ಬುತ್ತಿಲಿಂಗೇಶ್ವರ ದೇವಾಲಯದಲ್ಲಿ ಲಿಂಗಸ್ಥಾಪನೆ: ಆಧ್ಯಾತ್ಮಿಕ ಪ್ರವಚನ

0
128

ಶಹಾಬಾದ: ಮಹಿಳೆ ಮತ್ತು ಪುರುಷರು ಎಂಬ ಭೇದ ಭಾವ ಬದಿಗೊತ್ತಿ ಪ್ರತಿಯೊಬ್ಬರು ಕಾಯಕ ಮಾಡಿ, ಜೀವನ ನಡೆಸಬೇಕು ಎನ್ನುವ ಬಸವಣ್ಣನ ಕಾಯಕ ಮತ್ತು ದಾಸೋಹದ ಪರಿಕಲ್ಪನೆ ಜಗತ್ತಿಗೆ ಮಾದರಿ ಎಂದು ಶರಣ ಚಿಂತಕ ಗಿರಿಮಲ್ಲಪ್ಪ ವಳಸಂಗ ಬಣ್ಣಿಸಿದರು.

ಅವರು ಸೋಮವಾರ ಭಂಕೂರ ಗ್ರಾಮದ ಬಸವ ಸಮಿತಿಯಲ್ಲಿ ಬುತ್ತಿಲಿಂಗೇಶ್ವರ ದೇವಾಲಯದ ಲಿಂಗಸ್ಥಾಪನೆ ನಿಮಿತ್ತ ಆಯೋಜಿಸಲಾದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

12 ನೇ ಶತಮಾನದಲ್ಲಿ ತಾಂಡವವಾಡುತ್ತಿದ್ದ ಸಾಮಾಜಿಕ ಅಸಮಾನತೆ, ಮೌಢ್ಯ, ಕಂದಾಚಾರಗಳನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಬಸವಣ್ಣ ಸೇರಿದಂತೆ ಶರಣರು ಮಾಡಿದ ಕ್ರಾಂತಿ ಅದ್ಬುತ. , ಬಸವಾದಿ ಶರಣರ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಅದು ಸರ್ವರಿಗೂ ಒಳ್ಳೆಯ ಮಾರ್ಗ ತೋರಿಸುವಂತಹ ದೊಡ್ಡ ಶಕ್ತಿ ಹೊಂದಿದೆ.ಪ್ರತಿಯೊಬ್ಬರು ತಾವು ದುಡಿದು ಇತರರಿಗೂ ನೀಡಬೇಕು ಎಂಬುದು ಬಸವಣ್ಣನ ಕನಸಾಗಿತ್ತು. ಬಸವಣ್ಣನವರು 12 ನೇ ಶತಮಾನದಲ್ಲೇ ದಾಸೋಹ ಮತ್ತು ಕಾಯಕದ ಪರಿಕಲ್ಪನೆಯ ಕುರಿತು ಜಾಗೃತಿ ಮೂಡಿಸಿದ್ದರು ಎಂದರು.

ಶಹಾಬಾದ ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ ಮಾತನಾಡಿ, 12 ನೇ ಶತಮಾನದಲ್ಲೇ ಸಾಮಾಜಿಕ ಅಸಮಾನತೆ, ಜಾತೀಯತೆ ಹೋಗಲಾಡಿಸಲು ಮುಂದಾದ ಒಬ್ಬ ಮಹಾನ್ ಮಾನವತಾವಾದಿ.ಅವರ ಪ್ರತಿಮೆಯನ್ನು ನಗರದ ಬಸವೇಶ್ವರ ವೃತ್ತದಲ್ಲಿ ಅಶ್ವಾರೂಢ ಬಸವಣ್ಣನವರ ಪ್ರತಿಮೆ ಸ್ಥಾಪನೆ ಮಾಡಲು ಸಮಾಜದ ವತಿಯಿಂದ ಎಲ್ಲಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ.ಮುಂದಿನ ಬಸವ ಜಯಂತಿಯಂದು ಉದ್ಘಾಟನೆ ಮಾಡಲು ನಿರ್ಧರಿಸಿದ್ದೆವೆ ಎಂದು ಹೇಳಿದರು.

ಬಸವ ಸಮಿತಿ ಅಧ್ಯಕ್ಷ ಅಮೃತ ಮಾನಕರ ಬಸವ ಸಮಿತಿ ನಡೆದು ಬಂದ ದಾರಿಯನ್ನು ವಿವರಿಸಿದರು.
ಅತಿಥಿಗಳಾಗಿ ಶಂಕರಗೌಡ ಶಂಕರವಾಡಿ, ಸುನೀಲ ಭಗತ್ ವೇದಿಕೆಯ ಮೇಲಿದ್ದರು.

ಶರಣ ನೀಲಕಂಠ ಮುದೋಳಕರ್ ನಿರೂಪಿಸಿದರು, ವಿಜಯಕುಮಾರ [ಪಾರಾ ಪ್ರಾರ್ಥಿಸಿದರು, ಶರಣಬಸಪ್ಪ ನಾಗನಳ್ಳಿ ಸ್ವಾಗತಿಸಿದರು, ಅಮರಪ್ಪ ಹೀರಾಳ ವಂದಿಸಿದರು.
ರೇವಣಸಿದ್ದಪ್ಪ ಮುಸ್ತಾರಿ, ಶರಣಗೌಡ ಪಾಟೀಲ, ಚನ್ನಬಸಪ್ಪ ಕೊಲ್ಲೂರ್, ಶರಣು ಟೆಂಗಳಿ,ಚಂದ್ರಕಾಂತ ಅಲಮಾ, ಹಣಮಂತರಾವ ದೇಸಾಯಿ, ಕುಪೇಂದ್ರ ತುಪ್ಪದ,ಶಿವರಾಜ ಹಡಪದ,ಗುರಲಿಂಗಪ್ಪ ಪಾಟೀಲ, ಶಾಂತಪ್ಪ ಬಸಪಟ್ಟಣ, ಲಕ್ಷ್ಮಣ ಬಾಲಗೊಂಡ, ಹೆಚ್.ವಾಯ್.ರಡ್ಡೇರ್,ಮಲ್ಲಿಕಾರ್ಜುನ ಘಾಲಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here