ಆನೆಯ ಜರಿದು ಕೋಣವನೇರಿದರೆ ಆರೇನು ಮಾಡುವರು?
ಪಾಯಸವ ಜರಿದು ಮಧ್ಯವ ಕುಡಿದರೆ ಆರೇನು ಮಾಡುವರು?
ಸುಗಂಧವ ಜರಿದು ಕೆಸರೂ ಪೂಸಿಕೊಂಡರೆ ಆರೇನು ಮಾಡುವರು?
ಅರಿದರಿದು ಗುಹೇಶ್ವರನ ಶರಣರೊಡನೆ ವಾದಿಸಿದಡೆ ಆರೇನು ಮಾಡುವರು?
-ಅಲ್ಲಮಪ್ರಭುದೇವರು
ಬದುಕು ಒಂದು ಅಪರೂಪದ ಅವಕಾಶ ವರುಷ-ವರುಷಗಳ ಕಾಲ ನೋಡುವುದು ಕೇಳುವುದು ಮಾಡುವುದು ಸಂತೋಷ ಪಡುವುದು. ಇದೆಲ್ಲ ಬೇಡಿ ಬಂದುದಲ್ಲ. ಸಹಜವಾಗಿ ಬಂದಿದ್ದೇವೆ. ಎಂಥ ಸೌಂದರ್ಯ. ಎಂಥ ಅದ್ಭುತ ಆವಿಷ್ಕಾರ. ಇದೆಲ್ಲ ನೋಡಿ ಸಂತೋಷ ಪಡುವುದೇ ಜೀವನ. ನಾವು ಬಂದಾಗ ನೀರು, ಬೆಳಕು, ಹಸಿರು ಇಲ್ಲದಿರೆ ಹೇಗೆ? ಇದೆಲ್ಲ ಇರುವುದೇ ಸೌಂದರ್ಯ. ವಸುಧಾ ಪದದಲ್ಲಿ ವಸು ಸಂಪತ್ತು, ಧಾ ಎಂದರೆ ಧರಿಸಿದ್ದು. ಅದುವೇ ಭೂಮಂಡಲ. ಸಂಪತ್ತು ಧರಿಸಿಕೊಂಡಿದೆ. ಶಬ್ದ, ರೂಪ, ರಸ, ಗಂಧ, ಸ್ಪರ್ಶ ಸಂಪತ್ತು. ಇದೆಲ್ಲ ವೈಭವ. ಇಂಥ ಭೂಮಂಡಲದಲ್ಲಿ ನಾವು ಹುಟ್ಟಿದ್ದು, ಕಣ್ಣು ತೆರೆದದ್ದು ಪವಿತ್ರ. ಸಂತೋಷವೇ ಸಂಪತ್ತು. ಆನಂದ ಇಲ್ಲವಾದರೆ ಯಾವ ಸಂಪತ್ತು ಇದ್ದರೇನು? ಸಂತೋಷ ಇದ್ದುದ್ದೇ ಅಪ್ಯಾಯಮಾನ.
ಅನುಭವಿಸುವುದೇ ಆನಂದ. ಆಗ ನಾವು ಸುದೈವಿಗಳು. ಹಕ್ಕಿಗಳ ಹಾಡು, ನೀರು, ಬೆಳಕು, ಹಸಿರು ತುಂಬಿದ ಭೂಮಂಡಲ. ಇದೇ ಅಭ್ಯುದಯ. ಜೀವನದಲ್ಲಿ ಅಭ್ಯುದಯ ಮತ್ತು ನಿಶ್ರೇಯಸ್ಸು ಎರಡೂ ಚೆನ್ನಾಗಿರಬೇಕು. ಯಾವುದಕ್ಕೂ ಕೊರತೆ ಇರಬಾರದು. ನೋಡುವುದು, ಕೇಳುವುದು, ಉಣ್ಣುವುದಕ್ಕೆ ಕೊರತೆ ಇಲ್ಲ. ಇದುವೇ ಅಭ್ಯುದಯ. ಮನೆ, ಪ್ರೀತಿಸುವ ನಾಲ್ಕು ಜನ, ಹೊರಗೆ ಹಚ್ಚು ಹಸಿರು, ಆಕಾಶದಲ್ಲಿ ಸೂರ್ಯ-ಚಂದ್ರ-ನಕ್ಷತ್ರಗಳು-ಮೇಘಗಳು ಎಲ್ಲವೂ ಅದ್ಭುತ. ಸೃಷ್ಟಿಯ ಅದ್ಭುತವೇ ಸ್ವರ್ಗ. ಸಾಗರದಿಂದ ಮೋಡ, ಮೋಡದಿಂದ ಮಳೆ ಇದುವೇ ಅದ್ಭುತ miಡಿಚಿಛಿಟe. ಇದೆಲ್ಲ ಸಂತೋಷದಿಂದ ಅನುಭವಿಸುವುದು. ದೇಹ, ಕೈ, ಮನಸ್ಸು ಸರಿಯಾಗಿ ಬಳಸಿದವರ ಬದುಕು ಸ್ವರ್ಗ. ಕ್ಷಣ ಕ್ಷಣ ಸಂತೋಷಪಡಬೇಕು.
ಅತ್ಯಂತ ಬೆಲೆ ಬಾಳುವ ಅನ್ನ, ನೀರು, ಗಾಳಿ, ಬೆಳಕು ಇವೇ ನಾಲ್ಕು ವಸ್ತುಗಳೇ ಅದ್ಭುತ ಸಂಪತ್ತು ಇವುಗಳಲ್ಲಿ ಒಂದಿಲ್ಲದಿದ್ದರೂ ಜೀವನದ ಜ್ಯೋತಿ ನಂದುತ್ತದೆ. ವಿದೇಶದ ಮೈದಾಸ ಎಂಬುವವನಿಗೆ ಬಂಗಾರ ಎಂದರೆ ಬಹಳ ಪ್ರಿಯ. ಎಲ್ಲರಿಗೂ ಬಂಗಾರ ಇಷ್ಟ. ಎಲ್ಲೆಲ್ಲಿ ಬಂಗಾರ ಸಿಗುತ್ತದೋ ಅದೆಲ್ಲವೂ ಸಂಗ್ರಹಿಸಿದ. ಆತನ ಕನಸಿನಲ್ಲಿ ಲಕ್ಷ್ಮಿ ಬಂದಳು. ನಾ ಮುಟ್ಟಿದ್ದೆಲ್ಲ ಬಂಗಾರ ಆಗಬೇಕು ಎಂದು ಲಕ್ಷ್ಮಿಗೆ ಬೇಡಿಕೊಂಡು ಮುಂದೆ ಮುಟ್ಟಿದ್ದೆಲ್ಲ ಬಂಗಾರ ಆಗುತ್ತ ನಡೆಯಿತು. ೧೨ ಗಂಟೆ ನಂತರ ಹಸಿವು ಆಯಿತು. ಮಗಳು ಪ್ರೀತಿಯಿಂದ ಅನ್ನ ತಂದಳು. ಅನ್ನ, ನೀರು, ಹಾಲು, ಹಣ್ಣು ಎಲ್ಲವೂ ಮುಟ್ಟಿದ. ಬಂಗಾರ ಆಯಿತು. ಹಸಿವು ನೀಗಲು ಎರಡು ರೊಟ್ಟಿ ಸಾಕು.
ಬಂಗಾರ ಬೇಡ ಅಂದ. ಒಂದು ತುತ್ತು ಅನ್ನಕ್ಕೆ ಬೆಟ್ಟದಷ್ಟು ಬಂಗಾರ ಸಮ ಇಲ್ಲ. ಮುಖದ ಮೇಲೆ ಸಂತೋಷ ಇರುವುದೇ ಅನ್ನ ನೀರಿನಿಂದ ಇದೆ. ಅನ್ನವೇ ದೇವರು ನೀರೇ ದೇವರು. ಅವು ಸೇವಿಸುವ ನೀನೂ ದೇವರು. ಯಾರು ಬಸವರಿಲ್ಲ. ಸಂಪತ್ತು ಇಲ್ಲದವರು ಇರಬಹುದು. ಅನ್ನ ನೀರು ಇಲ್ಲದವರು ಇರಲು ಸಾಧ್ಯವಿಲ್ಲ. ಅನ್ನ, ನೀರು ಇರುವ ನಾವೆಲ್ಲ ಧನ್ಯರು. ಅಮೇರಿಕಾ, ಇಂಗ್ಲೆಂಡ್, ಯುರೋಪ ಮುಖ್ಯವಲ್ಲ. ಅಲ್ಲಿಯ ಡಾಲರ್, ಪೌಂಡ್, ಯುರೊ ಎಲ್ಲಿದ್ದರೇನು? ಅನ್ನ, ನೀರು ಬೇಕು. ಅನ್ನ, ನೀರು ಇರುವ ಮನೆಯಲ್ಲಿ ಲಕ್ಷ್ಮಿ ಇರುವಳು. ಅರಮನೆಯಲ್ಲಿ ಅಡಿಗೆ ಮನೆ ಮುಚ್ಚಿದರೆ ಇನ್ನೇನಿದೆ.
A little butter & bread ಮುಖ್ಯ. ಶ್ರೀಮಂತ, ಬಸವ ಯಾರೇ ಇರಲಿ ಎಲ್ಲರಿಗೂ ಅನ್ನ, ನೀರು ಬೇಕು. ಇದೇ ನಿಜವಾದ ಸಂಪತ್ತು. ನೋಟು ಅಪಮೌಲ್ಯವಾದಾಗ ನೋಟು ಸುಟ್ಟ ಮೇಲೆ ಇವನಿಗೆ ಸಂತೋಷ ಸಿಕ್ಕಿದ್ದು ನೋಡಿದ್ದೇವೆ. ಸಂಪತ್ತು ತಿಜೋರಿಯಲ್ಲಿಲ್ಲ ಅಡಿಗೆ ಮನೆಯಲ್ಲಿ ಇದೆ. ಒಂದು ಕ್ಷಣ ಗಾಳಿ ಇಲ್ಲದಿರೆ ಬದುಕಲು ಸಾಧ್ಯವಿಲ್ಲ. ನೀರು ಅನ್ನ ನಂತರದಲ್ಲಿ ಬೇಕು. ಗಾಳಿ, ನೀರು, ಅನ್ನ ಬದುಕಲು ಬೇಕು. ಭಗವಂತನೇ ನೀನು ಗಾಳಿ, ನೀರು, ಅನ್ನವಾಗಿ ಬಂದೆ. ಅಲ್ಲಿ ನಿನ್ನ ದರ್ಶನ ಮಾಡಿಕೊಂಡೆ. ಅದೇ ದೇವದರ್ಶನ.
ಬೆಳಕಾಗಿ ಬಂದೆ. ಅಲ್ಲಿ ದೇವದರ್ಶನ. ಇದೇ ಅಭ್ಯುದಯ. ಇದನ್ನು ಸಾಧಿಸಬೇಕು. ಮನಸ್ಸು ಅರಳಬೇಕು. ಕಣ್ಣು ನೋಡಬೇಕು. ಕೈ ಮಾಡಬೇಕು. ಕಾಲು ನಡೆಯಬೇಕು. ನೂರು ವರುಷ ಆಯುಷ್ಯ ಇರಲು ಎಲ್ಲಕ್ಕೂ ಶಕ್ತಿ ಬೇಕು. ಯಾವ ಪದವಿ, ಮನೆ ಇದ್ದರೇನು. ಅನ್ನ, ನೀರು, ಗಾಳಿ, ಬೆಳಕು ಇರಬೇಕು. ಆಫೀಸ್ ವೈಭವಕ್ಕಿಂತ ಅಡಿಗೆ ಮನೆಯ ವೈಭವ ಹೆಚ್ಚು. ಬ್ಯಾಂಕ್‌ನ ಸಂಪತ್ತುಗಿಂತ ಅಡಿಗೆ ಮನೆಯ ಸಂಪತ್ತು ಹೆಚ್ಚು. ಜಗತ್ತನ್ನು ತುಂಬಿದ ಸಂಪತ್ತು ಅರಿಯಬೇಕು. ಅಭ್ಯುದಯ ನಿಶ್ರೇಯಸ್ಸು ಸಾಧಿಸಬೇಕು. ಮೈದಾಸ ಎಲ್ಲವೂ ಹೋಗಲಿ. ಅನ್ನ ಉಳಿಯಲಿ ಎಂದು ಅಡಿಗೆ ಮನೆಯೇ ದೇವಾಲಯ.
ಅನ್ನ ತಯಾರಿಸುವವರೇ ದೇವರು. ಗಾಳಿ, ನೀರು, ಅನ್ನ, ಬೆಳಕು, ಸಹವಾಸಿಗಳ ಪ್ರೀತಿ, ಆರೋಗ್ಯ ಎಲ್ಲವೂ ಸಂಪತ್ತು. ಇದುವೇ ಅಭ್ಯುದಯ. ಅನ್ನ, ಹಾಲು, ಹಣ್ಣು ನಮ್ಮ ಮುಖ ಅರಳಿಸುತ್ತದೆ. ಮೈಯಲ್ಲಿ ಶಕ್ತಿ ತುಂಬುತ್ತದೆ. ಇಷ್ಟೆಲ್ಲ ಕೊಟ್ಟ ದೇವರಿಗೆ ಪ್ರಾರ್ಥಿಸಿ ಉಣ್ಣಬೇಕು. ಅನ್ನ, ನೀರು, ದೇವದರ್ಶನ, ಅದುವೇ ಅಮೃತ. ಮಧ್ಯವ ಕುಡಿದರೆ ಆರೇನು ಮಾಡುವರು ನಿಶ್ರೇಯಸ್ಸು. ಶಾಂತಿ ಮನಸ್ಸು ಪ್ರಶಾಂತ ಮನಸ್ಸು ಮನಸ್ಸಿನಲ್ಲಿ ಕೋಪ, ಗರ್ವ, ಬಿಟ್ಟು ಸಮಾಧಾನ ತುಂಬಬೇಕು. ಒಳಗೆ ಶಾಂತಿ ಹೊರಗೆ ಸಮೃದ್ಧ ಇದುವೇ ಧರ್ಮ ಜೀವನ.