಕಲಬುರಗಿ ಜಿಲ್ಲಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸುರಕ್ಷಾ ಕಿಟ್ಟ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಿಟ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಕಾರ್ಮಿಕರು ಶ್ರಮದ ಹಾದಿಯಲ್ಲಿ ಯಾವತ್ತೂ ಮೌನವಾಗಿರಬೇಕು ಅಂದಾಗ ಮಾತ್ರ ಯಶಸ್ಸು ನಿಮ್ಮದಾಗುತ್ತದೆ.
ಕಾರ್ಮಿಕರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವಾರೂ ಯೋಜನೆಗಳ ಸದುಪಯೋಗ ಪಡೆದು ಕೊಳ್ಳಬೇಕೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಘಟನೆಯ ಅಧ್ಯಕ್ಷರಾದ ಪ್ರಭುದೇವ ಯಳಸಂಗಿಯವರು ಮಾತನಾಡುತ್ತಾ ಎಲ್ಲಾ ಕಾರ್ಮಿಕರು ಒಂದಾಗಿ ಹೋರಾಟ ಮಾಡುವುದರೊಂದಿಗೆ ನಮ್ಮ ಹಕ್ಕು ಪಡೆದುಕೊಳ್ಳಬೇಕೆಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಎಐಟಿಯುಸಿ ಅಧ್ಯಕ್ಷರಾದ ಎಚ್ ಎಸ್ ಪತಕಿ, ಕಾರ್ಯದರ್ಶಿಯಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ,ಕಲ್ಯಾಣಿ ತುಕ್ಕಾಣಿ, ಸುವರ್ಣ ಆಗಮಿಸಿದರು.
ಮಹಿಳಾ ಮುಖಂಡರಾದ, ಶಿವಲಿಂಗಮ್ಮ ಲೇಂಗಟಿಕರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವೀರಣ್ಣ ಲೆ೦ಗಟಿಕರ, ರುಕ್ಮಣ್ಣ ವಾಡೇಕರ್,ಅಮರ್ ಡಿ. ಸಾಗರ್’, ಪವನ ಸತೀಶ, ಶಿವಮ್ಮ , ತಾರಾಬಾಯಿ, ಶರಣಮ್ಮ, ಸಾಬಮ್ಮ,ಹಲವಾರು ಜನ ಭಾಗವಹಿಸಿದರು.